ಕೈವಾರ ಯೋಗಿನಾರೇಯಣ ಮಠದಲ್ಲಿ ಹರಿಕಥೆ

Harikatha at Yoginareyana Math, Kaivara
Harikatha at Yoginareyana Math, Kaivara
Published on
ಚಿಂತಾಮಣಿ: ತಾಲೂಕಿನ ಕೈವಾರದ ಶ್ರೀ ಯೋಗಿನಾರೇಯಣ ಮಠದಲ್ಲಿ ಶಿವರಾತ್ರಿ ಜಾಗರಣೆಯ ಪ್ರಯುಕ್ತ ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕ ಕರ್ನಾಟಕ ಕಲಾಶ್ರೀ ಹರಿಕಥಾ ವಿದ್ವಾನ್​ ವಾನರಾಶಿ ಬಾಲಕೃಷ್ಣ ಭಾಗವತರ್​ ಅವರಿಂದ ಹರಿಕಥೆ ನಡೆಸಿಕೊಟ್ಟರು.
ಸದ್ಗುರು ಶ್ರೀ ಯೋಗಿನಾರೇಯಣ ತಾತಯ್ಯನವರ ಜೀವನಚರಿತ್ರೆ&ಕಾಲಜ್ಞಾನದ ಹರಿಕಥೆಯನ್ನು ಮಾಡಿದ ಬಾಲಕೃಷ್ಣ ಭಾಗವತರು, ತಾತಯ್ಯನವರ ಜೀವನದ ಹಲವಾರು ಪ್ರಸಂಗವನ್ನು ಹೇಳುತ್ತಾ ನೆರೆದಿದ್ದ ಜನರಲ್ಲಿ ಭಕ್ತಿಭಾವ ಮೂಡಿಸಿದರು. ತಾತಯ್ಯನವರು ಶತಕಗಳ ಮೂಲಕ ಸಮಾಜಕ್ಕೆ ನೀಡಿರುವ ಸಂದೇಶಗಳನ್ನು ವಿವರಿಸಿದರು.
ಹರಿಕಥೆಗೆ ಪಕ್ಕವಾದ್ಯದಲ್ಲಿ ಹಾರ್ಮೋನಿಯಂ ಗೋವರ್ಧನ್​, ವಯಲಿನ್​ ಶ್ರೀಹರಿ, ಕೋಲಾರ ಪ್ರಶಾಂತ ಮೃದಂಗ, ಕೆ.ರಾಮಕುಮಾರ್​ ತಬಲ ಸಹಕಾರ ನೀಡಿ ಸಹಕರಿಸಿದರು. ನಾದ ಸುಧಾರಸ ವೇದಿಕೆಯ ಕಲಾವಿದರು ಭಾಗವಹಿಸಿದ್ದರು.ಭಕ್ತರಿಗೆ ಯೋಗಿನಾರೇಯಣ ಟ್ರಸ್ಟ್​ಯಿಂದ ಪ್ರಸಾದ ವಿನಿಯೋಗ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net