ದೇವಸ್ಥಾನ ಅಭಿವೃದ್ಧಿಗೆ ಅನುದಾನ ನೀಡಿ

ದೇವಲಾಪುರ ಶ್ರೀ ಉಡಚಮ್ಮದೇವಿ ದೇವಸ್ಥಾನ ಜೀಣೋರ್ದ್ಧಾರಕ್ಕೆ ಹೆಚ್ಚುವರಿ ಅನುದಾನ ಒದಗಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು  ಬೈಲಹೊಂಗಲದಲ್ಲಿ ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಮನವಿ ಸಲ್ಲಿಸಿದರು. ಈಶ್ವರ ಉಳ್ಳಾಗಡ್ಡಿ, ಚನ್ನಪ್ಪ ಬಂದಕ್ಕನವರ, ರುದ್ರಪ್ಪ  ಸುಂಕದ ಇತರರಿದ್ದರು.
ದೇವಲಾಪುರ ಶ್ರೀ ಉಡಚಮ್ಮದೇವಿ ದೇವಸ್ಥಾನ ಜೀಣೋರ್ದ್ಧಾರಕ್ಕೆ ಹೆಚ್ಚುವರಿ ಅನುದಾನ ಒದಗಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಬೈಲಹೊಂಗಲದಲ್ಲಿ ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಮನವಿ ಸಲ್ಲಿಸಿದರು. ಈಶ್ವರ ಉಳ್ಳಾಗಡ್ಡಿ, ಚನ್ನಪ್ಪ ಬಂದಕ್ಕನವರ, ರುದ್ರಪ್ಪ ಸುಂಕದ ಇತರರಿದ್ದರು.
Published on
ಬೈಲಹೊಂಗಲ: ತಾಲೂಕಿನ ದೇವಲಾಪುರ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಉಡಚಮ್ಮದೇವಿ ದೇವಸ್ಥಾನ ಕಟ್ಟಡದ ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ಒದಗಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಈಚೆಗೆ ಮನವಿ ಸಲ್ಲಿಸಿದರು.
ಟಿಎಪಿಎಂಎಸ್​ ಅಧ್ಯ ಈಶ್ವರ ಉಳ್ಳಾಗಡ್ಡಿ ಮಾತನಾಡಿ, ಗ್ರಾಮದ ಆರಾಧ್ಯದೈವ ಶ್ರೀ ಉಡಚಮ್ಮದೇವಿ ಜಾತ್ರೆಯನ್ನು ಕಳೆದ 20 ವರ್ಷಗಳಿಂದ ಅದ್ದೂರಿಯಾಗಿ ಮಾಡಿಕೊಂಡು ಬರಲಾಗುತ್ತಿದೆ. ದೇವಸ್ಥಾನ ಶಿಥಿಲಗೊಂಡಿದ್ದರಿಂದ ಸುಮಾರು 4 ಕೋಟಿ ರೂ.ವೆಚ್ಚದಲ್ಲಿ ಜೀಣೋರ್ದ್ಧಾರ ಕಾರ್ಯ ಕೈಗೊಳ್ಳಲಾಗಿದೆ. ವಿವಿಧ ಇಲಾಖೆಗಳಿಂದ ಹೆಚ್ಚುವರಿ ಅನುದಾನ ತರಲು ಶಾಸಕರು ಪ್ರಯತ್ನಿಸಬೇಕೆಂದು ಮನವಿ ಮಾಡಿದರು.
ಶಾಸಕ ಮಹಾಂತೇಶ ಕೌಜಲಗಿ ಪ್ರತಿಕ್ರಿಯಿಸಿ, ಶ್ರೀ ಉಡಚಮ್ಮದೇವಿ ದೇವಸ್ಥಾನ ಜೀಣೋರ್ದ್ಧಾರ ಕೈಗೊಂಡಿರುವುದು ಸಂತಸವಾಗಿದೆ. ಸಂಬಂಧಿಸಿದ ಇಲಾಖೆ ಸಚಿವರಿಗೆ ಮನವಿ ಮಾಡಿ ಅನುದಾನ ಬಿಡುಗಡೆಗೆ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.
ಮುಖಂಡರಾದ ಚನ್ನಪ್ಪ ಬಂದಕ್ಕನವರ, ರುದ್ರಪ್ಪ ಸುಂಕದ, ಉದಯ ಬೆಳಗಾವಿ, ಮಲ್ಲಯ್ಯ ರುದ್ರಾಪುರ, ಕರವೀರಯ್ಯ ರುದ್ರಾಪುರ, ಮಹಾದೇವ ಅಂಚಿ, ಮಹಾದೇವ ಕೇಂದ್ರಿ, ಸುಭಾಷ ಪೂಜೇರ, ಭರತೇಶ ಮೂಲಿಮನಿ, ಅಜ್ಜಪ್ಪ ಕರಿಗಾರ, ಮಹಾದೇವ ಹೊನ್ನಪ್ಪನವರ, ಸುರೇಶ ಶಿದ್ನಾಳ, ಅಣ್ಣಪ್ಪ ಸೂಲಣ್ಣವರ, ಬಸವರಾಜ ಕಗ್ಗೋಡಿ, ರಾವೇಂದ್ರ ಸುಂಕದ, ವಿನೋದ ಮರೆಪ್ಪನವರ. ರಾಮಲಿಂಗಪ್ಪ ಯರಗಟ್ಟಿ, ಚನ್ನಬಸಪ್ಪ ಮಡಿವಾಳರ, ನಿಂಗಪ್ಪ ಪೂಜೇರ, ದುಂಡಪ್ಪ ಅಂಬರಶೆಟ್ಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net