ಕಠಿಣ ಪರಿಶ್ರಮ ಸಾಧನೆಯ ಒಳಗುಟ್ಟು sports

ಬುಕ್ಕಾಪಟ್ಟಣ sports ಹೋಬಳಿಯ ಹೂಯಿಲ್​ ದೊರೆ ಶ್ರೀ ಶಾರದಾ ಇಂಟರ್​ನ್ಯಾಷನಲ್​ ಕೇಂಬ್ರಿಡ್ಜ್​ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಲ್ಲಿ ಪ್ರಾಂಶುಪಾಲ ನವೀನ್​ ಕುಮಾರ್​, ಬಾಲೋಧ್ಯಾನ ಮುಖ್ಯ ಶಿಕ್ಷಕಿ ಕಾವ್ಯಾ ಮಹೇಶ್​, ದೈಹಿಕ ಶಿಕ್ಷಣ ಶಿಕ್ಷಕರಾದ ಕಿರಣ್​ ಕುಮಾರ್​, ಮಹೇಶ್​ ಗೌಡ ಇದ್ದರು.

Published on
ಬುಕ್ಕಾಪಟ್ಟಣ: ಕಠಿಣ ಪರಿಶ್ರಮ, ಶಿಸ್ತುಬದ್ಧ ಜೀವನ, ಹಗಲಿರಳು ಸಾಧಿಸಬೇಕೆಂಬ ಹಂಬಲ ಸಾಧನೆಯ ಕಿಚ್ಚು ಹಚ್ಚುತ್ತದೆ sports ಎಂದು ಶ್ರೀ ಅಯ್ಯ ಆಂಜನೇಯ ಹೆಲ್ತ್​ ಆ್ಯಂಡ್​ ಚಾರಿಟಬಲ್​ ಟ್ರಸ್ಟ್​ನ ಸಂಸ್ಥಾಪಕ ಕಾರ್ಯದರ್ಶಿ ಬಾಲಕೃಷ್ಣ ತಿಳಿಸಿದರು.
ಹೋಬಳಿಯ ಹೂಯಿಲ್​ ದೊರೆ ಶ್ರೀ ಶಾರದಾ ಇಂಟರ್​ ನ್ಯಾಷನಲ್​ ಕೇಂಬ್ರಿಡ್ಜ್​ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ಹಾಗೂ ಮೇಜರ್​ ಧ್ಯಾನಚಂದ್​ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿ, ಧ್ಯಾನ್​ ಚಂದ್​ ಅವರ ಹೆಸರನ್ನು ದೇಶದ ಅತ್ಯುನ್ನತ ಕ್ರೀಡಾ
ಪ್ರಶಸ್ತಿಯಾದ ಖೇಲ್​ ರತ್ನ ಪ್ರಶಸ್ತಿಗೆ ಇಡಲಾಗಿದೆ ಎಂದಾದರೆ ಅವರ ಸಾಧನೆ ಎಷ್ಟರಮಟ್ಟಿಗೆ ಇತ್ತು ಎಂಬುದರ ಬಗ್ಗೆ ಎಲ್ಲರೂ ಅರಿಯಬೇಕಿದೆ.
ತನ್ನ ದೇಶ ಮಾತ್ರ ವಿಶ್ವವನ್ನು ಆಳಲು ಸಮರ್ಥ ಎಂಬ ಭಾವನೆ ಹೊಂದಿದ್ದ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್​ ತನ್ನ ದೇಶಕ್ಕಾಗಿ ಆಡುವಂತೆ ಹಲವು ಆಸೆ ಆಮಿಷಗಳನ್ನು ಇಟ್ಟರೂ ಸಹ ತಾನು ಕೇವಲ ತನ್ನ ದೇಶಕ್ಕಾಗಿ ಆಡುತ್ತೇನೆ, ಅದೇ ನನಗೆ ಪರಮತೃಪ್ತಿ ಎಂದು ಸಾರಿದ ಮಹಾನ್​ ದೇಶಭಕ್ತ ಮೇಜರ್​ ಧ್ಯಾನ್​ ಚಂದ್​ ಎಂದು ಬಣ್ಣಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net