ದೇಶದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಎಎಂಆರ್ ಗ್ರೂಪ್ ಮಾಲೀಕ ಡಾ. ಎ. ಮಹೇಶರೆಡ್ಡಿ ಹಾಗೂ ಅವರ ಕುಟುಂಬ ಸದಸ್ಯರು ದೇವಾಲಯಕ್ಕೆ ಆಗಮಿಸಿ, ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತಿಪೂರ್ವಕ ಕಾಣಿಕೆ ಅರ್ಪಿಸಿದರು. ಹೈದರಾಬಾದ್‌ನ ನುರಿತ ಚಿನ್ನದ ಕುಸುರಿ ಕೆಲಸಗಾರರ ತಂಡವು ಈ ಪ್ರಭಾವಳಿ, ಕಿರೀಟ, ಗದೆ, ಛತ್ರಿ ಹಾಗೂ ಚಾಮರಗಳನ್ನೊಳಗೊಂಡ ಚಿನ್ನದ ಆಭರಣಗಳನ್ನು ಅತ್ಯಂತ ಕಲಾತ್ಮಕವಾಗಿ ವಿನ್ಯಾಸಗೊಳಿಸಿದೆ.