ಪಟ್ಟಣದಲ್ಲಿ ಸುಮಾರು ೨೦ರಿಂದ ೨೫ ಸಾರ್ವಜನಿಕ ಗಣಪತಿಗಳು ಪ್ರತಿಷ್ಠಾಪನೆಗೊಂಡಿದ್ದು ನಿತ್ಯ ಪೂಜೆ ನಡೆಯುತ್ತಿದೆ. ಉತ್ತರಾದಿ ಮಠ, ಮುಖ್ಯ ಬಜಾರ, ಗೌಡರ ಓಣಿ, ಕಾಡಾ ಕ್ಯಾಂಪ್, ಹಿಲ್‌ಟಾಪ್ ಕಾಲೋನಿ, ಮ್ಯಾಗೇರಿ, ಸಂಜೀವನಗರ, ಸಿದ್ದೇಶ್ವರ ದೇವಸ್ಥಾನ, ದೇವೂರ ಲೇಔಟ್, ಲಕ್ಷ್ಮೀ ನಗರ, ಸಾಯಿ ನಗರ ಸೇರಿದಂತೆ ಇನ್ನುಳಿದ ಕೆಲವು ಬಡಾವಣೆಗಳಲ್ಲಿ ವಿವಿಧ ಭಂಗಿಯ ಗಣಪತಿ ಮೂರ್ತಿಗಳನ್ನು ಸ್ಥಾಪಿಸಲಾಗಿದೆ.