ಹಿರನಾಗಾಂವದಲ್ಲಿ ಗ್ರಾಪಂ ಕೇಂದ್ರ ಸ್ಥಾನ ಮಂಜೂರು ಮಾಡಿ

 ಬಸವಕಲ್ಯಾಣ ತಾಲೂಕಿನ ಹಿರನಾಗಾಂವ ಗ್ರಾಪಂ ಕೇಂದ್ರ ಮಂಜೂರು ಮಾಡಬೇಕು ಎಂದು ಶಾಸಕ ಶರಣು ಸಲಗರ ನೇತೃತ್ವದಲ್ಲಿ ಗ್ರಾಮದ ಪ್ರಮುಖರ ನಿಯೋಗದಿಂದ ಬೆಂಗಳೂರಿನಲ್ಲಿ ಮಂಗಳವಾರ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್​ ರಾಜ್​ ಇಲಾಖೆ ಸಚಿವ ಪ್ರಿಯಾಂಕ್​ ಖರ್ಗೆ  ಬಸವಕಲ್ಯಾಣ ತಾಲೂಕಿನ ಹಿರನಾಗಾಂವ ಗ್ರಾಪಂ ಕೇಂದ್ರ ಮಂಜೂರು ಮಾಡಬೇಕು ಎಂದು ಶಾಸಕ ಶರಣು ಸಲಗರ ನೇತೃತ್ವದಲ್ಲಿ ಗ್ರಾಮದ ಪ್ರಮುಖರ ನಿಯೋಗದಿಂದ ಬೆಂಗಳೂರಿನಲ್ಲಿ ಮಂಗಳವಾರ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್​ ರಾಜ್​ ಇಲಾಖೆ ಸಚಿವ ಪ್ರಿಯಾಂಕ್​ ರ್ಖಗೆ ಅವರಿಗೆ ಮನವಿ ಪತ್ರ ಸಲ್ಲಿಸಿತ್ತು. ಮನವಿ ಪತ್ರ ಸಲ್ಲಿಸಿತ್ತು.

Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿಗೆ ತೆರಳಿದ ಗ್ರಾಮಸ್ಥರ ನಿಯೋಗ
  • ಸಚಿವರಿಗೆ ಮನವಿಪತ್ರ ಸಲ್ಲಿಕೆ
ಬಸವಕಲ್ಯಾಣ: ತಾಲೂಕಿನ ಹಿರನಾಗಾಂವ ಗ್ರಾಪಂ ಕೇಂದ್ರ ಮಂಜೂರು ಮಾಡಬೇಕು ಎಂದು ಗ್ರಾಮದ ಪ್ರಮುಖರ ನಿಯೋಗದಿಂದ ಶಾಸಕ ಶರಣು ಸಲಗರ ನೇತೃತ್ವದಲ್ಲಿ ಮಂಗಳವಾರ ಗ್ರಾಮೀಣಾಭಿವೃದ್ದಿಮತ್ತು ಪಂಚಾಯತ್​ ರಾಜ್​ ಇಲಾಖೆ ಸಚಿವ ಪ್ರಿಯಾಂಕ್​ ಖರ್ಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಮಾಡಲಾಯಿತು.
ಗ್ರಾಪಂ ಕೇಂದ್ರ ಮಂಜೂರು ಮಾಡಲು ದಶಕಗಳ ಬೇಡಿಕೆಯಾಗಿದೆ. ಸಾಕಷ್ಟು ಸಲ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗಿದೆ. ಇದಕ್ಕಾಗಿ ಸಾಕಷ್ಟು ಹೋರಾಟ ನಡೆಸಲಾಗಿದೆ. 2014&2015ನೇ ಸಾಲಿನಲ್ಲಿ ಗ್ರಾಪಂ ೇತ್ರ ಪುನರ್​ ವಿಂಗಡಣೆಯ ಸಮಯದಲ್ಲಿ ಹಿರನಾಗಾಂವ ಗ್ರಾಮಕ್ಕೆ ಗ್ರಾಮ ಪಂಚಾಯಿತಿ ಕಾರ್ಯಾಲಯ ಮಂಜೂರು ಮಾಡದೆ ಅನ್ಯಾಯ ಮಾಡಲಾಗಿದೆ. ಈ ಕುರಿತ ಕಡತ ಹಣಕಾಸು ಇಲಾಖೆಯಲ್ಲಿ ಬಾಕಿ ಇದೆ. ಆದಷ್ಟು ಬೇಗ ಗ್ರಾಪಂ ಮಂಜೂರು ಮಾಡಲು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಹಿರನಾಗಾಂವದಲ್ಲಿ ಸುಮಾರು 8000 ಜನಸಂಖ್ಯೆ ಹೊಂದಿದ್ದು, ಈಗ ಖೇರ್ಡಾ(ಬಿ) ಗ್ರಾಪಂ ವ್ಯಾಪ್ತಿಗೆ ಸೇರಿದೆ. ಹೀಗಾಗಿ ಗ್ರಾಪಂ ಕೆಲಸಗಳಿಗೆ ಖೇರ್ಡಾ ಗ್ರಾಮಕ್ಕೆ ಅಲೆದಾಡಬೇಕಾಗುತ್ತಿದೆ. ಹೀಗಾಗಿ ಗ್ರಾಮದಲ್ಲಿ ಪಂಚಾಯಿತಿ ಕೆಲಸಗಳು ಸರಿಯಾಗಿ ಆಗುತ್ತಿಲ್ಲ. ಸಮಸ್ಯೆಗೆ ಸ್ಪಂದಿಸಿ ಗ್ರಾಮದ ಜನತೆಗೆ ಅನುಕೂಲ ಮಾಡಿಕೊಡಬೇಕು ಎಂದು ಕೋರಲಾಗಿದೆ.
ಪಿಕೆಪಿಎಸ್​ ಅಧ್ಯಕ್ಷ ಜಗನ್ನಾಥ ಗದಲೇಗಾಂವ, ಬಿಜೆಪಿ ಒಬಿಸಿ ಮೋರ್ಚಾ ತಾಲೂಕು ಅಧ್ಯಕ್ಷ ಪ್ರಕಾಶ ನಾಗುರೆ, ಪ್ರಮುಖರಾದ ಮಲ್ಲಿಕಾರ್ಜುನ ಅಳ್ಳಿಕಟ್ಟಿ, ನಾಗರಾಜ ದರ್ಜಿ, ರಮೇಶ ಬಿರಾದಾರ, ಚನ್ನಪ್ಪ ಅಳ್ಳಿಕಟ್ಟಿ, ಮಾದಣ್ಣ ಮೂಲಗೆ, ಉಮೇಶ ಬಿರಾದಾರ, ಪ್ರಭು ನಾಗುರೆ, ಬಾಬು ಪಂಚಾಳ, ಧೂಳಪ್ಪ ಹೂಗಾರ, ಶಾಂತಪ್ಪ ಹಡಪದ, ಬಾಬು ಸಿಗಿ, ಕಲ್ಯಾಣಿ ಗಿರಿಮನಿ, ಬಾಬುರವ ಬಿರಾದಾರ, ರಮೇಶ ಸವದಿ, ದಿಲೀಪ ಜಮಾದಾರ ಇತರರಿದ್ದರು.

ತಾಲೂಕಿನ ಹಿರನಾಗಾಂವ ಗ್ರಾಪಂ ಕೇಂದ್ರವಾಗಲು ಎಲ್ಲ ರೀತಿಯಿಂದಲೂ ಅರ್ಹತೆ ಹೊಂದಿದ್ದು, ಈ ಸಂಬಂಧ ಗ್ರಾಮಸ್ಥರೊಂದಿಗೆ ಗ್ರಾಮೀಣಾಭಿವೃದ್ದಿ ಪಂಚಾಯತ್​ ರಾಜ್​ ಇಲಾಖೆ ಸಚಿವ ಪ್ರಿಯಾಂಕ್​ ಖರ್ಗೆ ಹಾಗೂ ಜಿಲ್ಲಾ ಉಸ್ತುವಾಗಿ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಾಗಿದೆ. ಸಚಿವರು ಸಕಾರಾತ್ಮವಾಗಿ ಸ್ಪಂದಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

> ಶರಣು ಸಲಗರ

ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net