ಗೃಹ ಜ್ಯೋತಿ ಮರು ಪರಿಶೀಲನೆ ಕಾರ್ಯ; ಮೆಸ್ಕಾಂ ಮುನ್ನಡೆ, ಜೆಸ್ಕಾಂಗೆ ಕೊನೆಯ ಸ್ಥಾನ

power
power
Published on

ಪ್ರಮುಖ ಮುಖ್ಯಾಂಶಗಳು

  • ಮೆಸ್ಕಾಂ ಶೇ.72 ಸಾಧನೆಯೊಂದಿಗೆ ಮೊದಲ ಸ್ಥಾನ
  • ಜೆಸ್ಕಾಂ ಕೇವಲ ಶೇ.37 ಸಾಧನೆಯೊಂದಿಗೆ ಕೊನೆಯ ಸ್ಥಾನ
ಗೃಹ ಜ್ಯೋತಿ ಮರು ಪರಿಶೀಲನೆ ಕಾರ್ಯ
ಮೆಸ್ಕಾಂ ಮುನ್ನಡೆ, ಜೆಸ್ಕಾಂಗೆ ಕೊನೆಯ ಸ್ಥಾನ
ಬೆಂಗಳೂರು:
ರಾಜ್ಯದ ಮಹತ್ವಾಕಾಂಕ್ಷೆಯ ಗೃಹ ಜ್ಯೋತಿ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಮರು ಪರಿಶೀಲನೆ ಕಾರ್ಯ ವೇಗ ಪಡೆದುಕೊಂಡಿದ್ದು, ಐದು ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂ) ವ್ಯಾಪ್ತಿಯಲ್ಲಿ ಇದುವರೆಗೆ 1.65 ಕೋಟಿ ಸಂಪರ್ಕಗಳ ಪೈಕಿ 84.84 ಲಕ್ಷ (ಶೇ.51.3) ಸಂಪರ್ಕಗಳ ಮಾಹಿತಿ ಸಂಗ್ರಹಿಸಲಾಗಿದೆ. ಇನ್ನೂ 80.47 ಲಕ್ಷ ಸಂಪರ್ಕಗಳ ಪರಿಶೀಲನೆ ಬಾಕಿಯಿದೆ.
ಪರಿಶೀಲನೆ ಪ್ರಗತಿಯಲ್ಲಿ ಮೆಸ್ಕಾಂ ಶೇ.72 ಸಾಧನೆಯೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಜೆಸ್ಕಾಂ ಕೇವಲ ಶೇ.37 ಸಾಧನೆಯೊಂದಿಗೆ ಕೊನೆಯ ಸ್ಥಾನದಲ್ಲಿದೆ.
ಎಸ್ಕಾಂವಾರು ಪ್ರಗತಿ:
ಮೆಸ್ಕಾಂ: 15,93,647 ಸಂಪರ್ಕಗಳಲ್ಲಿ 11,51,702 (ಶೇ.72) ಪರಿಶೀಲನೆ; 4,41,945 ಬಾಕಿ.
ಹೆಸ್ಕಾಂ: 34,96,429 ಸಂಪರ್ಕಗಳಲ್ಲಿ 20,23,682 (ಶೇ.57) ಪರಿಶೀಲನೆ; 14,72,747 ಬಾಕಿ.
ಬೆಸ್ಕಾಂ: 68,86,860 ಸಂಪರ್ಕಗಳಲ್ಲಿ 34,62,865 (ಶೇ.50.28) ಪರಿಶೀಲನೆ; 34,23,995 ಬಾಕಿ. ಸೆಸ್ಕ್: 24,13,980 ಸಂಪರ್ಕಗಳಲ್ಲಿ 10,30,917 (ಶೇ.42) ಪರಿಶೀಲನೆ; 13,83,063 ಬಾಕಿ. ಜೆಸ್ಕಾಂ: 21,41,736 ಸಂಪರ್ಕಗಳಲ್ಲಿ 7,93,105 (ಶೇ.37) ಪರಿಶೀಲನೆ; 13,48,631 ಬಾಕಿ ಇದೆ.
ಯೋಜನೆಯ ನೈಜ ಅರ್ಹ ಫಲಾನುಭವಿಗಳನ್ನು ಗುರುತಿಸುವ ಉದ್ದೇಶದಿಂದ ಎಸ್ಕಾಂ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ವೇಳೆ ಫಲಾನುಭವಿಗಳ ವಾಸಸ್ಥಳ, ಕುಟುಂಬದ ವಿವರ, ವಿದ್ಯುತ್ ಬಳಕೆ ಸೇರಿದಂತೆ ವಿವಿಧ ಮಾಹಿತಿಯನ್ನು ಪರಿಶೀಲಿಸಲಾಗುತ್ತಿದೆ.
ರಾಜ್ಯದ ಮತದಾರರಿಗೆ ಮಾತ್ರ ಗೃಹ ಜ್ಯೋತಿ ಯೋಜನೆಯ ಪ್ರಯೋಜನ ದೊರೆಯಬೇಕು ಎಂಬುದು ಮುಖ್ಯಮಂತ್ರಿ ನೀಡಿರುವ ಸ್ಪಷ್ಟ ನಿರ್ದೇಶನವಾಗಿದೆ. ಈ ಹಿನ್ನೆಲೆಯಲ್ಲಿ ಪರಿಶೀಲನೆ ವೇಳೆ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಸೇರಿದಂತೆ ಅಗತ್ಯ ದಾಖಲೆಗಳ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತಿದೆ.
ಬಾಕ್ಸ್
ಎಸ್ಕಾಂ ಒಟ್ಟು ಸಂಪರ್ಕ ಪರಿಶೀಲನೆ ಬಾಕಿ ಇರುವುದು
ಬೆಸ್ಕಾಂ 6886860 3462865 3423995
ಸೆಸ್ಕ್ 2413980 1030917 1383063
ಜೆಸ್ಕಾಂ 2141736 793105 1348631
ಹೆಸ್ಕಾಂ 3496429 2023682 1472747
ಮೆಸ್ಕಾಂ 1593647 1151702 441945
ಒಟ್ಟು 16532652 8484665 8047987

*ಐದು ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂ) ವ್ಯಾಪ್ತಿಯಲ್ಲಿ ಇದುವರೆಗೆ 1.65 ಕೋಟಿ ಸಂಪರ್ಕಗಳ ಪೈಕಿ 84.84 ಲಕ್ಷ (ಶೇ.51.3) ಸಂಪರ್ಕಗಳ ಮಾಹಿತಿ ಸಂಗ್ರಹಿಸಲಾಗಿದೆ. ಇನ್ನೂ 80.47 ಲಕ್ಷ ಸಂಪರ್ಕಗಳ ಪರಿಶೀಲನೆ ಬಾಕಿಯಿದೆ.



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net