ಇಂದು ಹನುಮ ವ್ರತಾಚರಣೆ / NELAMANGAL

ನೆಲಮಂಗಲದಹಿಪ್ಪೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಪ್ರಯುಕ್ತ ಲಡ್ಡು ತಯಾರಿಕೆಯನ್ನುನಗರಸಭೆ ಸದಸ್ಯ ಗಂಗಾಧರ್​ ರಾವ್​, ್ಲ ರುದ್ರೇಶ್ವರ ಕೋ ಆಪರೇಟಿವ್​ ಬ್ಯಾಂಕ್​ ನಿರ್ದೇಶಕ ಜಗದೀಶ್​, ಕನ್ನಡಾಂಬೆ ಯುವಕರ ಪ್ರಧಾನ ಕಾರ್ಯದರ್ಶಿ ಮರಿಯಪ್ಪ, ಉಪಾಧ್ಯಕ್ಷ ಮುರಳಿ , ಮುಖಂಡ ಕಾಂತರಾಜು ಪರಿಶೀಲಿಸಿದರು.

Published on
ನೆಲಮಂಗಲ : ಹನುಮದ್​ ವ್ರತಾಚರಣೆ ಪ್ರಯುಕ್ತ ನಗರ ಸೇರಿ ತಾಲೂಕಿನಾದ್ಯಂತ ಹನುಮ ದೇವಸ್ಥಾನಗಳಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಗರದ ಅಡೇಪೇಟೆಯ ಉತ್ತರಘಟ್ಟ ಆಂಜನೇಯ, ಹಿಪ್ಪೆ ಆಂಜನೇಯ, ತಿಮ್ಮಶೆಟ್ಟಪ್ಪ ಬಡಾವಣೆ, ಚನ್ನಪ್ಪಬಡಾವಣೆ, ಶ್ರೀ ರಾಮಾಂಜನೇಯ ಸೇರಿ ತಾಲೂಕಿನ ಬಸವನಹಳ್ಳಿ, ಬೈರಶೆಟ್ಟಿಹಳ್ಳಿಯ ಬೈಲಾಂಜನೇಯಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ, ಹೋಮ, ಪುಷ್ಪಾಲಂಕಾರ ನೆರವೇರಲಿದೆ. ಡಿ.2ರ ಬೆಳಗ್ಗೆ 5 ರಿಂದ ರಾತ್ರಿ 10ರವರೆಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ನಗರದ ಉತ್ತರಘಟ್ಟ ಆಂಜನೇಯ ಸ್ವಾಮಿ ದೇಗುಲದಲ್ಲಿ ಬೆಳಗ್ಗೆ 7ಕ್ಕೆ ಪುಣ್ಯಾಹ, ಪಂಚಾವೃತಾಭಿಷೇಕ, ಕಲಶಾರಾಧನೆ, ಗಣಹೋಮ, ನವಗ್ರಹ ಹೋಮ, ಮೃತ್ಯುಂಜಯ ಮೂಲಮಂತ್ರ ಹೋಮ, ಪೂರ್ಣಾಹುತಿ, ಮಂಗಳಾರತಿ, 10 ಸಾವಿರಕ್ಕೂ ಹೆಚ್ಚು ಮಂದಿ ಉದ್ಯಮಿ ಮಂಜುನಾಥ್​ ಅವರ ನೇತೃತ್ವದಲ್ಲಿ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯ ಜೀಣೋರ್ದ್ಧಾರ ಸಮಿತಿ ಅಧ್ಯಕ್ಷ ಕಪಾಲಿ ವೆಂಕಟೇಶ್​ ತಿಳಿಸಿದ್ದಾರೆ.
ಲಡ್ಡು ವ್ಯವಸ್ಥೆ : ಹಿಪ್ಪೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಪಂಚಾಮೃತಾಭಿಷೇಕ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿಗೆ ಅನ್ನಸಂತರ್ಪಣೆ ಹಾಗೂ 10 ಸಾವಿರ ಲಡ್ಡು ವ್ಯವಸ್ಥೆ ಮಾಡಲಾಗಿದೆ ಎಂದು ನಗರಸಭೆ ಸದಸ್ಯ ಗಂಗಾಧರ್​ರಾವ್​ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net