

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ನಂದಿನಿ ಲೇಔಟ್‌ನಆಕ್ಸ್‌ಫರ್ಡ್ ಶಾಲೆಯ ಬಳಿ ಇರುವವೀರರಾಣಿ ಕಿತ್ತೂರು ಚೆನ್ನಮ್ಮಆಟದ ಮೈದಾನದಲ್ಲಿ ‘ಮಹಾಲಕ್ಷ್ಮಿಲೇಔಟ್ ಹಿಂದೂ ಮಹಾಸಭಾ ಮತ್ತುಯುವ ಸಾಮ್ರಾಜ್ಯ’ ವತಿಯಿಂದಆಯೋಜಿಸಲಾಗಿದ್ದ ಗಣೇಶೋತ್ಸವಕಾರ್ಯಕ್ರಮವು ವಿಜೃಂಭಣೆಯಿಂದನೆರವೇರಿತು.
ಕಾರ್ಯಕ್ರಮದಲ್ಲಿಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯಅವರಿಗೆ ಕರುನಾಡ ಮಹಾಲಕ್ಷ್ಮಿಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿಸ್ವೀಕರಿಸಿ ಮಾತನಾಡಿದ ಹೇಮಲತ, ಪ್ರತಿ ವರ್ಷದಂತೆಈ ಬಾರಿಯೂ ಸರ್ವರ ಸಹಕಾರದೊಂದಿಗೆಗಣೇಶೋತ್ಸವವನ್ನು ಅತ್ಯಂತವಿಜೃಂಭಣೆ ಹಾಗೂ ಭಕ್ತಿಯಿಂದಆಯೋಜಿಸಲಾಗಿದೆ.ಮಹಾಗಣಪತಿಯುಎಲ್ಲರಿಗೂ ಆಯುಷ್ಯ,ಆರೋಗ್ಯ ಹಾಗೂಶ್ರೇಯಸ್ಸನ್ನು ಕರುಣಿಸಲಿ ಎಂದುಶುಭ ಹಾರೈಸಿದರು.
ಕಾರ್ಯಕ್ರಮದದಿವ್ಯ ಸಾನ್ನಿಧ್ಯ ವಹಿಸಿದ್ದಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥಸ್ವಾಮೀಜಿ ಆಶೀರ್ವಚನ ನೀಡಿದರು.ಕೇಂದ್ರ ಸಚಿವೆಶೋಭಾ ಕರಂದ್ಲಾಜೆ,ಬೆಂಗಳೂರು ಉತ್ತರಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಹರೀಶ್,ಬಿಜೆಪಿ ಮುಖಂಡರಾದಡಾ. ನಾಗೇಂದ್ರ,ಡಾ.ಮಂಜುನಾಥ ಗೌಡ,ಡಾ.ಸಂಜಯ್ ಗೌಡ,ರಾಜೇಂದ್ರಕುಮಾರ್,ನಾಗರತ್ನ ಲೋಕೇಶ್,ಪ್ರಸನ್ನ ಹಾಗೂಸಂಘದ ಅಧ್ಯಕ್ಷ ಮಲ್ಲೇಶ್‌ಮತ್ತಿತರರುಉಪಸ್ಥಿತರಿದ್ದರು.