ದಾಖಲಾತಿ ಹೆಚ್ಚಿಸಲು ವಿನೂತನ ಕ್ರಮ

ದಾಖಲಾತಿ ಹೆಚ್ಚಿಸಲು ವಿನೂತನ ಕ್ರಮ
ದಾಖಲಾತಿ ಹೆಚ್ಚಿಸಲು ವಿನೂತನ ಕ್ರಮ
Published on

ಪ್ರಮುಖ ಮುಖ್ಯಾಂಶಗಳು

  • ದಾಖಲಾತಿ ಹೆಚ್ಚಿಸಲು ವಿನೂತನ ಕ್ರಮ
  • ಬೆಳಗಾವಿ ಜಿಲ್ಲೆಯಲ್ಲಿವೇ ೬೫ ಸರ್ಕಾರಿ ಪಿಯು ಕಾಲೇಜು
  • ಸರ್ಕಾರಿ ಕಾಲೇಜು ಸೌಲಭ್ಯ ಪಡೆಯಲು ಜಾಗೃತಿ
ದಾಖಲಾತಿ ಹೆಚ್ಚಿಸಲು ವಿನೂತನ ಕ್ರಮ!
ಆನಂದ ಭಮ್ಮನ್ನವರ ಚಿಕ್ಕೋಡಿ:
ರಾಜ್ಯದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದಿನೇ ದಿನೆ ದಾಖಲಾತಿ ಕುಸಿಯುತ್ತಿರುವ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಸೆಳೆಯಲು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಮುಂದಾಗಿದ್ದು, ಈ ಆಧುನಿಕ ದಾಖಲಾತಿ ಆಂದೋಲನ ಆರಂಭವಾಗಿದೆ.
ಜಿಲ್ಲೆಯಲ್ಲಿ ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 65 ಕಾಲೇಜುಗಳಲ್ಲಿ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಲಾಗಿದೆ.
ರಾಜ್ಯ ಸರ್ಕಾರ ಶಿಕ್ಷಣ ಪ್ರಮಾಣ ಮತ್ತು ಬಡ ಅನುಕೂಲವಾಗಲೆಂದು ಪ್ರಾರಂಭಿಸಿರುವ ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗೆ ದಾಖಲಾತಿ ಆರಂಭ, ಕಳೆದ ಎರಡು ತಿಂಗಳ ಹಿಂದೆ ದಾಖಲಾತಿ ಆಂದೋಲನದ ಮಾರ್ಗಸೂಚಿ ಹೊರಡಿಸಲಾಗಿದೆ. ಇದರನ್ವಯ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪಾಸಾಗಿರುವ ವಿದ್ಯಾರ್ಥಿಗಳ ಮನೆ ಮನೆಗೆ ಕಾಲೇಜು ಸಿಬ್ಬಂದಿ ಭೇಟಿ ನೀಡಿ ಸರ್ಕಾರಿ ಶಾಲೆಯಲ್ಲಿ ಪ್ರವೇಶ ಪಡೆಯುವಂತೆ ತಿಳಿಸುತ್ತಿದ್ದಾರೆ.
ಜಿಲ್ಲೆಯಲ್ಲಿವೆ 65 ಸರ್ಕಾರಿ ಕಾಲೇಜು: ಬೆಳಗಾವಿ ಜಿಲ್ಲೆಯಲ್ಲಿ ಸರ್ಕಾರಿ 31, ಅನುದಾನಿತ 40 ಮತ್ತು ಖಾಸಗಿ 75 ಕಾಲೇಜುಗಳಿವೆ. ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಸರ್ಕಾರಿ-34, ಅನುದಾನಿತ-45 ಮತ್ತು ಖಾಸಗಿ-128ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಬೇಡಿಕೆಯಿರುವ ಕಾಲೇಜು ಕಾಲೇಜು, ಕಾಲೇಜುಗಳಲ್ಲಿ ದಾಲಾತಿ ಹೆಚ್ಚಿನ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಮುಂದಾಗಿದೆ.
ದಾಖಲಾತಿ ಆಂದೋಲನ ಅಭಿಯಾನ: ಸರ್ಕಾರಿ
ಪದವಿಪೂರ್ವ ಕಾಲೇಜುಗಳಿಗೆ ಪ್ರವೇಶ ಪಡೆಯಲು ಆಯಾ ಕಾಲೇಜು ಉಪನ್ಯಾಸಕರು, ಸಿಬ್ಬಂದಿ, ಮನೆಗೆ ಭೇಟಿ ನೀಡುವ ಸರ್ಕಾರದ ಸೌಲಭ್ಯ, ಗುಣಮಟ್ಟದ ಶಿಕ್ಷಣ, ಉಚಿತ ನೀಟ್, ಸಿಇಟಿ ಪರೀಕ್ಷೆ ತರಬೇತಿ ಕುರಿತು ಪಾಲಕರಿಗೆ ಮಾಹಿತಿ ನೀಡಲಾಗುತ್ತಿದೆ.
ಮೂಲ ಸೌಕರ್ಯ ಒದಗಿಸಿ: ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗೆ ದಾಖಲಾತಿಗೆ ಕ್ರಮವಹಿಸಿದ್ದು ಸ್ವಾಗತಾರ್ಹ. ಆದರೆ, ಎಲ್ಲ ಸರ್ಕಾರಿ ಕಾಲೇಜುಗಳಿಗೆ ಶಿಕ್ಷಣ ಗುಣಮಟ್ಟ ಹೆಚ್ಚಿಸಬೇಕು, ಅಗತ್ಯ ಮೂಲಸೌಕರ್ಯ, ಉಪನ್ಯಾಸಕರ ಕೊರತೆ ನೀಗಬೇಕು ಎಂಬುವುದು ಪಾಲಕರ ಒತ್ತಾಯವಾಗಿದೆ.
ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಮನೆಗೆ ಭೇಟಿ ನೀಡಿ ಅಭಿಯಾನ ನಡೆಸಲಾಗುತ್ತಿದೆ. ಸರ್ಕಾರಿ ಕಾಲೇಜಿಗೆ ಪ್ರವೇಶ ಪಡೆಯುವುದರ ಪ್ರಯೋಜನ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ, ಇದಕ್ಕೆ ಉತ್ತಮ ಪ್ರತಿಕ್ರಿಯೆ ಕಂಡುಬರುತ್ತಿದೆ.
ಪಿ.ವಿ.ಭಂಡಾರಿ ಡಿಡಿಪಿಯು, ಚಿಕ್ಕೋಡಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net