ಗುರುಬಸವೇಶ್ವರಸ್ವಾಮಿ ಜಾತ್ರೆ ಸಂಪನ್ನ

Gurubasaveshwaraswamy Fair is auspicious.
Gurubasaveshwaraswamy Fair is auspicious.
Published on
ಗುಬ್ಬಿ: ಪಟ್ಟಣದ ಶ್ರೀ ಮಹಾಗುರು ಕ್ಷೇತ್ರದಲ್ಲಿ ಶ್ರೀ ಸದ್ಗುರು ಶ್ರೀ ಚಿನ್ಮಯಜ್ಞಾನಿ ಗುರುಬಸವೇಶ್ವರಸ್ವಾಮಿ ಮತ್ತು ಶ್ರೀ ಆಧಿಶಕ್ತಿ ಭ್ರಮರಾಂಬಿಕೆ ದೇವಿಯ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು.
ಜಾತ್ರೆ ಪ್ರಯುಕ್ತ ಶ್ರೀಶೈಲಮಲ್ಲಿಕಾರ್ಜುನಸ್ವಾಮಿ, ಶ್ರೀ ಬೆಟ್ಟದ ಸಿದ್ದೇಶ್ವರಸ್ವಾಮಿ, ಶ್ರೀ ಬಸವೇಶ್ವರಸ್ವಾಮಿ ದೇವರ ಆಗಮನದೊಂದಿಗೆ ಆರತಿ ಸೇವೆ, ಅಗ್ನಿಕೊಂಡ ಹಾಗೂ ದೇವರುಗಳನ್ನು ಬೆಳ್ಳಿ ರಥದಲ್ಲಿ ಕೂರಿಸಿ ಪಟ್ಟಣದ ಪ್ರಮುಖ ಬೀದಿಯಲ್ಲಿ ವೀರಗಾಸೆ, ಮಹಿಳಾ ನೃತ್ಯ ಹಾಗೂ ವಿವಿಧ ಜಾನಪದ ಕಲಾತಂಡಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ಜಾತ್ರೆಗೆ ಆಗಮಿಸಿದ ಭಕ್ತರಿಗೆ ಅನ್ನ ದಾಸೋಹ ಮಾಡಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net