ಶೀಘ್ರದಲ್ಲೇ ಕಾಂಗ್ರೆಸ್ ಪಕ್ಷದಲ್ಲಿರುವ ಸಮುದಾಯದ ಸಚಿವರು ಮತ್ತು ಶಾಸಕರ ಬಳಿಗೆ ತೆರಳಿ ಸೌಹಾರ್ದಯುತವಾಗಿ ಸಮಾಜದ ಅಭಿವೃದ್ಧಿಗೆ ಎಲ್ಲರೂ ಕಂಕಣಬ ದ್ಧರಾಗುವಂತೆ ಮಾತುಕತೆಯನ್ನು ನಡೆಸಲಾಗುವುದು. ಇದಕ್ಕೆ ಸಮುದಾಯದ ಶಾಸಕರು, ಸಚಿವರು ಸ್ಪಂದನೆ ನೀಡಬೇಕು ಎಂದು ಮನವಿ ಮಾಡಿದರು. ಡಾ ಪ್ರಣವಾನಂದ ಸ್ವಾಮೀಜಿಯವರು ಸಮುದಾಯದ ಸ್ವಾಮೀಜಿಯಾಗಿದ್ದು ಯಾವುದೇ ಪಕ್ಷದಲ್ಲಿ ಗುರುತಿಸಿಕೊಂಡವರಲ್ಲ. ಸ್ವಾಮೀಜಿಗಳಿಗೆ ಪಕ್ಷದ ಬಣ್ಣ ಹಚ್ಚಿ ಮುಖ್ಯಮಂತ್ರಿಗಳಿಗೆ, ಸಚಿವರಿಗೆ ತಪ್ಪು ಸಂದೇಶ ನೀಡಿ ಹೋರಾಟದ ದಿಕ್ಕನ್ನು ಬದಲಾಯಿಸುವ ಕಪಟ ಬುದ್ಧಿಯ ನಾಯಕರುಗಳಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಗುಡುಗಿದರು. ಸ್ವಾಮೀಜಿಯವರು ಕೂಡ ಸಮಾಜದ ಹಿತಕ್ಕಾಗಿ ಪಕ್ಷ ಬೇಧ ಪಂಗಡವಿಲ್ಲದೆ ಹೋರಾಟ ಮಾಡಿ ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕವಾದ ಪ್ರಯತ್ನ ಮುಂದುವರಿಸಲಿ. ಅದಕ್ಕೆ ಸಂಪೂರ್ಣ ಬೆಂಬಲವನ್ನು ಕಾಂಗ್ರೆಸ್ ಸರ್ಕಾರ ನೀಡುತ್ತದೆ ಎಂದು ಭರವಸೆ ನೀಡಿದರು. ಮುಖ್ಯಮಂತ್ರಿಗಳ ಜೊತೆ ಎಚ್ ಆರ್ ಶ್ರೀನಾಥ್ ಸಮ್ಮುಖದಲ್ಲಿ ನಡೆದ ಮಹತ್ವದ ಮಾತುಕತೆ ನಂತರ ಅವರ ಮಾರ್ಗದರ್ಶನದಂತೆ ಸಚಿವ ಶಿವರಾಜ್ ತಂಗಡಗಿ ಎರಡು ಬಾರಿ ಮುಷ್ಕರ ಸ್ಥಳಕ್ಕೆ ಆಗಮಿಸಿ ಸಂಧಾನ ನಡೆಸಿ ಕರ್ನಾಟಕದ ಸಮಸ್ತ ಈಡಿಗ ಸಮುದಾಯದ ಜನರ ಬೇಡಿಕೆಗಳಿಗೆ ಪ್ರಾಮಾಣಿಕ ಸ್ಪಂದನೆ ಸಾಧ್ಯವಾಯಿತು. ಅದಕ್ಕಾಗಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಸಚಿವ ತಂಗಡಗಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ರಾಜ್ಯದಲ್ಲಿ ಈಡಿಗ ಸಮುದಾಯದ ಎಲ್ಲರೂ ಒಗ್ಗಟ್ಟಿನ ಮಂತ್ರ ಜಪಿಸಲು ಎಲ್ಲರೂ ಪ್ರಾಮಾಣಿಕವಾಗಿ ಒಗ್ಗೂಡಬೇಕು ಎಂದು ಗುತ್ತೇದಾರ್ ಕರೆ ನೀಡಿದರು