ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ರಥೋತ್ಸವ ಅದ್ದೂರಿ Festival

 ಚನ್ನಪಟ್ಟಣ ತಾಲೂಕಿನ ದೇವರಹೊಸಹಳ್ಳಿಯ ಸಂಜೀವರಾFestival ಯಸ್ವಾಮಿ ಜಾತ್ರಾಮಹೋತ್ಸವ ಹಾಗೂ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ನಡೆಯಿತು.
ಚನ್ನಪಟ್ಟಣ ತಾಲೂಕಿನ ದೇವರಹೊಸಹಳ್ಳಿಯ ಸಂಜೀವರಾFestival ಯಸ್ವಾಮಿ ಜಾತ್ರಾಮಹೋತ್ಸವ ಹಾಗೂ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ನಡೆಯಿತು.
Published on
ಚನ್ನಪಟ್ಟಣ :ತಾಲೂಕಿನ ಪುರಾಣ ಪ್ರಸಿದ್ಧ ದೇವರಹೊಸಹಳ್ಳಿಯ ಸಂಜೀವರಾಯಸ್ವಾಮಿ ಜಾತ್ರಾಮಹೋತ್ಸವ ಹಾಗೂ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಭಾನುವಾರ ಅದ್ದೂರಿಯಾಗಿ ನಡೆಯಿತು.
ಶ್ರೀ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ ಪ್ರಯುಕ್ತ ಶುಕ್ರವಾರದಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದವು. ಶನಿವಾರ ಏಕಾದಶಿ ಪ್ರಯುಕ್ತ ಧ್ವಜಾರೋಹಣ, ಯಾಗಶಾಲ ಪ್ರವೇಶ ಸೇರಿ ವಿವಿಧ ಸೇವೆಗಳು ನಡೆದಿದ್ದವು. ಜತೆಗೆ ಸಂಜೆ 6 ಗಂಟೆಗೆ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯ ಕಲ್ಯಾಣೋತ್ಸವ ನಡೆಯಿತು.
ಭಾನುವಾರ 12 ರಿಂದ 12.50ಕ್ಕೆ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವಕ್ಕೆ ತಹಸೀಲ್ದಾರ್ ಗಿರೀಶ್ ಸೇರಿ ಹಲವು ಗಣ್ಯರು ಚಾಲನೆ ನೀಡಿದರು.
ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಸೇರಿ ಗ್ರಾಮಸ್ಥರು ಸಾಥ್ ನೀಡಿದರು. ರಥೋತ್ಸವ ಪ್ರಯುಕ್ತ ಮುಂಜಾನೆಯಿಂದಲೇ ಕ್ಷೇತ್ರದಲ್ಲಿ ಸಂಜೀವರಾಯಸ್ವಾಮಿ ಶಿಲ್ಪಕಲಾ ಸುವರ್ಣಮಂಟಪದಲ್ಲಿ ವೈಕುಂಠ ಸೇವಾ ದರ್ಶನ, ತೋಮಾಲೆ ಸೇವೆ, ಮಹಾ ಮಂಗಳಾರತಿ, ವಿಮಾನ ಗೋಪುರಕ್ಕೆ ವಿದ್ಯುತ್ ಲಕ್ಷ ದೀಪೋತ್ಸವ, ಪುಷ್ಪಾಲಂಕಾರ, ವಿಶ್ವರೂಪ ದರ್ಶನ ಸೇವೆ, ಅನ್ನರಾಶಿಗೆ ಪೂಜೆ, ಮಜ್ಜಿಗೆ, ಪಾನಕ ವಿತರಣೆ ನಂತರ ತಿರುಪ್ಪಾವಡೆ ಸೇವೆ, ಗೋವು, ಅಶ್ವ, ಗಜಪೂಜೆಗಳು ನಡೆದವು.Festival
ಬ್ರಹ್ಮರಥೋತ್ಸವ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗಿಯಾಗಿ ದೇವರ ದರ್ಶನ ಪಡೆದರು. ಈ ವೇಳೆ ದೇವಾಲಯದ ಆಡಳಿತ ಮಂಡಳಿ ಹಾಗೂ ದಾನಿಗಳು ರಥೋತ್ಸವಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಈ ಭಾಗದಲ್ಲಿ ಆಷಾಢ ಜಾತ್ರೆ ಹಾಗೂ ಉಪವಾಸ ಹಬ್ಬದ ಜಾತ್ರೆಯಂದೇ ಜಾತ್ರಾ ಮಹೋತ್ಸವ ಹೆಸರುಗಳಿಸಿದ್ದು, ವಾಡಿಕೆಯಂತೆ ಈ ಬಾರಿಯೂ ರಾಜ್ಯದ ವಿವಿಧ ಭಾಗಗಳಿಂದ ನವಜೋಡಿಗಳು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು. ಸಂಜೀವರಾಯಸ್ವಾಮಿ ದರ್ಶನ ಪಡೆಯಲು ಹಾಗೂ ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಳ್ಳಲು ಮುಂಜಾನೆಯಿಂದಲೇ ಸಾವಿರಾರು ಭಕ್ತರು ಸಾಲುಗಟ್ಟಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ರಥೋತ್ಸವಕ್ಕೆ ಹೂ-ಹಣ್ಣು,ಜವನ ಎಸೆಯುವ ಮೂಲಕ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸಿದರು. ಸಂಜೆ ಡೋಲೋತ್ಸವ, ದೀಪೋತ್ಸವ, ತೇಪೋತ್ಸವ ಹಾಗೂ ಬಾಣಬಿರುಸಿನ ಪ್ರದರ್ಶನ ನೆರೆದಿದ್ದ ಭಕ್ತರ ಕಣ್ಮನ ಸೆಳೆದವು.
