ಶಂಕರಮಠದಲ್ಲಿ ಅದ್ಧೂರಿ ಶಂಕರ ಜಯಂತಿ ಆಚರಣೆ

ಶ್ರೀಜಗದ್ಗುರು ಶಂಕರಾಚಾರ್ಯರ ಜಯಂತಿ ಹಿನ್ನೆಲೆಯಲ್ಲಿ  ಶ್ರೀಶಂಕರ ಜಯಂತಿ ಸೇವಾ ಸಮಿತಿ ವತಿಯಿಂದ ಶಂಕರಮಠದ ಮುಖ್ಯರಸ್ತೆಯಲ್ಲಿ ಸಾರೋಟು ಮೆರವಣಿಗೆ ನಡೆಸಲಾಯಿತು.  ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ವಿದ್ವಾಂಸರಾದ ಶತಾವಧಾನಿ ಡಾ.ಆರ್.ಗಣೇಶ್ ಮತ್ತಿತರರು ಪಾಲ್ಗೊಂಡಿದ್ದರು.
ಶ್ರೀಜಗದ್ಗುರು ಶಂಕರಾಚಾರ್ಯರ ಜಯಂತಿ ಹಿನ್ನೆಲೆಯಲ್ಲಿ ಶ್ರೀಶಂಕರ ಜಯಂತಿ ಸೇವಾ ಸಮಿತಿ ವತಿಯಿಂದ ಶಂಕರಮಠದ ಮುಖ್ಯರಸ್ತೆಯಲ್ಲಿ ಸಾರೋಟು ಮೆರವಣಿಗೆ ನಡೆಸಲಾಯಿತು. ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ವಿದ್ವಾಂಸರಾದ ಶತಾವಧಾನಿ ಡಾ.ಆರ್.ಗಣೇಶ್ ಮತ್ತಿತರರು ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಂಕರಮಠದಲ್ಲಿ ಅದ್ಧೂರಿ ಶಂಕರ ಜಯಂತಿ
  • ಶಂಕರಪುರಂ ಮುಖ್ಯ ರಸ್ತೆಯಲ್ಲಿ ಮೆರವಣಿಗೆ
  • ಪೂಜೆ, ಮಂಗಳಾರತಿ, ಮಹಾಪ್ರಸಾದ ವಿನಿಯೋಗ

ಬೆಂಗಳೂರು:ಅದ್ವೆತ ಸಿದ್ಧಾಂತದಪ್ರತಿಪಾದಕ ಶ್ರೀಜಗದ್ಗುರುಶಂಕರಾಚಾರ್ಯರ ಜಯಂತಿ ಹಿನ್ನೆಲೆಯಲ್ಲಿ ಶ್ರೀಶಂಕರ ಜಯಂತಿ ಸೇವಾ ಸಮಿತಿವತಿಯಿಂದ ಚಾಮರಾಜಪೇಟೆಯ ಶೃಂಗೇರಿಶಂಕರಮಠದಲ್ಲಿ ಶ್ರೀ ಶಂಕರ ಜಯಂತಿಕಾರ್ಯಕ್ರಮವನ್ನು ಅದ್ಧೂರಿಯಾಗಿಆಚರಿಸಲಾಯಿತು.

ಶ್ರೀಮಠದಲ್ಲಿರುವಶಂಕರಾಚಾರ್ಯರ ಮಂಗಲ ಮೂರ್ತಿಗೆವಿಶೇಷ ಶತರುದ್ರಾಭಿಷೇಕ,ಪೂಜೆ ನೆರವೇರಿಸಲಾಯಿತು.ನಂತರ 3.5ಅಡಿ ಎತ್ತರದಪಂಚಲೋಹದ ಶಂಕರಾಚಾರ್ಯರ ಪುತ್ಥಳಿಯನ್ನುರಜತ ಅಶ್ವ ಪಲ್ಲಕ್ಕಿಯ ಸಮೇತ,ರಾಜಬೀದಿಯಲ್ಲಿಸಾರೋಟು ಉತ್ಸವದ ಮೆರವಣಿಗೆಯುವಿಜೃಂಭಣೆಯಿಂದ ನಡೆಯಿತು.ಮಂಗಳವಾದ್ಯ,ವೇದಘೋಷಗಳೊಂದಿಗೆ ಶಂಕರರ ಅನುಯಾಯಿಗಳು,ಸನಾತನ ಧರ್ಮಿಯರುಉತ್ಸವದಲ್ಲಿ ಪಾಲ್ಗೊಂಡಿದ್ದರು.ಮಹಿಳೆಯರು,ಭಜನೆ,ನೃತ್ಯದ ಮೂಲಕಉತ್ಸವವನ್ನು ಕಳೆಗಟ್ಟುವಂತೆಮಾಡಿದರು.

ಮಧ್ಯಾಹ್ನಮಹಾಮಂಗಳಾರತಿ,ಮಂತ್ರಪುಷ್ಪ,ರಾಜಾಶೀರ್ವಾದ,ವಿವಿಧ ಪೂಜಾಕೈಂಕರ್ಯಗಳು ಹಾಗೂ ಮಹಾಪ್ರಸಾದವಿನಿಯೋಗ ಜರುಗಿತು.ಮಂಗಳವಾರ ಇಡೀದಿನನಡೆದ ವಿವಿಧ ಕಾರ್ಯಕ್ರಮ,ಹೋಮ ,ಹವನ ಮತ್ತಿತರಧಾರ್ಮಿಕ ಚಟುವಟಿಕೆಗಳಲ್ಲಿಭಕ್ತಾದಿಗಳು ಉತ್ಸಾಹದಿಂದಪಾಲ್ಗೊಂಡರು.

ಶೃಂಗೇರಿಶಾರದಪೀಠದ ಆಡಳಿತಾಧಿಕಾರಿ ಪಿ..ಮುರಳಿ ಅವರಮಾರ್ಗದರ್ಶನದಲ್ಲಿ ಈ ಎಲ್ಲಕಾರ್ಯಕ್ರಮಗಳು ಜರುಗಿದವು.ವಿದ್ವಾಂಸ ಪಾವಗಡಪ್ರಕಾಶ್ ರಾವ್,ಶತಾವಧಾನಿಡಾ.ಆರ್.ಗಣೇಶ್ಸೇರಿದಂತೆ ಹಲವು ಗಣ್ಯರುಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಭಯ, ಶೋಕ, ಮೋಹಗಳಿಂದ ಕೂಡಿದ ಅಜ್ಞಾನವನ್ನು ಕಳೆದುಕೊಂಡು ಅಹಂ ಬ್ರಹ್ಮಾಸ್ಮಿ ಎಂಬ ಭಾವವನ್ನು ತಳೆಯುವ ಮೂಲಕ ಜಾತಿ, ಮತ, ಭಾಷೆ, ಪ್ರದೇಶ ಮತ್ತಿತರ ಎಲ್ಲ ಭೇದಗಳನ್ನು ಮೀರಿ ವಿಶ್ವಕುಟುಂಬಿಗಳಾಗಬೇಕೆಂಬ ಉದಾತ್ತ ಸಂದೇಶವನ್ನು ಸಾರಿದ ಜಗದ್ಗುರು ಶಂಕರಾಚಾರ್ಯರನ್ನು ಅವರ ಜನ್ಮದಿನದ ಸಂದರ್ಭದಲ್ಲಿ ನೆನೆದು ಗೌರವ ಸಲ್ಲಿಸುವುದು ಸನಾತನ ಧರ್ಮಿಯರ ಕರ್ತವ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net