ಸರ್ಕಾರಿ ಶಾಲೆ ಪ್ರಗತಿಗೆ ಸಂ, ಸಂಸ್ಥೆಗಳು ಸಹಕರಿಸಲಿ / NANDAGUDI

ಹೊಸಕೋಟೆ ತಾಲೂಕು ನಂದಗುಡಿಯ ಕರ್ನಾಟಕ ಪಬ್ಲಿಕ್​ ಸ್ಕೂಲ್​ನಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಶರತ್​ ಬಚ್ಚೇಗೌಡ ಚಾಲನೆ ನೀಡಿದರು. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ.ರಾಜಶೇಖರಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಟಿ.ಎಸ್​.ರಾಜಶೇಖರ್​, ಬಮುಲ್​ ಒಕ್ಕೂಟದ ನಿರ್ದೇಶಕ ಎಲ್​ಎನ್​ಟಿ ಮಂಜುನಾಥ್​ ಇದ್ದರು.
ಹೊಸಕೋಟೆ ತಾಲೂಕು ನಂದಗುಡಿಯ ಕರ್ನಾಟಕ ಪಬ್ಲಿಕ್​ ಸ್ಕೂಲ್​ನಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಶರತ್​ ಬಚ್ಚೇಗೌಡ ಚಾಲನೆ ನೀಡಿದರು. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ.ರಾಜಶೇಖರಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಟಿ.ಎಸ್​.ರಾಜಶೇಖರ್​, ಬಮುಲ್​ ಒಕ್ಕೂಟದ ನಿರ್ದೇಶಕ ಎಲ್​ಎನ್​ಟಿ ಮಂಜುನಾಥ್​ ಇದ್ದರು.
Published on
ನಂದಗುಡಿ : ಗ್ರಾಮೀಣ ಮಕ್ಕಳ ಶೈಕ್ಷಣಿಕ ಭವಿಷ್ಯ ಉಜ್ವಲಗೊಳಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಶಾಲಾ ಮಕ್ಕಳಿಗೆ ಸರ್ಕಾರ ಇಲಾಖೆ ಮೂಲಕ ವಿವಿಧ ಸೌಲಭ್ಯ ನೀಡುತ್ತಿರುವುದರ ಜತೆಗೆ ಕಾಪೋರ್ರೇಟ್​ ಸಂಸ್ಥೆ ಹಾಗೂ ದಾನಿಗಳು ಸಹಾಯ ಹಸ್ತ ಚಾಚುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶಾಸಕ ಶರತ್​ ಬಚ್ಚೇಗೌಡ ಹೇಳಿದರು.
ಹೊಸಕೋಟೆ ತಾಲೂಕು ನಂದಗುಡಿಯ ಕರ್ನಾಟಕ ಪಬ್ಲಿಕ್​ ಸ್ಕೂಲ್​ನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯುಐ ಪಥ್​ ಮತ್ತು ಯುನೈಟೆಡ್​ ವೇ ಕಂಪನಿಯ ಸಿಎಸ್​ಆರ್​ ಅನುದಾನದಡಿ 65 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ 4 ಕೊಠಡಿ, ಬೆಂಗಳೂರಿನ ಎಟಿ ಆ್ಯಂಡ್​ ಟಿ ಕಂಪನಿಯಿಂದ 6 ಲಕ್ಷ ರೂ. ವೆಚ್ಚದ ಕಂಪ್ಯೂಟರ್​ ಮತ್ತು ಮುಖ್ಯಮತ್ರಿಗಳ ಹಾಗೂ ಶಾಸಕರ ವಿಶೇಷ ಅನುದಾನದಡಿ 50 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿಮಾರ್ಣ ಕಾಮಗಾರಿ ಹಾಗೂ 2 ಬಸ್​ ತಂಗುದಾಣ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನಲ್ಲಿರುವ ಸರ್ಕಾರಿ ಶಾಲಾ&ಕಾಲೇಜಿನ ಅಭಿವೃದ್ಧಿಗೆ ಕಾಪೋರ್ರೇಟ್​ ಕಂಪನಿಗಳ ಸಿಎಸ್​ಆರ್​ ಅನುದಾನದಡಿ ದಾನಿಗಳ ನೆರವಿನಿಂದ ಹಾಗೂ ವೈಯುಕ್ತಿಕ ಹಣದಲ್ಲಿ ಶಾಲಾ ಕೊಠಡಿ, ಪೀಠೋಪಕರಣ, ಕಂಪ್ಯೂಟರ್​, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ಸಂಘ&ಸಂಸ್ಥೆಗಳು, ದಾನಿಗಳು ಸರ್ಕಾರಿ ಶಾಲೆಯ ಪ್ರಗತಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಬಿಇಒ ಪದ್ಮನಾಭ್​ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಹೊಂದುವ ನಿಟ್ಟಿನಲ್ಲಿ ಕಾಪೋರ್ರೇಟ್​ ಸಂಸ್ಥೆಗಳ ಸಿಎಸ್​ಆರ್​ ಅನುದಾನ ಸಮರ್ಪಕವಾಗಿ ಬಳಸಿಕೊಂಡು, ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿವೆ. ಸರ್ಕಾರಿ ಶಾಲೆಗಳು ಉತ್ತಮ ಶಿಕ್ಷಣ ನೀಡುತ್ತಿವೆ ಎಂದರು.
ಜಿಪಂ ಮಾಜಿ ಸದಸ್ಯ ಕೆ.ಕೃಷ್ಣಮೂರ್ತಿ, ತಾಪಂ ಮಾಜಿ ಸದಸ್ಯ ಯರ್ರೆಗೌಡ, ಉದ್ಯಮಿ ಕಲ್ಕೆರೆ ಎಂ.ಮಂದೀಪ್​ಗೌಡ, ಎಸ್​ಎಫ್​ಸಿಎಸ್​ ಅಧ್ಯಕ್ಷ ಸಿ.ಎಂ.ನಾರಾಯಣಸ್ವಾಮಿ, ನಿರ್ದೇಶಕರಾದ ಎಚ್​.ಎನ್​.ಧಮೇರ್ಶ್​, ಚಂದ್ರಪ್ಪ, ಎಂ.ನಾಗೇಶ್​, ಸಿ.ಎನ್​.ದಿನೇಶ್​, ಎನ್​.ಶ್ರೀನಿವಾಸ್​, ಎಸ್​ಡಿಎಂಸಿ ಉಪಾಧ್ಯಕ್ಷ ಎನ್​.ಗಂಗಾಧರ್​, ಸದಸ್ಯ ಜಿ.ಮೂರ್ತಿ, ಭೂನ್ಯಾಯ ಮಂಡಳಿ ಸದಸ್ಯ ವೀರರಾಜು, ಯುನೈಟೆಡ್​ವೇ ಕಂಪನಿಯ ನಾಗರಾಜ್​, ಕೆ.ಮಂಜುನಾಥ್​, ಮುಖಂಡರಾದ ಚೊಕ್ಕಸಂದ್ರ ದೇವರಾಜ್​, ಲಕ್ಷಿ$್ಮನಾರಾಯಣ್​, ಎನ್​.ನಾಗೇಶ್​, ನಟರಾಜ್​, ಪಿಡಿಒ ಕೆಂಪಣ್ಣ, ಮುಖ್ಯಶಿಕ್ಷಕ ಡಿ.ಕೆ.ಕೃಷ್ಣಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net