ಇಲಾಖಾ ವಿಚಾರಣೆಯಲ್ಲಿ ಅಧಿಕಾರಿ ದೋಷಮುಕ್ತರಾಗಿದ್ದಾರೆ ಎಂಬ ಕಾರಣ ನೀಡಿ, ಕ್ರಿಮಿನಲ್ ತನಿಖೆಯ ಪ್ರಾಥಮಿಕ ಹಂತದಿಂದಲೇ ಅವರನ್ನು ರಸಲು ಸಾಧ್ಯವಿಲ್ಲ. ಇಲಾಖಾ ವಿಚಾರಣೆ ಮತ್ತು ಕ್ರಿಮಿನಲ್ ತನಿಖೆಗಳು ವಿಭಿನ್ನ ಕಾನೂನು ಚೌಕಟ್ಟು ಹೊಂದಿದ್ದು, ಒಂದರ ಫಲಿತಾಂಶ ಇನ್ನೊಂದರ ಮೇಲೆ ಪರಿಣಾಮ ಬೀರಬಾರದು ಎಂದು ನ್ಯಾಯಪೀಠ ಹೇಳಿದೆ.