ಚಿಂತಾಮಣಿಯ ಬಾರ್ಲಹಳ್ಳಿ ಕ್ರಾಸ್ನಲ್ಲಿರುವ ಶ್ರೀ Festival ಶಿರಡಿ ಸಾಯಿಬಾಬಾ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದೇವಾಲಯದ ಟ್ರಸ್ಟ್ ಕಾಗತಿ ಮಧು, ಪದಾಧಿಕಾರಿಗಳಾದ ದಿಲೀಪ್ ಕುಮಾರ್, ಶ್ರೀ ರಾಮರೆಡ್ಡಿ, ವಿಷ್ಣುವರ್ಧನ್, ಮಧು, ಮುನಿರಾಜು, ಶ್ರೀನಿವಾಸರೆಡ್ಡಿ, ಲಾವಣ್ಯ, ನಾಗಮ್ಮ, ಪಾಲ್ ಅಯ್ಯಪ್ಪ, ಸ್ಟುಡಿಯೋ ಸಂತೋಷ, ಅರ್ಚಕ ಶಶಾಂಕ್ ಅಯ್ಯಂಗಾರ್ ಇದ್ದರು.
Published on:
Copied
Follow Us
ಚಿಂತಾಮಣಿ: ತಾಲೂಕಿನ ಬಾರ್ಲಹಳ್ಳಿ ಕ್ರಾಸ್ನ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಜು.30ರಂದು ಶ್ರೀ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ್ ವತಿಯಿಂದ ಗುರುಪೂರ್ಣಿಮಿ ಮಹೋತ್ಸವ, ಅನ್ನದಾನ ಕಾರ್ಯಕ್ರಮ ಆಯೋಜಿಸಲಾಗಿದೆ.
ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಅಂದು ಬೆಳಗ್ಗೆ ಗಣಪತಿ ಪೂಜೆ, ಕಾಕಡ ಆರತಿ ಹಾಗೂ ವಿಶೇಷ ಪೂಜೆಯೊಂದಿಗೆ ಆರಂಭವಾಗಲಿದೆ. ಮಧ್ಯಾಹ್ನ 1 ಗಂಟೆಗೆ ಮಹಾಮಂಗಳಾರತಿ ಮತ್ತು ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೇವಾಲಯದ ಟ್ರಸ್ಟ್ ಕಾಗತಿ ಮಧು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 10ರಿಂದ ರಾತ್ರಿ 10ಗಂಟೆಯವರೆಗೆ ಅನ್ನದಾನ ಸೇವೆ ಇರಲಿದೆ. ಸುಗಮ ಸಂಗಿತ, ನಾದಸ್ವರ ಕಛೇರಿ ಸಂಜೆ ಭಜನೆ, ಸತ್ಸಂಗ ಹಾಗೂ ವಿಶೇಷ ಆರತಿ, ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ.