ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಕನ್ನಡ ದಿನಪತ್ರಿಕೆ ಓದುವುದು ಕಡ್ಡಾಯ! ಕರ್ನಾಟಕದ ಮಕ್ಕಳಿಗೇಕಿಲ್ಲ ಈ ಭಾಗ್ಯ..? kannada newspaper

kannada newspaper
kannada newspaper
Published on
ಬೆಂಗಳೂರು: (kannada newspaper) ದಿನಪತ್ರಿಕೆ ಓದುವ ಅಭ್ಯಾಸ ಮಾಡಿಕೊಳ್ಳುವುದರಿಂದ ಸುತ್ತ ಮುತ್ತಲಿನ ಆಗು-ಹೋಗುಗಳನ್ನು ತಿಳಿಯಲು ಮಾತ್ರವಲ್ಲದೇ ನಮ್ಮ ಜ್ಞಾನ ಹೆಚ್ಚಿಸಿಕೊಳ್ಳಬಹುದು. ಪತ್ರಿಕೆಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಿ ಎಂದು ನಮ್ಮ ಹಿರಿಯರು ಹೇಳುವುದನ್ನು ನಾವು ಕೇಳುತ್ತಲೆ ಬಂದಿದ್ದೇವೆ. ರಾಜ್ಯದ ಸರ್ಕಾರಿ ಶಾಲೆಯ ಮಕ್ಕಳು ಕೇವಲ ಪಠ್ಯಕ್ರಮಕ್ಕೆ ಮಾತ್ರ ಸೀಮಿತವಾಗಬಾರದು ಎನ್ನುವ ದೃಷ್ಟಿಯಿಂದ ಪ್ರತಿದಿನ ಬೆಳಿಗ್ಗೆ ಪತ್ರಿಕೆಗಳನ್ನು ಸಹ ಓದಬೇಕು ಎಂದು ಉತ್ತರ ಪ್ರದೇಶದ ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಮುಂದಾಗಿದೆ.
ಕರ್ನಾಟಕದಲ್ಲೂ ಸರ್ಕಾರಿ ಶಾಲೆಗಳಲ್ಲಿ ಇನ್ಮುಂದೆ ಕನ್ನಡ ದಿನಪತ್ರಿಕೆ ಓದುವುದು ಕಡ್ಡಾಯಗೊಳಿಸಬೇಕೆಂಬ ಚರ್ಚೆ!
ಅನೇಕ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ, ವಿದ್ಯಾರ್ಥಿಗಳ ಜ್ಞಾನ ವೃದ್ಧಿ ಮತ್ತು ಓದುವ ಅಭ್ಯಾಸ ಬೆಳೆಸಲು ದಿನಪತ್ರಿಕೆ ಓದುವ ಕಾರ್ಯಕ್ರಮಗಳನ್ನು ಉತ್ತೇಜಿಸಲಾಗುತ್ತದೆ. ಕೆಲವು ಶಾಲೆಗಳಲ್ಲಿ ಬೆಳಗಿನ ಸಭೆಯಲ್ಲಿ ಸುದ್ದಿ ಓದುವುದು ಅಥವಾ ಗ್ರಂಥಾಲಯದಲ್ಲಿ ಪತ್ರಿಕೆಗಳನ್ನು ಲಭ್ಯವಾಗಿರಿಸುವುದು ಸಾಮಾನ್ಯ. ಆದರೆ ಈ ಹೊಸ ನಿಯಮವನ್ನು ಕರ್ನಾಟಕ ಸರ್ಕಾರ ಜಾರಿಗೆ ತಂದಿದ್ದೇ ಆದಲ್ಲಿ ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಇನ್ನಷ್ಟು ಸಹಾಯವಾಗಲಿದೆ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಕನ್ನಡ ಭಾಷೆಯ ಅಭಿವೃದ್ಧಿಯಲ್ಲಿ ಕನ್ನಡ ದಿನಪತ್ರಿಕೆಗಳ ಪಾತ್ರ

