ರಾಜ್ಯದಲ್ಲಿ ಗುಟ್ಕಾ-ಪಾನ್​ ಮಸಾಲಾ ಬ್ಯಾನ್​: 48 ಗಂಟೆಯಲ್ಲೇ ಯೂ-ಟರ್ನ್​? ಅಡಿಕೆ ಬೆಳೆಗಾರರ ಒತ್ತಡಕ್ಕೆ ಮಣಿಯುತ್ತಾ ಸರ್ಕಾರ? Gutka Pan Masala Ban in Karnataka

ಕರ್ನಾಟಕದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲಾ ನಿಷೇಧ
ಕರ್ನಾಟಕದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲಾ ನಿಷೇಧ
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲಾ ನಿಷೇಧ
  • ನಿಷೇಧ ಹಿಂಪಡೆಲು ಮುಂದಾದ ರಾಜ್ಯ ಸರ್ಕಾರ
  • ಅಡಿಕೆ ಬೆಳಗಾರರ ಒತ್ತಡಕ್ಕೆ ಮಣಿಯುತ್ತಾ ಸರ್ಕಾರ?
ಬೆಂಗಳೂರು: ಬುಧವಾರ (ಆ.12) ರಾಜ್ಯದ ಜನರ ಆರೋಗ್ಯ ಸುರಕ್ಷತೆ ಹಾಗೂ ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ಒಂದು ವರ್ಷದ ಮಟ್ಟಿಗೆ ಗುಟ್ಕಾ ಮತ್ತು ಪಾನ್​ ಮಸಾಲಾ (Gutka Pan Masala Ban in Karnataka) ದ ತಯಾರಿಕೆ ಹಾಗೂ ಮಾರಾಟಕ್ಕೆ ಕರ್ನಾಟಕ ಸರ್ಕಾರ ನಿಷೇಧವನ್ನು ಹೇರಿತ್ತು.
ಆದರೆ ಇದರಿಂದ ಅಡಿಕೆ ಬೆಳೆಗಾರರಿಗೆ ತೀವ್ರ ಆರ್ಥಿಕ ಸಂಕಷ್ಟ ಎದುರಾಗುತ್ತಿರುವ ಹಿನ್ನಲೆ ಆದೇಶ ಜಾರಿ ಮಾಡಿದ ಎರಡೇ ದಿನಗಳಲ್ಲಿ ವಾಪಸ್​ ಪಡೆಯಲು ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಸರ್ಕಾರದ ಆದೇಶದಲ್ಲಿ ಏನಿತ್ತು?

ಆಗಸ್ಟ್​​ 12 ರಂದು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ ಆದೇಶದಲ್ಲಿ, ಮುಂದಿನ ಒಂದು ವರ್ಷದ ಮಟ್ಟಿಗೆ ರಾಜ್ಯದಲ್ಲಿ ಪಾನ್​ ಮಸಾಲಾ ಹಾಗೂ ಗುಟ್ಕಾದ ತಯಾರಿಕೆ, ದಾಸ್ತಾನು, ಸಾಗಾಟ ಹಾಗೂ ಮಾರಾಟಕ್ಕೆ ಬ್ರೇಕ್​ ಹಾಕಲಾಗಿದೆ.

ನಿಷೇಧ ಮಾಡಲಾದ ಉತ್ಪನ್ನಗಳಲ್ಲಿ ತಂಬಾಕು ಮಿಶ್ರಿತ ಹಾಗೂ ತಂಬಾಕನ್ನು ಪ್ರತ್ಯೇಕವಾಗಿ ಸೇರಿಸುವ ಎರಡೂ ರೀತಿಯ ಗುಟ್ಕಾ, ಪಾನ್​ ಮಸಾಲಾಗಳನ್ನು ಬ್ಯಾನ್​ ಮಾಡಲಾಗಿದೆ ಎಂದು ತಿಳಿಸಲಾಗಿದ್ದು, ಈ ನಿಯಮವನ್ನು ಮೀರಿದರೆ ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಲಾಗಿತ್ತು.


ಕಾಳಸಂತೆಯಲ್ಲಿ ಬರಪೂರ್​ ವ್ಯಾಪಾರ!

