ಬರಗುಡಿ ಗ್ರಾಮದ ಊರ ಹೊರಗೆ ಲಚ್ಯಾಣ ರಸ್ತೆಯಲ್ಲಿ ಹಿಟ್ಟಿನ ಗಿರಣಿ ಇರಲಿಲ್ಲ. ಹೀಗಾಗಿ ಗೋಧಿ, ಜೋಳ ಬೀಸಲು ಗ್ರಾಮದಲ್ಲಿ ದೂರದವರೆಗೆ ಹೋಗಬೇಕಾಗಿತ್ತು. ಅದನ್ನು ಮನಗಂಡ ಈ ಮಹಿಳೆ ರತ್ನಾಬಾಯಿ 20 ತಿಂಗಳ ಗೃಹಲಕ್ಷ್ಮೀ ಹಣ ಮತ್ತು ತನ್ನ ಸ್ವಂತ ಹಣ ಸೇರಿಸಿ ‘ಸೆಕೆಂಡ್ ಹ್ಯಾಂಡ್’ ಹಿಟ್ಟಿನ ಗಿರಣಿ ಖರೀದಿಸಿ ಪ್ರಾರಂಭಿಸಿದ್ದಾಳೆ.