ನೆಲ-ಜಲ, ಸಂಸ್ಕೃತಿ ಉಳಿವಿಗೆ ಕಸಾಪ ಶ್ರಮ

ಹುಲಸೂರು ತಾಲೂಕಿನ ಬೇಲೂರದಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ಕಸಾಪ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ತಾಲೂಕು ಅಧ್ಯ ನಾಗರಾಜ ಹಾವಣ್ಣ, ಸರ್ಕಾರಿ ನೌಕರರ ಸಂದ ರಾಜ್ಯ ಪ್ರತಿನಿಧಿ ಭೀಮಾಶಂಕರ ಆದೇಪ್ಪ, ರಾಜಕುಮಾರ ಮೇಹಕರೆ, ರೇವಣಸಿದ್ದ ಪಾಟೀಲ್​ ಇತರರಿದ್ದರು
ಹುಲಸೂರು ತಾಲೂಕಿನ ಬೇಲೂರದಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ಕಸಾಪ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ತಾಲೂಕು ಅಧ್ಯ ನಾಗರಾಜ ಹಾವಣ್ಣ, ಸರ್ಕಾರಿ ನೌಕರರ ಸಂದ ರಾಜ್ಯ ಪ್ರತಿನಿಧಿ ಭೀಮಾಶಂಕರ ಆದೇಪ್ಪ, ರಾಜಕುಮಾರ ಮೇಹಕರೆ, ರೇವಣಸಿದ್ದ ಪಾಟೀಲ್​ ಇತರರಿದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಕ ರಾಜಕುಮಾರ ಮೇಹಕರೆ ಮೆಚ್ಚುಗೆ
  • ಬೇಲೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್​ ಸಂಸ್ಥಾಪನಾ ದಿನಾಚರಣೆ
ಹುಲಸೂರು: ನಾಡಿನಾದ್ಯಂತ ಕನ್ನಡ ಸಾಹಿತ್ಯ ಪರಿಷತ್​ ವಿವಿಧ ಸಾಹಿತ್ಯ ಸಮ್ಮೇಳನಗಳ ಮೂಲಕ ನೆಲ-ಜಲ, ಸಂಸ್ಕೃತಿ, ಪರಂಪರೆ ಮತ್ತು ಭಾಷೆಯನ್ನು ಉಳಿಸುವ ಕೆಲಸ ಮಾಡುತ್ತಿದೆ ಎಂದು ಶಿಕ್ಷಕ ರಾಜಕುಮಾರ ಮೇಹಕರೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬೇಲೂರ ಗ್ರಾಮದ ಜ್ಞಾನಗಂಗಾ ತರಬೇತಿ ಕೇಂದ್ರದಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ಕಸಾಪ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ಸಂಸ್ಥೆ ಸ್ಥಾಪಿಸಲು ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಬಹುತೇಕ ಸಂಸ್ಥೆಗಳು ಕೆಲ ವರ್ಷಗಳಲ್ಲಿ ಮುಚ್ಚಿ ಹೋಗುತ್ತವೆ. ಆದರೆ ಸಾಹಿತಿ, ಬುದ್ಧೀಜಿವಿಗಳೆಲ್ಲರೂ ಸೇರಿ ಸ್ಥಾಪಿಸಿರುವ ಕನ್ನಡ ಸಾಹಿತ್ಯ ಪರಿಷತ್​ ನೂರು ವರ್ಷ ಪೂರೈಸಿ ಗಟ್ಟಿಯಾಗಿ ನಿಂತಿದೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ನಾಗರಾಜ ಹಾವಣ್ಣ ಮಾತನಾಡಿ, ಕನ್ನಡ ಉಳಿಸಬೇಕಾದರೆ ಪ್ರತಿಯೊಬ್ಬರೂ ಮಾತೃಭಾಷೆಯಲ್ಲಿ ಮಾತನಾಡಬೇಕು. ಪಾಲಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಯಲ್ಲಿ ಓದಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರಿ ನೌಕರರ ಸಂದ ಉಪಾಧ್ಯ ಜಗನ್ನಾಥ ಢಗೆ ಮಾತನಾಡಿ, ನಾನೊಬ್ಬ ಕನ್ನಡಿಗ ಎಂಬ ಹೆಮ್ಮೆ ನಮ್ಮಲ್ಲಿರಬೇಕು. ಕನ್ನಡ ಭಾಷೆ ಉಳಿಸಿ ಬೆಳೆಸುವಂಥ ಗುರುತರ ಜವಾಬ್ದಾರಿ ನಮ್ಮದಾಗಿದೆ ಎಂದರು.
ತಾಲೂಕು ಸಂಘಟನಾ ಕಾರ್ಯದರ್ಶಿ ರಾಜಶೇಖರ ಪಾಟೀಲ, ಸರ್ಕಾರಿ ನೌಕರರ ಸಂದ ರಾಜ್ಯ ಪರಿಷತ್​ ಸದಸ್ಯ ಭೀಮಾಶಂಕರ ಆದೆಪ್ಪ, ಪರಿಷತ್​ ಗೌರವ ಸಲಹೆಗಾರ ರೇವಣಸಿದ್ಧ ಪಾಟೀಲ, ಮಲ್ಲಿಕಾರ್ಜುನ ಹಲಿಂಗೆ ಇತರರಿದ್ದರು. ಆನಂದ ಬಿದ್ಮಾನೆ ಸ್ವಾಗತಿಸಿದರು. ಓಂಕಾರ ಮೂಲಗೆ ನಿರೂಪಣೆ ಮಾಡಿದರು.
2025&26ರ ಎಸ್ಸೆಸ್ಸೆಲ್ಸಿ ಪರೀೆ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದ ಬೇಲೂರಿನ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಶಿಲ್ಪಾ ನಾಗನಾಥ ಮತ್ತು ಸುಪ್ರಿಯಾ ವಿಠ್ಠಲ ಹಾಗೂ ಾನಗಂಗಾ ತರಬೇತಿ ಕೇಂದ್ರದ ಸಂಸ್ಥಾಪಕ ಪರಮೇಶ್ವರ ಅಂತಪ್ಪ, ಶಿಕರಾದ ಓಂಕಾರ ಮೂಲಗೆ, ಆನಂದ ಬಿದ್ಮಾನೆ, ಮಲ್ಲಮ್ಮ ಹಲಿಂಗೆ ಅವರನ್ನು ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net