ಹಳ್ಳೆರಾವ ಅವರ ಕಾರ್ಯ ಶ್ಲಾಘನೀಯ

ಪಶುಪಾಲನಾ ಇಲಾಖೆಯಲ್ಲಿ ಹಿರಿಯ ಪಶು ಪರಿವೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಹಳ್ಳೇರಾವ ಎಸ್.ಕುಲಕರ್ಣಿ ದಂಪತಿ ಅವರನ್ನು ಕೆಂಭಾವಿಯಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು. ಡಾ.ರಾಜಶೇಖರ, ವಾಮನರಾವ ದೇಶಪಾಂಡೆ, ಡಾ.ಗಿರೀಶ ಕುಲಕರ್ಣಿ, ಡಾ.ಸುರೇಶ ಹಚ್ಚಡ, ಡಾ.ದೇವೇಂದ್ರ ಬಿರಾದಾರ ಇತರರಿದ್ದರು.
ಪಶುಪಾಲನಾ ಇಲಾಖೆಯಲ್ಲಿ ಹಿರಿಯ ಪಶು ಪರಿವೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಹಳ್ಳೇರಾವ ಎಸ್.ಕುಲಕರ್ಣಿ ದಂಪತಿ ಅವರನ್ನು ಕೆಂಭಾವಿಯಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು. ಡಾ.ರಾಜಶೇಖರ, ವಾಮನರಾವ ದೇಶಪಾಂಡೆ, ಡಾ.ಗಿರೀಶ ಕುಲಕರ್ಣಿ, ಡಾ.ಸುರೇಶ ಹಚ್ಚಡ, ಡಾ.ದೇವೇಂದ್ರ ಬಿರಾದಾರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಶು ಇಲಾಖೆ ಉಪ ನಿರ್ದೇಶಕ ಡಾ.ರಾಜಶೇಖರ ಬಣ್ಣನೆ
  • ಕೆಂಭಾವಿಯಲ್ಲಿ ಬೀಳ್ಕೊಡುಗೆ ಕರ‍್ಯಕ್ರಮ
ಕೆಂಭಾವಿ :

ಭೂಮಿ ಮೇಲೆ ವಾಸ ಮಾಡುವ ಪ್ರತಿಯೊಂದು ಜೀವಿ ಕೂಡ ಆರೋಗ್ಯ ಸಮಸ್ಯೆಯಿಂದ ಬಳಲುತ್ತವೆ. ಅದರಲ್ಲೂ ಪ್ರಾಣಿಗಳ ಆರೋಗ್ಯ ಸಮಸ್ಯೆ ಅರಿತು ಅವುಗಳಿಗೆ ಸೂಕ್ತ ಉಪಚಾರ ಮಾಡಿ ಅವುಗಳನ್ನು ಗುಣಪಡಿಸುವುದು ಪಶು ಇಲಾಖೆಯ ದೊಡ್ಡ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ರಾಜಶೇಖರ ಕಾಸವಾಗ ಹೇಳಿದರು.

ಪಶುಪಾಲನಾ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಹಳ್ಳೇರಾವ ಎಸ್.ಕುಲಕರ್ಣಿ ಅವರಿಗೆ ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಸೇವೆಯುದ್ದಕ್ಕೂ ಹಗಲಿರುಳು ಶ್ರಮ ವಹಿಸಿ ಕೆಲಸ ಮಾಡಿದ ಹಳ್ಳೆರಾವ ಅವರ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು.
ಜಿಲ್ಲಾ ಬ್ರಾಹ್ಮಣ ಸಂಘದ ಗೌರವಾಧ್ಯಕ್ಷ ವಾಮನರಾವ ದೇಶಪಾಂಡೆ ಮಾತನಾಡಿ, ಸರ್ಕಾರಿ ಸೇವೆ ಸಲ್ಲಿಸುವ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ದೇವರ ಕೆಲಸ ಎಂದು ಪ್ರಾಮಾಣಿಕತೆಯಿಂದ ಮಾಡಿದಾಗ ಮಾತ್ರ ಸರ್ಕಾರಿ ಸೇವೆ ಸಲ್ಲಿಸಿದ ತೃಪ್ತಿ ಅವರಿಗೂ ಮತ್ತು ಅವರ ಕುಟುಂಬಕ್ಕೂ ಸಲ್ಲುತ್ತದೆ ಎಂದು ಹೇಳಿದರು.
ಇಲಾಖೆ ಸಹಾಯಕ ನಿರ್ದೇಶಕ ಸುರೇಶ ಹಚ್ಚಡ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಉಪ ನಿರ್ದೇಶಕ ಡಾ.ರಾಜು ದೇಶಮುಖ, ವೈದ್ಯಾಽಕಾರಿ ಡಾ.ಗಿರೀಶ ಕುಲಕರ್ಣಿ, ಡಾ.ದೇವೇಂದ್ರಪ್ಪ ಬಿರಾದಾರ, ನಿಜಲಿಂಗಪ್ಪ, ಡಾ.ಮಹೆಬೂಬ ಖಾಜಿ, ಡಾ.ಶರಣಭೂಪಾಲರಡ್ಡಿ ಇತರರಿದ್ದರು. ಪರ್ವತರೆಡ್ಡಿ ನಿರೂಪಿಸಿದರು. ನರಸಿಂಹರಾವ ಕುಲಕರ್ಣಿ ಸ್ವಾಗತಿಸಿದರು. ರಾಘವೇಂದ್ರ ದೇಶಪಾಂಡೆ ವಂದಿಸಿದರು. ಈ ವೇಳೆ ಹಳ್ಳೇರಾವ ಕುಲಕರ್ಣಿ ದಂಪತಿ ಅವರನ್ನು ಇಲಾಖೆ ವತಿಯಿಂದ ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net