ಇಟಗಿ: ಭಾರತೀಯ ಸಂಸತಿ ವಿಶ್ವದಲ್ಲೇ ಶ್ರೇಷ್ಠವಾಗಿದ್ದು, ಗುರುವಿಗೆ ಉನ್ನತ ಸ್ಥಾನ ನೀಡುವ ಮೂಲಕ ಗೌರವಿಸಿದೆ ಎಂದು ಗಂದಿಗವಾಡ ರಾಜಗುರು ಹಿರೇಮಠ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಗಂದಿಗವಾಡ ಗ್ರಾಮದ ಪರಂಜ್ಯೋತಿ ಪ್ರೌಢಶಾಲೆಯಲ್ಲಿ 2002&2003ನೇ ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿಗಳಿಂದ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.