ಕನ್ನಡ ಭಾಷೆಯ ಅಭಿವೃದ್ಧಿಯಲ್ಲಿ ಕನ್ನಡ ದಿನಪತ್ರಿಕೆಗಳ ಪಾತ್ರ ಬಹುಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕನ್ನಡದ ನಂ 1 ದಿನಪತ್ರಿಕೆ ವಿಜಯವಾಣಿ ಕನ್ನಡ ಶಬ್ಧಗಳನ್ನು ಪತ್ರಿಕೆಗಳಲ್ಲಿ ಪ್ರತಿನಿತ್ಯ ಬಳಸುವ ಮೂಲಕವಾಗಿ ಕನ್ನಡ ಶಬ್ದ ಭಂಡಾರವನ್ನು ಹೆಚ್ಚಿಸುತ್ತಿದೆ. ಅಲ್ಲದೆ ಇತ್ತೇಚೆಗೆ ಪ್ರೆಸ್​​ ವಿಸಿಟ್​​ ಎಂಬ ಹೊಸ ಪರಿಕಲ್ಪನೆಯನ್ನು ಹುಟ್ಟುಹಾಕಿದೆ. ಈ ಮೂಲಕವಾಗಿ ಪ್ರಿಂಟಿಂಗ್​ ಪ್ರೆಸ್​​ಗೆ ಕರೆದುಕೊಂಡು ಹೋಗಿ ಒಂದು ಪತ್ರಿಕೆ ಹೊರತರಲು ಯಾವ ರೀತಿ ಕ್ರಮ ಇರುತ್ತದೆ ಎಂಬ ಬಗ್ಗೆ ಮಕ್ಕಳು, ಶಿಕ್ಷಣ ಸಂಸ್ಥೆ, ಸಂಘ- ಸಂಸ್ಥೆಗಳಿಗೂ ತಿಳಿಸಿಕೊಡಲಾಗುತ್ತಿದೆ. ಈ ಪ್ರೆಸ್​​ ವಿಸಿಟ್ ಕಾರ್ಯಕ್ರಮ ಪತ್ರಿಕೆಯ ಎಲ್ಲಾ ಆವೃತ್ತಿಗಳ ಕಾರ್ಯ ಹೇಗೆ ನಡೆಯುತ್ತಿದೆ ಎನ್ನುವುದನ್ನು ತಿಳಿಸಿಕೊಡುವ ಒಂದು ಪರಿಕಲ್ಪನೆಯಾಗಿದೆ.

ಕನ್ನಡ ದಿನಪತ್ರಿಕೆ ಓದುವುದರ ಮಹತ್ವ!

ಪ್ರತಿದಿನ ದಿನಪತ್ರಿಕೆ ಓದುವುದು ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತ. ಸಾಮಾನ್ಯ ಜ್ಞಾನ ಹೆಚ್ಚಳ, ರಾಜ್ಯ, ದೇಶ, ವಿದೇಶದ ಪ್ರಚಲಿತ ಘಟನೆಗಳು, ಕ್ರೀಡೆ, ವಿಜ್ಞಾನ, ಆರ್ಥಿಕತೆ ಇತ್ಯಾದಿ ಬಗ್ಗೆ ತಿಳುವಳಿಕೆ ಬರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (UPSC, KAS, SSC ಇತ್ಯಾದಿ) ನಾವು ಶಾಲೆಯಿಂದಲೇ ರೂಢಿಸಿಕೊಂಡಲ್ಲಿ ಇದು ಮುಂದಿನ ದಿನಗಳಲ್ಲಿ ಸಹಾಯಕವಾಗಲಿದೆ.
ಭಾಷಾ ಕೌಶಲ ಸುಧಾರಣೆ, ಹೊಸ ಪದಗಳು, ವಾಕ್ಯ ರಚನೆ, ಬರವಣಿಗೆ ಶೈಲಿ ಕಲಿಯುತ್ತಾರೆ. ಕನ್ನಡ ಅಥವಾ ಇಂಗ್ಲಿಷ್ ಪತ್ರಿಕೆ ಓದುವುದರಿಂದ ಭಾಷಾ ನೈಪುಣ್ಯ ಹೆಚ್ಚುತ್ತದೆ.
ಏಕಾಗ್ರತೆ ಮತ್ತು ಗಮನ ಸುಧಾರಣೆ, ಮೊಬೈಲ್/ಸ್ಕ್ರೀನ್ ಬಳಕೆ ಕಡಿಮೆಯಾಗಿ, ಮುದ್ರಿತ ಪತ್ರಿಕೆ ಓದುವುದು ಮನಸ್ಸನ್ನು ಶಾಂತಗೊಳಿಸಿ ಏಕಾಗ್ರತೆ ಹೆಚ್ಚಿಸುತ್ತದೆ.
ಸಂಪಾದಕೀಯಗಳು, ಅಂಕಣಗಳು ಓದಿ ವಿವಿಧ ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ಸುಳ್ಳು ಸುದ್ದಿಗಳನ್ನು ಗುರುತಿಸುವ ಶಕ್ತಿ ಬರುತ್ತದೆ. ಎಳೆಯ ವಯಸ್ಸಿನಲ್ಲಿ ಇದು ರೂಢಿಯಾದರೆ ಜೀವಮಾನದ ಒಳ್ಳೆಯ ಅಭ್ಯಾಸವಾಗುತ್ತದೆ.

