ದೇವನಹಳ್ಳಿಯಲ್ಲಿ ಹಸಿಕರಗ ವಿಜೃಂಭಣೆ / DEVANAHALLI

ದೇವನಹಳ್ಳಿಯ ಮೌಕ್ತಿಕಾಂಭ ಅಮ್ಮನವರ ಕರಗ ಮಹೋತ್ಸವ ಹಿನ್ನೆಲೆ ಪೂಜಾರಿ ಉಮೇಶ್​ ಹಸಿಕರಗ ಸೊಂಟದಲ್ಲಿ ಹೊತ್ತು ಸಾಗಿದರು.
ದೇವನಹಳ್ಳಿಯ ಮೌಕ್ತಿಕಾಂಭ ಅಮ್ಮನವರ ಕರಗ ಮಹೋತ್ಸವ ಹಿನ್ನೆಲೆ ಪೂಜಾರಿ ಉಮೇಶ್​ ಹಸಿಕರಗ ಸೊಂಟದಲ್ಲಿ ಹೊತ್ತು ಸಾಗಿದರು.
Published on
ದೇವನಹಳ್ಳಿ : ಪ್ರತಿ ವರ್ಷದಂತೆ ಬುದ್ಧಪೌರ್ಣಿಮೆಯಂದು ಆಚರಿಸುವ ಪಟ್ಟಣದ ಪುರಾಣ ಪ್ರಸಿದ್ಧಶ್ರೀ ಧರ್ಮರಾಯಸ್ವಾಮಿ ದೇವಾಲಯದ ಶ್ರೀ ಮೌಕ್ತಿಕಾಂಭ ದೇವಿ ಕರಗ ಮಹೋತ್ಸವ ಅದ್ದೂರಿಯಾಗಿ ನೆರವೇರಿತು.
ಕಾರ್ಯಕ್ರಮ ಹಿನ್ನೆಲೆ ಗುರುವಾರ ಮುಂಜಾನೆ 3 ರಿಂದ ಪುಟ್ಟಪ್ಪನಗುಡಿ ಬೀದಿಯ ಕರಗದ ಮಂಟಪದಲ್ಲಿ ಂಟೆ ಪೂಜಾರಿಗಳು, ಗಣಾಚಾರಿಗಳು ಹಾಗೂ ವೀರಕುಮಾರರ ಹತೆ ಗುಡಿಪೂಜಾರಿ ಚಿನ್ನಣ್ಣನವರ ಮಗ ಅಕ್ಕೂಪೇಟೆ ಉಮೇಶ್​, ಕೆಂಪುಬಣ್ಣದ ವಸದಲ್ಲಿ ಮಲ್ಲಿಗೆ ಹೂವಿನೊಂದಿಗೆ ಅಲಂಕರಿಸಲಾಗಿದ್ದ ಹಸಿಕರಗವನ್ನು ಕರಗದ ಮಂಟಪದಲ್ಲಿ ಶಾಸೊಕ್ತವಾಗಿ ಪೂಜಿಸಿ, 5ಕ್ಕೆ ಸೊಂಟದ ಮೇಲೆ ಹಿಡಿದುಪುಟ್ಟಪ್ಪನಗುಡಿ ಬೀದಿಯ ಬಿಎಂಟಿಸಿ ಡಿಪೋ ರಸ್ತೆಯಲ್ಲಿರುವ ಏಳುಸುತ್ತಿನ ಕೋಟೆ ಪ್ರದಣೆ ಹಾಕಿದರು.
ನಂತರ ಹಳೆ ಬಸ್​ ನಿಲ್ದಾಣ ಮಾರ್ಗ ಬಜಾರ್​ ರಸ್ತೆ ಚೌಕದಲ್ಲಿ ವೀರಕುಮಾರರ ಗೋವಿಂದ ಗೋವಿಂದ ನಾಮಸ್ಮರಣೆ ಮಾಡುತ್ತಾ ಂಟೆ ಪೂಜಾರಿಗಳ ಂಟೆ ನಾದಕ್ಕೆ ಅನುಗುಣವಾಗಿ ಹಾಕುವ ಮೂಲಕ ಬೆಳಗ್ಗೆ ಧರ್ಮರಾಯಸ್ವಾಮಿ ದೇವಾಲಯ ಪ್ರವೇಶ ಮಾಡಿದರು.

ಕತ್ತಿ ಹಿಡಿದ ವೀರಕುಮಾರರು, ಗಣಾಚಾರಿಗಳು, ಗೌಡರು, ಕುಲಸ್ತರು ಹಾಗೂ ಪಣಸ್ತರು ಸಾಥ್​ ನೀಡಿದರು.
ಗುರುವಾರ ಮಧ್ಯರಾತ್ರಿಯಿಂದ ಶುಕ್ರವಾರ ಬೆಳಗಿನಜಾವದವರೆಗೂ ದೀಪಾರತಿ, ಅಗ್ನಿಕುಂಡ ಸೇವೆ ನಡೆಯಲಿದೆ. ಶುಕ್ರವಾರ ತಡರಾತ್ರಿ ಬಳಿಕ, ಅಂದರೆ ಶನಿವಾರ ಬೆಳಗಿನಜಾವ 2ಕ್ಕೆದೇವಾಲಯದಿಂದ ಹೂವಿನ ಕರಗ ಹೊರಡಲಿದೆ.
ಹಸಿಕರಗ ಮಹೋತ್ಸವದಲ್ಲಿ ತಿಗಳರ ಸಂದ ತಾಲೂಕು ಅಧ್ಯಕ್ಷ ವಿ. ಗೋಪಾಲಕೃಷ್ಣ ಮತ್ತು ಪದಾಧಿಕಾರಿಗಳು, ದೇವಾಲಯ ಸಮಿತಿ ಅಧ್ಯಕ್ಷ ಎಸ್​.ಸಿ. ಚಂದ್ರಪ್ಪ. ಮಾಜಿ ಅಧ್ಯಕ್ಷ ಎಸ್​.ಆರ್​. ವಿಜಯಕುಮಾರ್​, ಗಣಾಚಾರಿ ಗೋಪಾಲಪ್ಪ, ಗೌರವಾಧ್ಯಕ್ಷ ಚನ್ನರಾಯಪ್ಪ, ಪುರಸಭೆ ಮಾಜಿ ಸದಸ್ಯ ಎಸ್​.ಸಿ ಚಂದ್ರಪ್ಪ, ಮಾಜಿ ಸದಸ್ಯ ಶಶಿಕುಮಾರ್​, ವೈ.ಎನ್​. ಶಾಮಣ್ಣ, ಪೂಜಾರಿ ರವಿಕುಮಾರ್​, ಗೀತಾರಾಣಿ, ಅಶ್ವತ್ಥಪ್ಪ, ಗಜೇಂದ್ರ , ಜಿ.ಮುನಿರಾಜು ಸೇರಿದಂತೆ ಎಲ್ಲ ನಿರ್ದೇಶಕರು ಹಾಗೂ 600ಕ್ಕೂ ಹೆಚ್ಚು ವೀರಕುಮಾರರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net