ಆಲಿಕಲ್ಲು ಮಳೆಗೆ ಮಾವು, ದ್ರಾಕ್ಷಿ ಹಾನಿ

Hailstorm damages mangoes, grapes
Hailstorm damages mangoes, grapes
Published on
ಶಿಡ್ಲಘಟ್ಟ: ಗುರುವಾರ ಸಂಜೆ ಸುರಿದ ಭಾರಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಮಾವು ಹಾಗೂ ದ್ರಾ ಬೆಳೆ ನೆಲಕ್ಕುರುಳಿದೆ.
ತಾಲೂಕಿನ ಕೆ.ಮತ್ತುಕದಹಳ್ಳಿ, ಕನ್ನಮಂಗಲ, ಚಿಂತಡಿಪಿ, ಆಲಸೂರು ದಿನ್ನೆ, ಗೊರಮಡುಗು, ಜಂಗಮಶೀಗೆಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿರುಗಾಳಿ ಮತ್ತು ಆಲಿಕಲ್ಲು ಮಳೆಯಿಂದ ತೋಟಗಾರಿಕೆ ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾನಿಗೊಳಗಾಗಿವೆ. ಮಾವಿನ ತೋಪುಗಳಲ್ಲಿ ಮರ ತುಂಬಿಕೊಂಡಿದ್ದ ಕಾಯಿಗಳು ಬಿರುಗಾಳಿಯ ಹೊಡೆತಕ್ಕೆ ನೆಲಕ್ಕುರುಳಿದ್ದು, ದ್ರಾ ತೋಟಗಳಲ್ಲೂ ಗೊಂಚಲುಗಳು ಹಾಳಾಗಿವೆ.
ಮಾವು ಬೆಳೆಗಾಗಿ ಈಗಾಗಲೇ ರಾಸಾಯನಿಕ ಸಿಂಪಡಣೆ, ನೀರಾವರಿ, ಕೂಲಿ ಸೇರಿದಂತೆ ಸಾವಿರಾರು ರೂಪಾಯಿ ವೆಚ್ಚ ಮಾಡಿದ್ದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಈ ಬಾರಿ ಉತ್ತಮ ಉತ್ಪಾದನೆ ನಿರೀಸಿದ್ದ ರೈತರು ಬೆಳೆ ನೆಲಪಾಲಾಗಿರುವುದರಿಂದ ಕಂಗಾಲಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net