ಶಾಲಾ ಅವಧಿಯಲ್ಲಿ ಇದನ್ನು ಹೇಗೆ ಹಮ್ಮಿಕೊಳ್ಳಬಹುದು?

1) ಪ್ರತಿದಿನ ಬೆಳಿಗ್ಗೆ ಶಾಲಾ ಪ್ರಾರ್ಥನೆಯ ನಂತರ 'ದಿನದ ಪ್ರಮುಖ ಸುದ್ದಿಗಳು' ಅಥವಾ 'ವಿಶೇಷ ಲೇಖನ'ಗಳನ್ನು ಒಬ್ಬ ವಿದ್ಯಾರ್ಥಿ ಅಥವಾ ಶಿಕ್ಷಕರು ಓದಬಹುದು.
2) ಕನ್ನಡ ಪತ್ರಿಕೆಯಲ್ಲಿ ಬಂದ ಪ್ರಮುಖ ಲೇಖನಗಳು, ಚಿತ್ರಗಳು ಅಥವಾ ಸ್ಫೂರ್ತಿದಾಯಕ ಕಥೆಗಳನ್ನು ಕತ್ತರಿಸಿ ಶಾಲೆಯ ನೋಟಿಸ್ ಬೋರ್ಡ್‌ನಲ್ಲಿ ಹಚ್ಚುವುದು.
3) ವಾರಕ್ಕೊಮ್ಮೆ ಒಂದು ಪ್ರಮುಖ ವಿಷಯವನ್ನು ತೆಗೆದುಕೊಂಡು ತರಗತಿಯಲ್ಲಿ ಅದರ ಬಗ್ಗೆ ಚರ್ಚೆ ಏರ್ಪಡಿಸಬಹುದು. ಪತ್ರಿಕೆಗಳಲ್ಲಿ ಬರುವ ಪದಬಂಧಗಳನ್ನು (Crosswords) ಬಿಡಿಸಲು ಮಕ್ಕಳನ್ನು ಪ್ರೋತ್ಸಾಹಿಸುವುದು, ಇದರಿಂದ ಅವರ ಆಲೋಚನಾ ಸಾಮರ್ಥ್ಯ ಹೆಚ್ಚುತ್ತದೆ.
ಕರ್ನಾಟಕ ಸರ್ಕಾರವು ಈಗಾಗಲೇ ಕೆಲವು ಯೋಜನೆಗಳ ಮೂಲಕ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಲು ಪ್ರಯತ್ನಿಸುತ್ತಿದೆ. ಆದರೆ ಅಧಿಕೃತವಾಗಿ 'ದಿನಪತ್ರಿಕೆ ಓದುವುದು ಕಡ್ಡಾಯ' ಎಂಬ ಆದೇಶ ಇಡೀ ರಾಜ್ಯಕ್ಕೆ ಇನ್ನೂ ಜಾರಿಯಾಗಿಲ್ಲದಿದ್ದರೂ, ಅನೇಕ ಮಾದರಿ ಶಾಲೆಗಳಲ್ಲಿ ಶಿಕ್ಷಕರೇ ಸ್ವಯಂಪ್ರೇರಿತರಾಗಿ ಇದನ್ನು ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಡಿಜಿಟಲ್ ಪರದೆಗಳ (Mobile/TV) ವ್ಯಸನ ಕಡಿಮೆ ಮಾಡಲು ಸರ್ಕಾರ ಇಂತಹ ಯೋಜನೆಯನ್ನು ಜಾರಿಗೆ ತರುವ ಸಾಧ್ಯತೆ ಹೆಚ್ಚಿದೆ. ಆದರೆ ಈ ಯೋಜನೆಯನ್ನು ಕಡ್ಡಾಯ ಎಂದು ಜಾರಿಗೊಳಿಸಿದರೆ ಒಂದು ಉತ್ತಮ ಬಸಲಾವಣೆ ತರಲಿದೆ.

ಈ ಯೋಜನೆ ಜಾರಿಯಾದರೆ ಹೇಗಿರುತ್ತದೆ?

