

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಆಷಾಡಮಾಸದ ಅಂಗವಾಗಿ ಉಜ್ಜಯಿನಿ ಜಗದ್ಗುರುಶ್ರೀಸಿದ್ಧಲಿಂಗ ರಾಜದೇಶೀಕೇಂದ್ರಶಿವಾಚಾರ್ಯ ಭಗವತ್ಪಾದರ 12ನೇವರ್ಷದ ಇಷ್ಟಲಿಂಗ ಮಹಾಪೂಜೆ ಮತ್ತುಸದ್ಧರ್ಮ ಜಾಗೃತಿ ಸಮಾವೇಶವು ಆ.1(ಶನಿವಾರ)ರಿಂದ ಎರಡು ದಿನನಡೆಯಲಿದೆ.
ಶ್ರೀಉಜ್ಜಯಿನಿಜಗದ್ಗುರುಗಳ ಪೂಜಾ ಸಮಿತಿಆಯೋಜಿಸಿರುವ ಕಾರ್ಯಕ್ರಮವುಬಸವನಗುಡಿಯ ದೊಡ್ಡಬಸವಣ್ಣ ದೇವಾಲಯದಮುಂಭಾಗ ಇರುವ ನಿಜಗುಣರ ಕಲ್ಯಾಣಮಂಟಪದಲ್ಲಿ ನಡೆಯಲಿದೆ ಎಂದುಸಮಿತಿ ಅಧ್ಯಕ್ಷ ಷಡಕ್ಷರ ಶಾಸ್ತ್ರಿಗಳುತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ ಜಗದ್ಗುರುಗಳನ್ನುಪೂರ್ಣಕುಂಭದೊಂದಿಗೆ ಸಕಲ ಮಂಗಳವಾದ್ಯಸಹಿತ ಸ್ವಾಗತಿಸಲಾಗುವುದು.ನಂತರ ಸಾಮೂಹಿಕಇಷ್ಟಲಿಂಗ ಮಹಾಪೂಜೆ ನೆರವೇರಲಿದೆ.ಸಂಜೆ 6ಕ್ಕೆಜನಜಾಗೃತಿ ಧರ್ಮ ಸಮಾರಂಭ ನಡೆಯಲಿದ್ದು,ಕೇಂದ್ರ ಸಚಿವವಿ.ಸೋಮಣ್ಣಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ವಿಭೂತಿಪುರ,ರಾಜಾಪುರ,ನಾಗಲಾಪುರ ಮತ್ತುಸಿದ್ದರಬೆಟ್ಟ ಮಠದ ಶ್ರೀಗಳುಆಗಮಿಸಲಿದ್ದಾರೆ.
ಆ.2(ಭಾನುವಾರ)ಬೆಳಗ್ಗೆ 8ಗಂಟೆಯಿಂದಸಾಮೂಹಿಕ ಇಷ್ಟಲಿಂಗ ಮಹಾಪೂಜೆಮತ್ತು ಸಂಜೆ 6ಕ್ಕೆಸಮಾರೋಪ ಸಮಾವೇಶ ನಡೆಯಲಿದೆ.ಶಿವಗಂಗೆ,ಚಿಕ್ಕಕಲ್ಲುಬಾಳುಮಠದ ಶ್ರೀಗಳು ಆಗಮಿಸಲಿದ್ದು,ಸಂಸದ ತೇಜಸ್ವಿಸೂರ್ಯ, ಶಾಸಕರವಿ ಸುಬ್ರಮಣ್ಯ ಮತ್ತಿತರ ಗಣ್ಯರುಪಾಲ್ಗೊಳ್ಳಲಿದ್ದಾರೆ.ಭಕ್ತರು ಹೆಚ್ಚಿನಸಂಖ್ಯೆಯಲ್ಲಿ ಪೂಜೆಯಲ್ಲಿಪಾಲ್ಗೊಳ್ಳುವಂತೆ ಸಮಿತಿಯಕಾರ್ಯದರ್ಶಿ ನಂದೀಶ್ ಬಿಜ್ಜಳ್ಳಿವಿನಂತಿಸಿದ್ದಾರೆ.