ಗುಡುವನಹಳ್ಳಿ ಕೆರೆ ಏರಿ ರೇಲಿಂಗ್ಸ್​ ದುರಸ್ತಿ / VIJAYAPUR

ವಿಜಯಪುರದ ದೇವನಹಳ್ಳಿ ಮುಖ್ಯ ರಸ್ತೆಯ ಗುಡುವನಹಳ್ಳಿ ಕೆರೆ ಏರಿಯ ಮೇಲೆ ಅಳವಡಿಸಲಾಗಿದ್ದ ರೇಲಿಂಗ್ಸ್​ಗಳನ್ನು ಸರಿಪಡಿಸುತ್ತಿರುವುದು.
ವಿಜಯಪುರದ ದೇವನಹಳ್ಳಿ ಮುಖ್ಯ ರಸ್ತೆಯ ಗುಡುವನಹಳ್ಳಿ ಕೆರೆ ಏರಿಯ ಮೇಲೆ ಅಳವಡಿಸಲಾಗಿದ್ದ ರೇಲಿಂಗ್ಸ್​ಗಳನ್ನು ಸರಿಪಡಿಸುತ್ತಿರುವುದು.
Published on
ವಿಜಯಪುರ : ಪಟ್ಟಣದ ದೇವನಹಳ್ಳಿ ರಸ್ತೆಯ ಗುಡುವನಹಳ್ಳಿ ಕೆರೆ ಏರಿ ಮೇಲೆ ವಾಹನಗಳ ಸುರಕ್ಷತೆಗಾಗಿ ಅಳವಡಿಸಿದ್ದ ಕಬ್ಬಿಣದ ರೇಲಿಂಗ್ಸ್​ (ತಡೆಗೋಡೆ) ಸರಿಪಡಿಸಲಾಗಿದೆ.
ವಿಜಯಪುರ&ದೇವನಹಳ್ಳಿ ಮುಖ್ಯ ರಸ್ತೆಯ ಗುಡುವನಹಳ್ಳಿ ಕೆರೆ ಏರಿಯ ಮೇಲೆ ಅಳವಡಿಸಲಾಗಿದ್ದ ರೇಲಿಂಗ್ಸ್​ಗಳ ನೆಟ್​-ಬೋಲ್ಟ್​ಗಳು ಕಳ್ಳರ ಪಾಲಾಗಿ, ಸವಾರರ ಜೀವಕ್ಕೆ ಕುತ್ತು ತರುವಂತಿದ್ದ ಪರಿಸ್ಥಿತಿಯ ಬಗ್ಗೆ ಮಾ.3ರಂದು "ವಿಜಯವಾಣಿಯಲ್ಲಿ ವರದಿ ಪ್ರಕಟಿಸಲಾಗಿತ್ತು. ವರದಿ ಗಮನಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದೀಗ ದುರಸ್ತಿ ಪೂರ್ಣಗೊಳಿಸಿದ್ದಾರೆ.
ಏನಾಗಿತ್ತು?: ಕೆರೆ ಏರಿ ಮೇಲೆ ವಾಹನಗಳ ಸುರಕ್ಷತೆಗಾಗಿ ಹಾಕಲಾಗಿದ್ದ ಕಬ್ಬಿಣದ ರೇಲಿಂಗ್ಸ್​ಗಳ ನೆಟ್​ ಮತ್ತು ಬೋಲ್ಟ್​ಗಳನ್ನು ಕಳ್ಳರು ಬಿಚ್ಚಿ ಸಾಗಿಸುತ್ತಿದ್ದರು. ಇದರಿಂದ ರೇಲಿಂಗ್ಸ್​ಗಳು ಅಲುಗಾಡುತ್ತಿದ್ದು, ಯಾವುದೇ ಕ್ಷಣದಲ್ಲಿ ಕೆರೆಗೆ ವಾಹನಗಳು ಉರುಳುವ ಭೀತಿ ಎದುರಾಗಿತ್ತು. ಅಧಿಕಾರಿಗಳ ರ್ನಿಲಕ್ಷ$್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪತ್ರಿಕೆಯು ವರದಿ ಮಾಡುವ ಮೂಲಕ ಇಲಾಖೆ ಗಮನ ಸೆಳೆದಿತ್ತು. ವರದಿ ಬೆನ್ನಲ್ಲೇ ಎಚ್ಚೆತ್ತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೆಲ ದಿನಗಳಿಂದ ಕೆಲಸ ನಿರ್ವಹಿಸಿದ ಸಿಬ್ಬಂದಿ, ಕೆರೆ ಏರಿಯ ಸುಮಾರು ಒಂದು ಕಿಲೋಮೀಟರ್​ಗೂ ಎರಡು ಬದಿಯ ರೈಲಿಂಗ್ಸ್​ ಸರಿಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net