ತಾಲೂಕು ಆಡಳಿತ ಹಾಗೂ ತಹಸೀಲ್ದಾರ್ ಲೆಕ್ಕಕ್ಕಿಲ್ಲದೇ, ಮುಜರಾಯಿ ದೇವಸ್ಥಾನದಲ್ಲಿ ಖಾಸಗಿ ದರ್ಬಾರ್ ನಡೆದ ಘಟನೆಗೆ ತಾಲೂಕಿನ ದೇವರಹೊಸಹಳ್ಳಿ ಸಾಕ್ಷಿಯಾಯಿತು. ಕೇವಲ ತಾಲೂಕಷ್ಟೇ ಅಲ್ಲದೇ ಇಡೀ ರಾಜ್ಯದಲ್ಲಿ ಈ ಗ್ರಾಮದಲ್ಲಿ ನಡೆಯುವ ಜಾತ್ರಾ ಮಹೋತ್ಸವ ಸಾಕಷ್ಟು ಪ್ರಸಿದ್ಧಿ ಪಡೆದಿದ್ದು, ಈ ಜಾತ್ರೆಗೆ ಸಹಸ್ರಾರು ಮಂದಿ ನೇರೆಯುತ್ತಾರೆ. ಮುಜರಾಯಿ ಇಲಾಖೆಗೆ ಸೇರುವ ಈ ದೇವಸ್ಥಾನದ ಉತ್ಸವದಲ್ಲಿ ಖಾಸಗಿ ದರ್ಬಾರ್ ನಡೆದದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು. ತಾಲೂಕು ಆಡಳಿತಕ್ಕೂ ಲೆಕ್ಕಕಿಲ್ಲದೇ ಪಾಸ್ ವಿತರಣೆ ನಡೆಸಿದ್ದು ಕಂಡುಬಂದಿತ್ತು. ವಿಶೇಷ ದರ್ಶನಕ್ಕೆ ಹಣ ಪಡೆದು ಪಾಸ್ ವಿತರಣೆ ಆರೋಪ ಕೇಳಿಬಂದಿತ್ತು. ಪಾಸ್ ಇದ್ದವವರು ವಿಶೇಷ ದರ್ಶನ ಪಡೆದರೆ, ಸಾವಿರಾರು ಸಾಮಾನ್ಯ ಜನರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಕೆಲ ಯುವಕರಿಂದಲೂ ಅನುಚಿತ ವರ್ತನೆ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ವಿಚಾರ ತಿಳಿದು ತಹಸೀಲ್ದಾರ್ ಗಿರೀಶ್ ಸ್ಥಳಕ್ಕೆ ಭೇಟಿ ನೀಡಿದರು. ಸ್ಪೆಷಲ್ ಎಂಟ್ರಿ ಬಂದ್ ಮಾಡಿಸಿ, ಪಾಸ್ ಸೀಜ್ ಮಾಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನನ್ನ ಗಮನಕ್ಕೆ ಬಂದಿಲ್ಲ. ಅರ್ಚಕರು ಕರೆದ ಹಿನ್ನೆಲೆಯಲ್ಲಿ ಭಕ್ತನಾಗಿ ಬಂದಿದ್ದೇನೆ. ದೇವಸ್ಥಾನದ ಆಡಳಿತಾಧಿಕಾರಿ ರಘು ಎಂಬಾತನಿಂದ ಯಾವುದೇ ಮಾಹಿತಿ ಇಲ್ಲ, ಮಾಹಿತಿ ಕೊಟ್ಟಿಲ್ಲ, ಅವರೇ ಕಾರ್ಯಕ್ರಮ ಮಾಡಿದ್ದಾರೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net