ಗ್ಯಾರಂಟಿ ನಿಲ್ಲಿಸಿ ರೈತರ ಸಾಲ ಮನ್ನಾ ಮಾಡಿ

ಗುರುಮಠಕಲ್ ಮತಕ್ಷೇತ್ರದ ಯಡ್ಡಳ್ಳಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶರಣಗೌಡ ಕಂದಕೂರ ಶಂಕುಸ್ಥಾಪನೆ ನೆರವೇರಿಸಿದರು.
ಗುರುಮಠಕಲ್ ಮತಕ್ಷೇತ್ರದ ಯಡ್ಡಳ್ಳಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶರಣಗೌಡ ಕಂದಕೂರ ಶಂಕುಸ್ಥಾಪನೆ ನೆರವೇರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಶರಣಗೌಡ ಕಂದಕೂರ ಸಲಹೆ
  • ಯಡ್ಡಳ್ಳಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಗುರುಮಠಕಲ್: ಮಳೆ ಇಲ್ಲದೆ ರಾಜ್ಯದ ರೈತರು ಸಂಕಷ್ಟದಲ್ಲಿದ್ದು, ಗ್ಯಾರಂಟಿ ಸ್ಥಗಿತಗೊಳಿಸಿ ರೈತರ ಸಾಲ ಮನ್ನಾ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಶಾಸಕ ಶರಣಗೌಡ ಕಂದಕೂರ ಸಲಹೆ ನೀಡಿದರು.
ಮತಕ್ಷೇತ್ರದ ಹೊನಗೇರಾ, ಆಶನಾಳ, ಯಡ್ಡಳ್ಳಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾನೆ ನೆರವೇರಿಸಿ ಮಾತನಾಡಿದ ಅವರು, ಕೇವಲ ೩೮ ಶಾಸಕರಿಂದ ಆಯ್ಕೆಯಾದ ಜೆಡಿಎಸ್ ರೈತರ ಅಭಿವೃದ್ಧಿಗಾಗಿ ಕೇವಲ ೧೪ ತಿಂಗಳ ಅಽಕಾರವಽಯಲ್ಲಿ ರೈತರ ಕಷ್ಟಕ್ಕೆ ಮಿಡಿದು ಸಾಲ ಮನ್ನಾ ಮಾಡಿದ್ದೇವೆ. ೧೩೮ ಶಾಸಕರನ್ನು ಕೊಟ್ಟ ನಮ್ಮ ಜನರಿಗೆ ನೀವು ಏನು ಮಾಡಿದ್ದೀರಿ ಎಂದು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದರು. ಬೇಕಿದ್ದರೆ ಒಂದು ವರ್ಷದ ಮಟ್ಟಿಗೆ ಗ್ಯಾರಂಟಿ ಯೋಜನೆ ಸ್ಥಗಿತಗೊಳಿಸಿ ರೈತರ ಸಾಲಮನ್ನಾ ಮಾಡಬೇಕು ಎಂದು ಅವರು ಮತ್ತೊಮ್ಮೆ ಸಲಹೆ ನೀಡಿದರು.
ಹತ್ತಿಕುಣಿ ಡ್ಯಾಮ್ ನವೀಕರಣಕ್ಕೆ ಅನುದಾನ ತಂದ ಮೇಲೆ ಸಭೆಗೆ ಬರ್ತಿನಿ ಅಂದಿದ್ದೇ ಈಗ ೭೫ ಕೋಟಿ ಬಂದಿದೆ ಈಗ ಸಭೆಗೆ ಬರ್ತಿನಿ. ಕೇಂದ್ರ ಸಚಿವ ವಿ.ಸೋಮಣ್ಣ ನಾಲಾ ಆಧುನೀಕರಣಕ್ಕೆ ೭೫ ಕೋಟಿ ರೂ. ನೀಡಿದ್ದಾರೆ ಅವನ್ನು ರೈತರು ಎಂದಿಗೂ ಮರೆಯಬೇಡಿ. ಹತ್ತಿಕುಣಿ ಡ್ಯಾಮ್ ಕೆಳ ಹಂತದ ರೈತರು ನೀರಿನ ಅನುಕೂಲವಾಗಲಿದೆ ಎಂದು ಹೇಳಿದರು.
ಯಾದಗಿರಿ-ಹೈದರಾಬಾದ್ ಮುಖ್ಯ ರಸ್ತೆಯಿಂದ ಆಶನಾಳ ಗ್ರಾಮದವರೆಗೆ ೧ ಕೋಟಿ ರೂ. ವೆಚ್ಚದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಲಾಯಿತು. ಪ್ರಾಥಮಿಕ ಶಾಲೆ ಆಶನಾಳ ೪ ಕೋಣೆ ನಿರ್ಮಾಣ ಮತ್ತು ೧೫ ಲಕ್ಷ ರೂ.ವೆಚ್ಚದ ರಸ್ತೆ ಚರಂಡಿ ಕಾಮಗಾರಿಗೆ ಭರವಸೆ ನೀಡಿದರು. ಅದೇ ರೀತಿ ೨೫ ಲಕ್ಷ ಬ್ರಿಡ್ಜ್ ರಸ್ತೆ ಸುಧಾರಣೆ ಹಾಗೂ ೨೦ ಲಕ್ಷ ರೂ. ಸಿಸಿ ರಸ್ತೆ ಮಾಡಲಾಗಿದೆ. ೧೩.೫೮ ಲಕ್ಷ ವಾಲ್ಮೀಕಿ ಸಮುದಾಯ ಭವನಕ್ಕೆ ಅನುದಾನ ನೀಡಲಾಗಿದೆ ಎಂದರು.
ಈ ವೇಳೆ ತಾಪಂ ಇಒ ಮಹಾದೇವ, ಪಿಡಬ್ಲ್ಯುಡಿ ಎಇಇ ಕೈಲಾಶ, ನಿರ್ಮಿತಿ ಕೇಂದ್ರದ ಅಽಕಾರಿ ಕಿರಣಕುಮಾರ ಹೂಗಾರ, ಜೆಸ್ಕಾಂ ಎಇಇ ಮಾರ್ಕಂಡೇಯ, ಎಇ ಶಂಕರಗೌಡ, ಪರಶುರಾಮ, ಪಿಆರ್‌ಇ ಅಽಕಾರಿ ಶರಣಬಸವ, ಲ್ಯಾಂಡ್ ಆರ್ಮಿ ಬನ್ನಪ್ಪ ಕೋಮಾರ, ಬಿಇಒ ಈರಣ್ಣ ಕನ್ನಳ್ಳಿ, ಆರ್‌ಐ ರಾಜಶೇಖರ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶಚಂದ್ರ ಕಟಕಟಿ, ಟಿಎಪಿಸಿಎಂಸಿ ಅಧ್ಯಕ್ಷ ಹಣಮಂತ ಅಕ್ಕಿ, ಬಸ್ಸುಗೌಡ ಚಾಮನಳ್ಳಿ, ಸೋಮನಗೌಡ ಬೆಳಗೇರಾ, ಬಾಪೂಗೌಡ ರಾಮಸಮುದ್ರ, ಈಶ್ವರ ನಾಯಕ, ಸಿದ್ದಣ್ಣ ಬೆಳಗೇರಾ, ಶರಣು ಗಾಡಿ, ನರಸಿಂಹರಡ್ಡಿ ಚಿಂತಗುAಟಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net