ಯುವಕರಿಗೆ ಜಿಟಿಟಿಸಿ ಕಾಲೇಜು ಭರವಸೆಯ ಕೇಂದ್ರ Rajanna

ಮಧುಗಿರಿ Rajanna ತಾಲೂಕಿನ ದೊಡ್ಡೇರಿ ಹೋಬಳಿ ವ್ಯಾಪ್ತಿಯ ರಂಗಾಪುರ ಗೊಲ್ಲರಹಟ್ಟಿ ಸಮೀಪ ನೂತನವಾಗಿ ನಿಮಾರ್ಣಗೊಳ್ಳುತ್ತಿರುವ ಪ್ರತಿಷ್ಠಿತ ಜಿಟಿಟಿಸಿ ಕಾಲೇಜು ನಿಮಾರ್ಣ ಕಾಮಗಾರಿಯನ್ನು ಶಾಸಕ ಕೆ.ಎನ್​. ರಾಜಣ್ಣ ಪರಿಶೀಲಿಸಿದರು. ತಾಪಂ ಮಾಜಿ ಸದಸ್ಯ ನಜೀರ್​ ಸಾಬ್​, ಮುಖಂಡರಾದ ಶ್ರೀರಂಗಪ್ಪ, ಸಿಡಿದುಗಲ್​ ಮುದ್ದೇಗೌಡ, ತೋಟಗಾರಿಕಾ ಸಹಾಯಕ ನಿರ್ದೇಶಕ ಶಶಿಕುಮಾರ್​ ಇದ್ದರು.

Published on

ದೊಡ್ಡೇರಿ:

ಕ್ಷೇತ್ರದ ಯುವಜನರ ಭವಿಷ್ಯಕ್ಕೆ ಜಿಟಿಟಿಸಿ ಕಾಲೇಜು ಹೊಸ ಭರವಸೆಯ ಕೇಂದ್ರವಾಗಲಿದೆ

Rajanna

ಎಂದು ಮಾಜಿ ಸಚಿವ ಶಾಸಕ ಕೆ.ಎನ್​.ರಾಜಣ್ಣ ತಿಳಿಸಿದರು.

ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿ ವ್ಯಾಪ್ತಿಯ ರಂಗಾಪುರ ಗೊಲ್ಲರಹಟ್ಟಿ ಸಮೀಪ ಬುಧವಾರ ನೂತನವಾಗಿ ನಿಮಾರ್ಣಗೊಳ್ಳುತ್ತಿರುವ ಪ್ರತಿಷ್ಠಿತ ಜಿಟಿಟಿಸಿ ಕಾಲೇಜು ನಿಮಾರ್ಣ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ಆಧುನಿಕ ತಾಂತ್ರಿಕ ಶಿಕ್ಷಣ, ಕೌಶಲಾಭಿವೃದ್ಧಿ ಹಾಗೂ ಕೈಗಾರಿಕಾ ವಲಯಕ್ಕೆ ಅಗತ್ಯವಿರುವ ಉದ್ಯೋಗಪರ ತರಬೇತಿಯನ್ನು ನೀಡುವ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿಕೊಡುವ ಉದ್ದೇಶದಿಂದ ಗ್ರಾಮೀಣ ಭಾಗದಲ್ಲಿ ಜಿಟಿಟಿಸಿ ಕಾಲೇಜು ಪ್ರಾರಂಭಿಸಲಾಗಿದೆ ಎಂದರು.
ಇದರಿಂದ ವಿದ್ಯಾರ್ಥಿಗಳಿಗೆ ತಮ್ಮ ಊರಿನಲ್ಲೇ ಗುಣಮಟ್ಟದ ತಾಂತ್ರಿಕ ಶಿಕ್ಷಣ ಮತ್ತು ಕೌಶಲ ತರಬೇತಿ ಪಡೆಯುವ ಅವಕಾಶ ಕಲ್ಪಿಸಲಿದೆ. ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಜ್ಞಾನ, ನವೀನ ಚಿಂತನೆ ಮತ್ತು ಉದ್ಯೋಗಕ್ಕೆ ಅಗತ್ಯವಾದ ಕೌಶಲಗಳನ್ನು ಬೆಳೆಸುವ ಮೂಲಕ, ಮಧುಗಿರಿ ಕ್ಷೇತ್ರವನ್ನು ಶೈಕ್ಷಣಿಕ ಹಾಗೂ ಕೌಶಲಾಭಿವೃದ್ಧಿಯ ಹೊಸ ದಿಕ್ಕಿನತ್ತ ಕೊಂಡೊಯ್ಯುವ ಮಹತ್ವದ ಹೆಜ್ಜೆ ಇದಾಗಿದೆ.

ಯುವಕರಿಗೆ ಶಿಕ್ಷಣ, ಕೌಶಲ್ಯ, ಉದ್ಯೋಗದ ಹೊಸ ಅವಕಾಶಗಳು ದೊರೆಯಲಿದ್ದು, ಅಭಿವೃದ್ಧಿಯತ್ತ ಮಧುಗಿರಿ ಸಾಗುತಿದ್ದು, ಕ್ಷೇತ್ರದ ಮತ್ತೊಂದು ಮಹತ್ವದ ಹೆಜ್ಜೆ ಇದಾಗಿದೆ ಎಂದ ಅವರು ಗುಣಮಟ್ಟದಿಂದ ಕಾಮಗಾರಿ ನಿರ್ಮಿಸಲು ಗುತ್ತಿಗೆದಾರರಿಗೆ ಸೂಚಿಸಿದರು.

ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಸೀಲ್ದಾರ್​ ನಂದಿನಿ, ತಾಪಂ ಇಒ ಉತ್ತಮ್​, ಪಿಡಬ್ಲ್ಯುಡಿ ಇಇ ಹನುಮಂತರಾವ್​, ಎಇಇ ಸಂಪತ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net