ಕೋಲಾರದ Labor Day ಪಾಲಸಂದ್ರ ಲೇಔಟ್ ಕಚೇರಿ ಮುಂಭಾಗ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆಯಲ್ಲಿ ಸಿಐಟಿಯು ಜಿಲ್ಲಾ ಖಜಾಂಚಿ ಎಚ್.ಬಿ ಕೃಷ್ಣಪ್ಪ, ಜಿಲ್ಲಾ ಉಪಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ, ಐಟಿಯು ಮುಖಂಡರಾದ ಎಂ.ಭೀಮರಾಜ್, ಆಶಾ, ರಾಮಚಂದ್ರಪ್ಪ ಇದ್ದರು.
ಕೋಲಾರ: ಕಾರ್ಮಿಕ ವರ್ಗ ಸೇರಿಬಡವರು, ಸಮಾನ್ಯ ವರ್ಗದ ಜನತೆಯಿಂದ Labor Day ಮತ ಪಡೆದ ನಮ್ಮನ್ನು ಆಳುವ ರಾಜಕಾರಣಿಗಳು ಶ್ರೀಮಂತರು, ಬಂಡವಾಳಶಾಹಿಗಳು ಹಾಗೂ ಉದ್ಯಮಿಗಳ ಪರವಾದ ಕಾನೂನುಗಳನ್ನು ರಕ್ಷಣೆ ಮಾಡಲು ಹೊರಟಿದ್ದಾರೆ ಎಂದು ಸಿಐಟಿಯು ಜಿಲ್ಲಾ ಖಜಾಂಚಿ ಎಚ್.ಬಿ ಕೃಷ್ಣಪ್ಪ ದೂರಿದರು.
ನಗರದ ಪಾಲಸಂದ್ರ ಲೇಔಟ್ ಕಚೇರಿ ಮುಂಭಾಗ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿ, ಕಾರ್ಮಿಕರಿಗೆ ರಕ್ಷಣೆಗೆ ಇದ್ದ ಕಾನೂನುಗಳನ್ನು ಹಂತಹಂತವಾಗಿ ನಾಶಮಾಡುವ ಮೂಲಕ ಕಾರ್ಮಿಕರ ಶಕ್ತಿದಮನ ಮಾಡಲು ಹೊರಟಿದ್ದಾರೆ. ಅನೇಕ ಹೋರಾಟದಿಂದ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. ಇವತ್ತು ಅವುಗಳನ್ನು ಒಂದೊಂದಾಗಿ ಕಳೆದುಕೊಳ್ಳುತ್ತಾ ಬಂದಿದ್ದೇವೆ ಅವುಗಳನ್ನು ಉಳಿಸಿಕೊಳ್ಳಲು ಹೋರಾಟ ಅನಿವಾರ್ಯವಾಗಿದೆ ಎಂದರು.
ಕಾರ್ಮಿಕರ ಬೇಡಿಕೆಗಳ ಈಡೇರಿಕೆಗಾಗಿ ಮೇ 30 ರವರೆಗೆ ಸರ್ಕಾರಕ್ಕೆ ಗಡುವು ನೀಡಲಾಗಿದ್ದು, ಬೇಡಿಕೆಗಳು ಈಡೇರಿಸದಿದ್ದರೆ ರಾಜ್ಯದ್ಯಂತ ಎಲ್ಲ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ಕಾರ್ಮಿಕರ ಶ್ರಮದಿಂದಲೇ ದೇಶದ ಸಂಪತ್ತು ಸೃಷ್ಟಿಯಾಗುತ್ತಿದ್ದರೂ, ಅದರ ಹಂಚಿಕೆಯಲ್ಲಿ ತೀವ್ರ ಅಸಮಾನತೆ ಮುಂದುವರಿದಿದೆ. ದೇಶದ ಒಟ್ಟು ಸಂಪತ್ತಿನ ಬಹುಪಾಲು ಕೆಲವೇ ಮಂದಿಯ ಕೈಯಲ್ಲಿ ಕೇಂದ್ರೀಕೃತವಾಗಿದ್ದು, ಬಹುಸಂಖ್ಯಾತ ಕಾರ್ಮಿಕ ವರ್ಗ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಜಾಗತಿಕ ಬಿಕ್ಕಟ್ಟು, ಬೆಲೆ ಏರಿಕೆ ಮತ್ತು ಸ್ಥಗಿತಗೊಂಡ ವೇತನಗಳು ಕಾರ್ಮಿಕರ ಬದುಕನ್ನು ಮತ್ತಷ್ಟು ದುಸ್ಥಿತಿಗೆ ತಳ್ಳಿವೆ ಎಂದರು
ಕಾರ್ಮಿಕರ ಪ್ರಮುಖ ಬೇಡಿಕೆಗಳಾಗಿ 36,000 ಕನಿಷ್ಠ ವೇತನ ಜಾರಿ, ನಾಲ್ಕು ಕಾರ್ಮಿಕ ಸಂಹಿತೆಗಳ ರದ್ಧತಿ, ಗುತ್ತಿಗೆ ಪದ್ಧತಿ ನಿಮೂರ್ಲನೆ, ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ವಸತಿ, ಆರೋಗ್ಯ, ಶಿಕ್ಷಣ ಸೇರಿ ಮೂಲ ಹಕ್ಕುಗಳ ಖಾತರಿಯನ್ನು ಒತ್ತಾಯಿಸಲಾಗಿದೆ. ಸರ್ಕಾರ ಕರಡು ಅಧಿಸೂಚನೆಗಳನ್ನು ಜಾರಿಗೆ ತರಲು ವಿಳಂಬ ಮಾಡುತ್ತಿದ್ದು, ಬಂಡವಾಳದಾರರ ಪರ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.