ಸಮುದಾಯ ಸಂಘಟನೆಗೆ ಹೆಚ್ಚಿನ ಒತ್ತು ಸಿಗಲಿ

ಬೇಲೂರಿನ ಶಿವಕುಮಾರ ಸ್ವಾಮೀಜಿ ಸಮುದಾಯದ ಭವನದಲ್ಲಿ ಆಯೋಜಿಸಿದ್ದ ಸರ್ವ ಸದಸ್ಯರ ಸಭೆಯನ್ನು ಗಣ್ಯರು ಉದ್ಘಾಟಿಸಿದರು. ಮಾ.ಶಿವಮೂರ್ತಿ, ರುದ್ರಯ್ಯ, ಬಿ.ಬಿ.ಶಿವರಾಜ್,  ವಿರೂಪಾಕ್ಷಯ್ಯ, ರೇಣುಕಾ ಆರಾಧ್ಯ, ಲಿಂಗಾರಾಧ್ಯ, ವಿಶ್ವನಾಥಯ್ಯ, ರವಿಕುಮಾರ್ ಇತರರಿದ್ದರು.
ಬೇಲೂರಿನ ಶಿವಕುಮಾರ ಸ್ವಾಮೀಜಿ ಸಮುದಾಯದ ಭವನದಲ್ಲಿ ಆಯೋಜಿಸಿದ್ದ ಸರ್ವ ಸದಸ್ಯರ ಸಭೆಯನ್ನು ಗಣ್ಯರು ಉದ್ಘಾಟಿಸಿದರು. ಮಾ.ಶಿವಮೂರ್ತಿ, ರುದ್ರಯ್ಯ, ಬಿ.ಬಿ.ಶಿವರಾಜ್, ವಿರೂಪಾಕ್ಷಯ್ಯ, ರೇಣುಕಾ ಆರಾಧ್ಯ, ಲಿಂಗಾರಾಧ್ಯ, ವಿಶ್ವನಾಥಯ್ಯ, ರವಿಕುಮಾರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬೇಡ ಜಂಗಮ ಸಮಾಜ ಸಂಘದ ತಾಲೂಕು ಗೌರವಾಧ್ಯಕ್ಷ ಮಾ.ಶಿವಮೂರ್ತಿ
  • ಶಿವಕುಮಾರ ಸ್ವಾಮೀಜಿ ಸಮುದಾಯದ ಭವನ

ಬೇಲೂರು:

ಮೀಸಲಾತಿ ಹಕ್ಕೊತ್ತಾಯಕ್ಕಾಗಿ ಸಮುದಾಯದ ಸಂಘಟನೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ರಾಜ್ಯ ಸಂಘಟನೆಗೆ ಶಕ್ತಿ ತುಂಬಬೇಕು ಎಂದು ಬೇಡ ಜಂಗಮ ಸಮಾಜ ಸಂಘದ ತಾಲೂಕು ಗೌರವಾಧ್ಯಕ್ಷ ಮಾ.ಶಿವಮೂರ್ತಿ ಹೇಳಿದರು.

ಪಟ್ಟಣದ ಶಿವಕುಮಾರ ಸ್ವಾಮೀಜಿ ಸಮುದಾಯದ ಭವನದಲ್ಲಿ ತಾಲೂಕು ಬೇಡ ಜಂಗಮ ಸಮಾಜ ಸಂಘದಿಂದ ಭಾನುವಾರ ಆಯೋಜಿಸಿದ್ದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು. ಮೀಸಲಾತಿ ಜಾರಿಗೆ ಬಂದ ದಿನದಿಂದ ಬೇಡ ಜಂಗಮರಿಗೆ ನ್ಯಾಯಬದ್ಧ ಮೀಸಲಾತಿ ನೀಡಲಾಗಿದೆ. ಕೆಲವರು ಮೀಸಲಾತಿಗೆ ಅಡ್ಡಿ ಪಡಿಸುತ್ತಿರುವುದರಿಂದ ಮೀಸಲಾತಿ ಸಿಗುತ್ತಿಲ್ಲ. ಆದ್ದರಿಂದ ಹಿರೇಮಠ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಹೋರಾಟಕ್ಕೆ ಬೇಲೂರಿನಿಂದ ಬೆಂಬಲ ನೀಡಲಾಗಿದೆ ಎಂದರು.
ತಾಲೂಕು ಬೇಡ ಜಂಗಮ ಸಮಾಜದ ಅಧ್ಯಕ್ಷ ರುದ್ರಯ್ಯ ಮಾತನಾಡಿ, ತಾಲೂಕು ಸಂಘದಲ್ಲಿ 180 ಜನರು ಸದಸ್ಯತ್ವ ಹೊಂದಿದ್ದು, ಬ್ಯಾಂಕ್‌ನಲ್ಲಿ 3 ಲಕ್ಷ ರೂ. ಠೇವಣಿ ಇದೆ. ಪ್ರತಿ ತಿಂಗಳ ವಾರ್ಷಿಕ ಸಭೆಯ ವೆಚ್ಚವನ್ನು ಆಡಳಿತ ಮಂಡಳಿ ಸದಸ್ಯರು ವೈಯಕ್ತಿಕವಾಗಿ ಭರಿಸುತ್ತಿದ್ದಾರೆ. ಇದು ಸಂಘದ ಬಲವರ್ಧನೆಗೆ ಮುನ್ನುಡಿ ಬರೆದಂತಾಗಿದ್ದು, ಎಲ್ಲರೂ ಸದಸ್ಯತ್ವ ಪಡೆದು ಸಹಕಾರ ನೀಡಬೇಕು ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಬಿ.ಬಿ.ಶಿವರಾಜ್ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಯ್ಯ, ಖಜಾಂಚಿ ರೇಣುಕಾ ಆರಾಧ್ಯ, ಉಪಾಧ್ಯಕ್ಷ ವಿರೂಪಾಕ್ಷಯ್ಯ, ಗೌರವ ಸಲಹೆಗಾರ ಲಿಂಗಾರಾಧ್ಯ, ಸಮಾಜದ ವಿಶ್ವನಾಥಯ್ಯ, ರವಿಕುಮಾರ್, ಅರುಣ್ ಕುಮಾರ್, ಸಾಲುಮರದ ಸದಾಶಿವಯ್ಯ, ವಿಜಯಕುಮಾರಶಾಸ್ತ್ರಿ, ಗುರುಮಲ್ಲಯ್ಯ, ಸೋಮಶೇಖರಯ್ಯ, ಶಿವಶಂಕರಯ್ಯ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net