ದಿಂಡಿ ಉತ್ಸವ ಅದ್ದೂರಿ

ಗುಬ್ಬಿ ತಾಲೂಕಿನಲ್ಲಿ ಶ್ರೀ ರುಕ್ಮಿಣಿ ಮತ್ತು ಶ್ರೀ ಪಾಂಡುರಂಗಸ್ವಾಮಿ ಅವರ 22ನೇ ವರ್ಷದ ದಿಂಡಿ ಉತ್ಸವ ಭಾನುವಾರ ಅದ್ದೂರಿಯಾಗಿ ನೆರವೇರಿತು.
ಗುಬ್ಬಿ ತಾಲೂಕಿನಲ್ಲಿ ಶ್ರೀ ರುಕ್ಮಿಣಿ ಮತ್ತು ಶ್ರೀ ಪಾಂಡುರಂಗಸ್ವಾಮಿ ಅವರ 22ನೇ ವರ್ಷದ ದಿಂಡಿ ಉತ್ಸವ ಭಾನುವಾರ ಅದ್ದೂರಿಯಾಗಿ ನೆರವೇರಿತು.
Published on
ಗುಬ್ಬಿ :ಆಷಾಢ ಮಾಸದ ಏಕಾದಶಿ ಅಂಗವಾಗಿ ಶ್ರೀ ರುಕ್ಮಿಣಿ ಮತ್ತು ಶ್ರೀ ಪಾಂಡುರಂಗಸ್ವಾಮಿಯ 22ನೇ ವರ್ಷದ ದಿಂಡಿ ಉತ್ಸವ ಭಾನುವಾರ ಅದ್ದೂರಿಯಾಗಿ ನೆರವೇರಿತು.
ಪಾಂಡುರಂಗ, ರುಕ್ಮಿಣಿ ಭಾವಚಿತ್ರವನ್ನು ವಿಶೇಷ ಹೂವಿನ ಪಲ್ಲಕ್ಕಿ ರಥದಲ್ಲಿ ಪ್ರತಿಷ್ಠಾಪಿಸಿ ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ಕಲಾ ತಂಡಗಳಾದ ವೀರಗಾಸೆ, ಭದ್ರಾಕಾಳಿ, ಚಿಟ್ಟಿಮೇಳೆ, ಮಕ್ಕಳಿಂದ ಚಕ್ಕೆ ಭಾಜನೆ, ಕರಗ ನೃತ್ಯ, ನವಿಲು ಕುಣಿತ, ಗೊಂಬೆ ಕುಣಿತ, ನಾಸಿಕ್​ ಡೋಲ್​ ಡೊಳ್ಳುಕುಣಿತ, ಕೇರಳದ ಚಂಡೆ ವಾದ್ಯ, ತಮಟೆ ವಾದ್ಯ ಇನ್ನೂ ಮುಂತಾದ ಕಲಾತಂಡಗಳೊಂದಿಗೆ ಭವ್ಯ ಮೆರವಣಿಗೆ ನಡೆಸಲಾಯಿತು.
ಪಟ್ಟಣದ ಬಸ್​ ನಿಲ್ದಾಣ ಬಳಿ ಮೆರವಣಿಗೆ ತಲುಪಿದ ಸಮಯದಲ್ಲಿ ಶ್ರೀ ಪಾಂಡುರಂಗ ಮತ್ತು ಶ್ರೀ ರುಕ್ಮಿಣಿ ದೇವರು 22 ಅಡಿ ಎತ್ತರದ ಭಾವಚಿತ್ರಕ್ಕೆ ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು.
ಭಾವಸಾರ ಕ್ಷತ್ರಿಯ ಸಮಾಜದ ಮಂಜುನಾಥ್​ ಮಾಳೋದೆ, ಮಹೇಶ್​ ಅಂಬೇಕರ್​, ಜಿ.ಬಿ.ಚಂದನ್​ ರಾವ್​ ನಾಜರೆ, ಪಿ.ಮೋಹನ್​ ಕುಮಾರ್​ ಮಿರಸ್ಕರ್​, ಎಸ್​.ಒ.ಬಾಸುತ್ಕರ್​, ರವಿ ಮಿರಸ್ಕರ್​, ಆನಂದ್​ ರಾವ್​, ಜಿ.ಕೆ.ಮಾಳೋದೆ, ನಾಗದೀಪ್​ ಮಾಳೋದೆ, ಕಿರಣ್​ ಕುಮಾರ್​ ಮಿರಸ್ಕರ್​, ಜಿ.ಕೆ.ಮಂಜುನಾಥ್​ ರಾವ್​ ಮಾಳೋದೆ, ಡಾ.ಮೌರ್ಯ, ಹದಿನೆಂಟು ಕೋಮಿನ ಮುಖಂಡ ಕೆಂಪೇಗೌಡ, ರೇಣುಕಾಸ್ವಾಮಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net