ಗುಬ್ಬಿ ತಾಲೂಕು meeting ಬೆಟ್ಟದಹಳ್ಳಿ ಡೇರಿಯಲ್ಲಿ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ನಿವೃತ್ತ ಕಾರ್ಯದರ್ಶಿ ಆನಂದಪ್ಪ ಅವರನ್ನು ಸನ್ಮಾನಿಸಲಾಯಿತು. ಗಂಗಾಧರಯ್ಯ, ರುದ್ರೇಶ್, ಗಂಗಾಧರಯ್ಯ, ಆನಂದಪ್ಪ ಇದ್ದರು.
ಎಂ.ಎನ್.ಕೋಟೆ: ರೈತರು ಹೈನುಗಾರಿಕೆ ಮೂಲಕ ಹೆಚ್ಚು ಕೆಲಸದಲ್ಲಿ ತೊಡಗಿಸಿಕೊಂಡರೆ meeting ಆರ್ಥಿಕವಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯ ಬೆಟ್ಟದಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂದ ಅಧ್ಯಕ್ಷ ಕುಮಾರಸ್ವಾಮಿ ತಿಳಿಸಿದರು.
ಗುಬ್ಬಿ ತಾಲೂಕು ಹಾಗಲವಾಡಿ ಹೋಬಳಿ ಬೆಟ್ಟದಹಳ್ಳಿ ಡೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿ, ಸಹಕಾರ ಸಂಘದಲ್ಲಿ ರೈತರು ಜಾಸ್ತಿ ಹಾಲು ಹಾಕುತ್ತಿದ್ದು, ಸಂಘ ಉತ್ತಮವಾಗಿ ನಡೆಯುತ್ತಿದೆ. ಸಂಘಕ್ಕೆ 4 ಲಕ್ಷ ರೂ. ಲಾಭ ಬಂದಿರುವುದನ್ನು ಅನ್ನರಾತರಿಗೆ ಬೋನಸ್ ರೂಪದಲ್ಲಿ ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ರೈತರು ಹೈನುಗಾರಿಕೆಗೆ ಹೆಚ್ಚು ಒತ್ತು ನೀಡುತ್ತಿಲ್ಲ. ಪ್ರತಿಯೊಬ್ಬರು ಕೃಷಿಯೊಂದಿಗೆ ಹೈನುಗಾರಿಕೆ ಮಾಡಿ ಡೇರಿಗೆ ಹಾಲು ಹಾಕಬೇಕು ಎಂದು ತಿಳಿಸಿದರು.
ತಾಲೂಕು ವಿಸ್ತರಣಾಧಿಕಾರಿ ರಾಜು ಮಾತನಾಡಿ, ಹಸು ಮರಣ ಹೊಂದಿದರೆ, ಬಣವೆ ಸುಟ್ಟು ಹೋದರೆ, ಹಾಲು ಹಾಕುವ ರೈತರು ಮೃತ್ತಪಟ್ಟರೆ ಒಕ್ಕೂಟದಿಂದ ಪರಿಹಾರ ನೀಡುತ್ತೇವೆ. ಕೃಷಿಕರು ಹೆಚ್ಚು ಹಾಲನ್ನು ಡೇರಿಗೆ ಹಾಕುವ ಮೂಲಕ ಪ್ರೋತ್ಸಾಹಧನ ಪಡೆದುಕೊಳ್ಳಬೇಕು ಎಂದರು.
40 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾದ ಕಾರ್ಯದರ್ಶಿ ಆನಂದಪ್ಪ ಅವರನ್ನು ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ಗಂಗಾಧರಯ್ಯ, ನಿರ್ದೇಶಕ ರುದ್ರೇಶ್, ಗಂಗಾಧರಯ್ಯ, ನಿವೃತ್ತ ಕಾರ್ಯದರ್ಶಿ ಆನಂದಪ್ಪ ಇತರರು ಇದ್ದರು.