ಭಾರತದ ತ್ರಿವರ್ಣ ಧ್ವಜ, ಡ್ರ್ಯಾಗನ್, ಅಂಜನೇಯ, ಕುದುರೆ, ಚಿರತೆ, ಅಕ್ಟೋಪಾಸ್, ಹುಲಿ ಹಾಗೂ ಐ ಲವ್ ಹಂಪಿ ಎಂಬ ಬರಹವಿದ್ದ ಗಾಳಿಪಟಗಳು ಪ್ರೇಕ್ಷಕರ ಗಮನ ಸೆಳೆದವು. ಸುಮಾರು 30 ಅಡಿಯಿಂದ 200 ಅಡಿಯವರೆಗಿನ ಬೃಹತ್ ಗಾಳಿಪಟಗಳು ಆಕಾಶದಲ್ಲಿ ತೇಲಾಡುತ್ತಿದ್ದರೆ, ನೋಡುಗರು ಕತ್ತು ಮೇಲೆತ್ತಿ ಆಶ್ಚರ್ಯದಿಂದ ವೀಕ್ಷಿಸಿದರು.