ಬೇತಮಂಗಲದಲ್ಲಿ ಹಸಿಕರಗ ಉತ್ಸವ ಸಂಪನ್ನ Hasikarag festival

ಬೇತಮಂಗಲದಲ್ಲಿ ಹಸಿಕರಗ ಉತ್ಸವ ಸಂಪನ್ನ Hasikarag festival
ಬೇತಮಂಗಲದಲ್ಲಿ ಹಸಿಕರಗ ಉತ್ಸವ ಸಂಪನ್ನ Hasikarag festival
Published on
ಬೇತಮಂಗಲ: ಕೆಜಿಎ್​ ತಾಲೂಕು ಬೇತಮಂಗಲದ ಶ್ರೀ ಧರ್ಮರಾಯಸ್ವಾಮಿ ದ್ರೌಪದಾಂಬ ದೇವಿಯ ಐತಿಹಾಸಿಕ ಹೂವಿನ ಕರಗ ಮಹೋತ್ಸವ ಅಂಗವಾಗಿ ಮಂಗಳವಾರ ಶ್ರದ್ಧೆ ಭಕ್ತಿಯಿಂದ ವಹ್ನಿಕುಲ ಸಂಪ್ರದಾಯದಂತೆ ಹಸಿಕರಗ ಮಹೋತ್ಸವ ನೆರವೇರಿತು.Hasikarag festival
ಕಳೆದ ನಾಲ್ಕು ದಿನದ ಹಿಂದೆ ಧ್ವಜಾರೋಹಣ ಮೂಲಕ ಪ್ರಾರಂಭವಾಗಿರುವ ಕರಗ ಮಹೋತ್ಸವ ಕಾರ್ಯಗಳಿಗೆ ಹಸಿ ಕರಗ ಅತ್ಯಂತ ಮಹತ್ವದ್ದಾಗಿದೆ. ಇಲ್ಲಿನ ಪಾಲಾರ್​ ನದಿ ತೀರದಲ್ಲಿ ಪೂಜಾ ವಿಧಿವಿಧಾನ ನೆರವೇರಿಸಿದ ನಂತರ ಹಸಿಕರಗಕ್ಕೆ ಚಾಲನೆ ನೀಡಲಾಯಿತು.
ಕರಗ ಹೊರುವ ಪೂಜಾರಿ ಕೃಷ್ಣಮೂರ್ತಿ ಮತ್ತು ಇತರೆ ಇಬ್ಬರು ವಹ್ನಿಕೂಲ ಮುಖ್ಯಸ್ಥರು ಸೇರಿ ತ್ರಿಮೂರ್ತಿಗಳು ಹಸಿಕರಗವನ್ನು ತಮ್ಮ ಕೈಗಳ ಮೇಲೆ ಹೊತ್ತು ಕೊಂಡು ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ಗಂಗಮ್ಮಗುಡಿ ವೃತ್ತದಲ್ಲಿ ಶ್ರೀವಿವೇಕಾನಂದ ಸಂದಿಂದ ನಿರ್ಮಿಸಿದ್ದ ವೇದಿಕೆಯ ಮೇಲೆ ವಿಶಿಷ್ಟ ಭಂಗಿಗಳಲ್ಲಿ ಕುಣಿಸುತ್ತ ಪ್ರದರ್ಶನ ನೀಡಿದರು. ನೆರೆದಿದ್ದ ಸಾವಿರಾರು ಮಂದಿ ಪುಳಕಿತರಾದರು.
ಸುಮಾರು ಅರ್ಧಗಂಟೆ ಪ್ರದರ್ಶನ ನಡೆದು ನಂತರ ಅಲ್ಲಿಂದ ಶ್ರೀ ಆಂಜನೇಯ ಸ್ವಾಮಿ, ಶ್ರೀ ವಿಜಯೇಂದ್ರಸ್ವಾಮಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ನಂತರ ರಾತ್ರಿ 12 ಗಂಟೆಗೆ ಧರ್ಮರಾಯಸ್ವಾಮಿ ದೇವಾಲಯ ಪ್ರವೇಶ ಮಾಡುವ ಮೂಲಕ ಹಸಿಕರಗ ಸಂಪನ್ನವಾಯಿತು.
ಕಸಿಕರಗ ಅಂಗವಾಗಿ ವೇದಿಕೆಯಲ್ಲಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಗೀತ ಶಿಕ ಚಂದ್ರಪ್ಪ ಮತ್ತು ತಂಡದವರು ಸುಮಾರು ಎರಡು ಗಂಟೆಗಳ ಕಾಲ ಕರ್ನಾಟಕ ಸಂಗೀತ, ಶಾಸಿಯ ಸಂಗೀತ, ಭಕ್ತೀಗಿತೆಗಳ ಗಾಯನ ನಡೆಸಿಕೊಟ್ಟರು.
ಹಸಿಕರಗ ನೋಡಲು ಬಂದಿದ್ದ ಪ್ರೇಕರಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net