ಜನರಿಲ್ಲದೆ ಗ್ರಾಮಸಭೆ ಮುಂದೂಡಿಕೆ

Gram Sabha adjourned without people present
Gram Sabha adjourned without people present
Published on
ಕೊರಟಗೆರೆ: ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಮುಖ್ಯವಾದ ಗ್ರಾಮಸಭೆಯ ಮಾಹಿತಿಯನ್ನು ಜನರಿಗೆ ಸಮರ್ಪಕವಾಗಿ ನೀಡದ ಕಾರಣ ಹುಲಿಕುಂಟೆ ಗ್ರಾಮದಲ್ಲಿ ಮಂಗಳವಾರ ನಿಗದಿಯಾಗಿದ್ದ ಸಭೆಯನ್ನು ಮುಂದೂಡಲಾಗಿದೆ.
ಜ.27ರಿಂದ ನಡೆದ ಸಾಮಾಜಿಕ ಲೆಕ್ಕಪರಿಶೋಧನೆಯ ನಂತರ ಫೆ. 4ರಂದು ಸಾರ್ವಜನಿಕರ ಸಮ್ಮುಖದಲ್ಲಿ ಗ್ರಾಮಸಭೆ ನಡೆಸುವಂತೆ ಸರ್ಕಾರದ ಮಾರ್ಗಸೂಚಿಗಳಂತೆ ತೀಮಾರ್ನಿಸಲಾಗಿತ್ತು. ಅದರಂತೆ ಹುಲಿಕುಂಟೆ ಗ್ರಾಪಂ ವ್ಯಾಪ್ತಿಯ ಪ್ರತಿ ಗ್ರಾಮಕ್ಕೂ ಡಂಗೂರ, ಧ್ವನಿವರ್ಧಕ, ಕರಪತ್ರಗಳ ಮೂಲಕ ಮಾಹಿತಿ ನೀಡಬೇಕೆಂಬುದು ಕಡ್ಡಾಯವಾಗಿತ್ತು. ಆದರೆ, ಇಲ್ಲಿನ ಪಿಡಿಒ ಅವರು ಸರ್ಕಾರದ ಆದೇಶಗಳನ್ನು ರ್ನಿಲಕ್ಷಿಸಿ ಯಾವುದೇ ರೀತಿಯ ಪ್ರಚಾರ ಕೈಗೊಳ್ಳದೆ ಏಕಾಏಕಿ ಗ್ರಾಮಸಭೆ ಆಯೋಜಿಸಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಸಭೆಗೆ ಶಾಮಿಯಾನ, ಕುರ್ಚಿ, ಮೈಕ್​ ಸೇರಿದಂತೆ ಸಿದ್ಧತೆಗಳನ್ನು ಮಾಡಿಕೊಂಡು ಸಾವಿರಾರು ರೂ. ವೆಚ್ಚ ಮಾಡಲಾಗಿದೆ.
ಗ್ರಾಮಸಭೆಗೆ ತಾಲೂಕು ಪಂಚಾಯಿತಿ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಾಗಲು ಬಂದಿದ್ದರು. ಆದರೆ, ಗ್ರಾಮಸ್ಥರು ಹಾಗೂ ಬಹುತೇಕ ಗ್ರಾಮ ಪಂಚಾಯಿತಿ ಸದಸ್ಯರು ಹಾಜರಾಗದ ಹಿನ್ನೆಲೆಯಲ್ಲಿ ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲದೆ ಮರಳುವಂತಾಯಿತು.
ಗ್ರಾಮಸ್ಥರಿಗೆ ಮಾಹಿತಿ ನೀಡದೇ ಸಭೆ ನಡೆಸಿದರೆ ಜನ ಹೇಗೆ ಬರುತ್ತಾರೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net