ಇತ್ತ ರಾಜ್ಯ ಸರ್ಕಾರ ಗುಟ್ಕಾ ಮತ್ತು ಪಾನ್​ ಮಸಾಲವನ್ನು ಬ್ಯಾನ್​ ಮಾಡುತ್ತಿದ್ದ ಹಾಗೆ ಕಾಳಸಂತೆಯಲ್ಲಿ ಈ ಪದಾರ್ಥಗಳು ಮೂರು-ನಾಲ್ಕು ಪಟ್ಟಿಗೆ ಮಾರಾಟವಾಗಿವೆ. 25 ರೂಪಾಯಿಗೆ ಮಾರಾಟವಾಗುತ್ತಿದ್ದ ಗುಟ್ಕಾ ಬ್ಲಾಕ್​ ಮಾರ್ಕೆಟ್​ನಲ್ಲಿ 100 ರೂಪಾಯಿಗೆ ಮಾರಾಟವಾಗುತ್ತಿದೆ ಎಂದು ತಿಳಿದು ಬಂದಿದೆ.

ಅಡಿಕೆ ವ್ಯಾಪಾರಿಗೆಳಿಗೆ ಆರ್ಥಿಕ ಸಂಕಷ್ಟ!

ಇನ್ನೊಂದೆಡೆ, ಗುಟ್ಕಾಗೆ ಸರಬರಾಜಾಗುವ ಅಡಿಕೆಯನ್ನೇ ಆದಾಯದ ಮೂಲವಾಗಿರುವ ಬೆಳೆಗಾರರು, ಸರ್ಕಾರದ ಈ ನೀತಿಯನ್ನು ಕಟುವಾಗಿ ವಿರೋಧಿಸಿದ್ದಾರೆ. ಏನು ಮುನ್ಸೂಚನೆ, ಚರ್ಚೆ ಹಾಗೂ ನಿಯಮಾವಳಿಗಳನ್ನು ತಿಳಿಸದೆ ಏಕಾಏಕಿ ಹೀಗೆ ನಿಷೇಧ ಮಾಡಿರುವುದು ಸರಿಯಲ್ಲ, ಸರ್ಕಾರ ನಮ್ಮ ದುಡಿಯುವ ಹಕ್ಕನ್ನೇ ಕಿತ್ತುಕೊಳ್ಳ ಹೊರಟಿದೆ ಎಂದು ಅಳಲನ್ನು ತೋಡಿಕೊಂಡಿದ್ದಾರೆ.
ಹಾಗೂ ಸರ್ಕಾರದ ಈ ನೀತಿಯನ್ನು ವಿರೋಧ ಪಕ್ಷದ ನಾಯಕರು ಕೂಡ, ವಿರೋಧ ವ್ಯಕ್ತ ಪಡಿಸಿದ್ದು, ಅಡಿಕೆ ಬೆಳೆಗಾರರು ರಾಜ್ಯದ ಬೊಕ್ಕಸಕ್ಕೆ ಭಾರಿ ಪ್ರಮಾಣದಲ್ಲಿ ತೆರಿಗೆ ಕಟ್ಟುತ್ತಾರೆ. ಸರ್ಕಾರ ಹೀಗೆ ಏಕಾಏಕಿ ಗುಟ್ಕಾ-ಪಾನ್​ ಮಸಾಲಾ ನಿಷೇಧ ಮಾಡಿದರೆ, ಕೇವಲ ಅಡಿಕೆ ಬೆಳೆಗಾರರಿಗೆ ಮಾತ್ರವಲ್ಲ ರಾಕ್ಯದ ಬೊಕ್ಕಸಕ್ಕು ದೊಡ್ಡ ಪ್ರಮಾಣದಲ್ಲಿ ಆರ್ಥಿಕ ನಷ್ಟ ಸಂಭವಿಸಲಿದೆ ಎಂದು ಹೇಳಿದ್ದಾರೆ.

ತಜ್ಞರೊಂದಿಗೆ ಸಿಎಂ ಸಭೆ!

ರಾಜ್ಯ ಸರ್ಕಾರ ಗುಟ್ಕಾ ಮತ್ತು ಪಾನ್​ ಮಸಾಲಾವನ್ನು ಬ್ಯಾನ್​ ಮಾಡುತ್ತಿದ್ದಂತೆ, ಅಡಿಕೆ ಬೆಳೆಗಾರರ ಸಂಘದವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರನ್ನು ಬೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದು, ಈ ನಿಷೇಧವನ್ನು ಹಿಂಪಡೆಯುವಂತೆ ಮನವಿ ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ.
ಸಿಎಂ ಡಿ.ಕೆ. ಶಿವಕುಮಾರ್​ ಕೂಡ ನಿಷೇಧವನ್ನು ಹಿಂಪಡೆಯಲು ಮನಸ್ಸು ಮಾಡಿದ್ದು, ತಜ್ಞರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅಡಿಕೆ ಬೆಳೆಗಾರರ ಪರವಾಗಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net