ಬಸವಕಲ್ಯಾಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದಲ್ಲಿ ಶನಿವಾರ ಸಂಭ್ರಮ ನಿಮಿತ್ತ ಆಯೊಜಿಸಿದ್ದ ವಿಶೇಷ ಅಗತ್ಯವುಳ್ಳ ಮಕ್ಕಳ ಕುರಿತ ಸಂವಾದ ಕಾರ್ಯಕ್ರಮವನ್ನು ಬಿಐಇಆರ್ಟಿ ಶರಣಪ್ಪ ಕೆ. ಜಿ ಉದ್ಘಾಟಿಸಿದರು. ಉಪ ಪ್ರಾಚಾರ್ಯ ರಾಜೇಂದ್ರ ಟಿಳೆ, ಉದ್ಧವರಾವ ಉಪಾಸೆ, ಸಂಜುಕುಮಾರ ನಡುಕರ್, ಶೋಭಾ ಮಠಪತಿ, ಪರವೇಜ್ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶರಣಪ್ಪ ಕೆಜಿ ಹೇಳಿಕೆ
ಬಸವಕಲ್ಯಾಣ ಸರ್ಕಾರಿ ಶಾಲೆಯಲ್ಲಿ ಶನಿವಾರ ಸಂಭ್ರಮ
ಬಸವಕಲ್ಯಾಣ: ವಿಶೇಷ ಅಗತ್ಯವುಳ್ಳ ಮಕ್ಕಳ ಅರೋಗ್ಯ ಮತ್ತು ಶಿಕ್ಷಣದ ಬಗ್ಗೆ ಸರ್ಕಾರದಿಂದ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ ಎಂದು ೇತ್ರ ಸಂಪನ್ಮೂಲ ಕೇಂದ್ರದ ೇತ್ರ ಸಮನ್ವಯ ಶಿಕ್ಷಣದ ಸಂಪನ್ಮೂಲ ಶಿಕ್ಷಕ (ಬಿಐಇಆರ್ಟಿ) ಶರಣಪ್ಪ ಕೆ.ಜಿ. ಹೇಳಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದಲ್ಲಿ ಶನಿವಾರ ಸಂಭ್ರಮ ನಿಮಿತ್ತ ಶನಿವಾರ ಆಯೊಜಿಸಿದ್ದ ವಿಶೇಷ ಅಗತ್ಯವುಳ್ಳ ಮಕ್ಕಳ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 21 ಪ್ರಕಾರ ವಿಕಲತೆ ಇರುವ ಮಕ್ಕಳನ್ನು ವಿಶೇಷ ಅಗತ್ಯವುಳ್ಳ ಮಕ್ಕಳು ಎಂದು ಗುರುತಿಸಲಾಗಿದೆ, ಇವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಯೋಜನೆ ರೂಪಿಸಲಾಗಿದೆ ಎಂದರು.
ದೃಷ್ಟಿದೋಷ, ಶ್ರವಣ ದೋಷ, ಕುಬ್ಜತೆ, ಬೌದ್ಧಿಕ ಅಂಗವೈಕಲ್ಯ, ಹೀಮೋಫಿಲಿಯಾ ಸೇರಿ ಇತರ ಸಮಸ್ಯೆ ಇರುವ ಮಕ್ಕಳಿಗೆ ಪ್ರಾಥಮಿಕ ಶಾಲೆ ಹಂತದಿಂದ ಪಿಯುಸಿವರೆಗೆ ಉಚಿತ ಶಿಕ್ಷಣ ಕಲ್ಪಿಸಲಾಗುತ್ತಿದೆ. ಈ ಮಕ್ಕಳ ಸ್ಥಿತಿ ಅನುಗುಣವಾಗಿ ಸರ್ಕಾರ ಹಲವಾರು ಸಾಮಗ್ರಿಗಳನ್ನು ನೀಡುತ್ತದೆ. ದೇಶದ ನುರಿತ ವೈದ್ಯರಿಂದ ಉಚಿತ ತಪಾಸಣೆ ಮಾಡಿಸಿ ಗುಣಮುಖರಾಗುವ ಹಾಗೆ ಮಾಡಲಾಗುತ್ತಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಉಪ ಪ್ರಾಚಾರ್ಯ ರಾಜೇಂದ್ರ ಟಿಳೆ ಮಾತನಾಡಿ, ಪ್ರತಿ ತಿಂಗಳ ಮೂರನೆ ಶನಿವಾರ ಬ್ಯಾಗ ರಹಿತ ದಿನದಿಂದು ಸರ್ಕಾರ ಸೂಚಿಸಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಹೊಸ ಅನುಭವ ನೀಡುತ್ತಿರುವುದರಿಂದ ಮಕ್ಕಳು ತಮ್ಮ ದೈನಂದಿನ ಜೀವನದಲ್ಲಿ ಪ್ರತಿಯೊಂದು ಮಾಹಿತಿಯನ್ನು ಅಳವಡಿಸಿಕೊಳ್ಳಬೇಕು ಎಂದರು..
ಶಿಕ್ಷಕ ಉದ್ಧವರಾವ ಉಪಾಸೆ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವದು ಅತ್ಯಾವಶ್ಯಕವಾಗಿದೆ. ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ವಿಶೇಷ ಕಾಳಜಿ ವಹಿಸುವುದು ಪಾಲಕರ ಹಾಗೂ ಶಿಕ್ಷಕರ ಆದ್ಯ ಕರ್ತವ್ಯವಾಗಿದೆ ಎಂದರು.
ಪ್ರಮುಖರಾದ ಪರವೇಜ್, ಎಂ.ಡಿ ಶರೀಫ್, ವಿಜಯ ಜಾಧವ್, ನಾಜಿಯಾ ಬೇಗಂ, ಹಮೀದಾ, ಪ್ರವಿಣ ಸೋಮವಂಶಿ, ರಾಮ ಪಾಟೀಲ, ಸುನೀತಾ ಕುಪ್ಪೆ, ವಿಶಾಲ ಶಾಲಾ ಸಿಬ್ಬಂದಿ ಇದ್ದರು. ಸುನೀತಾ ಚಿಂಚೋಳಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು . ಶೋಭಾ ಮಠಪತಿ ವಂದಿಸಿದರು. ಸಂಜೀವಕುಮಾರ ನಡುಕರ ನಿರೂಪಣೆ ಮಾಡಿದರು