1) ಸರ್ಕಾರಿ ಶಾಲೆಗಳಲ್ಲಿ ಇದು ಕಡ್ಡಾಯವಾದರೆ ಗ್ರಾಮೀಣ ಮಕ್ಕಳಿಗೂ ಜಾಗತಿಕ ಜ್ಞಾನ, ಹಳ್ಳಿಯ ಮಕ್ಕಳಿಗೆ ದೇಶ-ವಿದೇಶದ ವಿದ್ಯಮಾನಗಳು ಸುಲಭವಾಗಿ ತಲುಪುತ್ತವೆ.
2) ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ, ಮುಂದೆ IAS, KAS ಅಥವಾ ಬ್ಯಾಂಕಿಂಗ್ ಪರೀಕ್ಷೆ ಬರೆಯುವ ಮಕ್ಕಳಿಗೆ ಬಾಲ್ಯದಿಂದಲೇ ತಳಪಾಯ ಸಿದ್ಧವಾಗುತ್ತದೆ.
3) ನಕಲಿ ಸುದ್ದಿಗಳ ಅರಿವು, ಸಾಮಾಜಿಕ ಜಾಲತಾಣದ ಸುಳ್ಳು ಸುದ್ದಿಗಳಿಗೂ ಮತ್ತು ಪತ್ರಿಕೆಯ ಅಧಿಕೃತ ಸುದ್ದಿಗಳಿಗೂ ಇರುವ ವ್ಯತ್ಯಾಸ ಮಕ್ಕಳಿಗೆ ತಿಳಿಯುತ್ತದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಮೇಲಿನ ಹಿಡಿತ ಸಾಧಿಸಲು ಇದು ಸುಲಭ ದಾರಿ.
ಶಿಕ್ಷಕರು ಮತ್ತು ಪೋಷಕರ ಪಾತ್ರ ಮುಖ್ಯವಾಗಿದೆ.
4) ಶಿಕ್ಷಕರು ತರಗತಿಯಲ್ಲಿ ಪತ್ರಿಕೆಯ ಆಯ್ದ ಭಾಗಗಳನ್ನು ಓದಿ ಅದರ ಅರ್ಥವನ್ನು ಸರಳವಾಗಿ ವಿವರಿಸಬೇಕು. ಗ್ರಂಥಾಲಯದಲ್ಲಿ ಕನಿಷ್ಠ 2-3 ವಿಭಿನ್ನ ದಿನಪತ್ರಿಕೆಗಳು (ಉದಾಹರಣೆಗೆ: ಪ್ರಜಾವಾಣಿ, ವಿಜಯವಾಣಿ, ಕನ್ನಡಪ್ರಭ ಇತ್ಯಾದಿ) ಲಭ್ಯವಿರುವಂತೆ ನೋಡಿಕೊಳ್ಳಬೇಕು.
5) ನೀವು ವಿದ್ಯಾರ್ಥಿಯಾಗಿದ್ದರೆ ಪ್ರತಿದಿನ ಕನಿಷ್ಠ 20-30 ನಿಮಿಷ ಪತ್ರಿಕೆ ಓದಲು ಪ್ರಯತ್ನಿಸಿ. ಇದು ಮುಂದೊಂದು ದಿನ ಇದು ನಿಮ್ಮ ಭವಿಷ್ಯಕ್ಕೆ ದೊಡ್ಡ ಸಹಾಯವಾಗಲಿದೆ.
ವಿಜಯವಾಣಿ ಜತೆ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಡಾ. ಪುರುಷೋತ್ತಮ ಬಿಳಿಮಲೆ, ಉತ್ತರಪ್ರದೇಶ ಸರ್ಕಾರ ಮಕ್ಕಳ ಜ್ಞಾನ ಹೆಚ್ಚಿಸಲು ಸರ್ಕಾರಿ ಶಾಲೆಯಲ್ಲಿ ದಿನಪತ್ರಿಕೆ ಓದುವುದು ಕಡ್ಡಾಯ ಎನ್ನುವ ನಿಯಮ ಜಾರಿಗೆ ತಂದಿದ್ದು, ಒಳ್ಳೆ ಸಂಗತಿಯಾಗಿದೆ. ಉತ್ತರ ಪ್ರದೇಶ ಮಾದರಿಯನ್ನು ಕರ್ನಾಟಕದಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಪ್ರತಿನಿತ್ಯ ಕನ್ನಡ ದಿನಪತ್ರಿಕೆ ಓದಬೇಕು ಎನ್ನುವ ನಿಮಯ ಜಾರಿಗೆ ತಂದಿದ್ದೆ ಆದಲ್ಲಿ ಕನ್ನಡ ಭಾಷೆಯ ಮೌಲ್ಯವನ್ನು ನಾವು ಇನ್ನಷ್ಟು ಮಕ್ಕಳಿಗೆ ತಿಳಿಸಬಹುದಾಗಿದೆ. ಹೀಗೆ ಕರ್ನಾಟಕದಲ್ಲಯೂ ಕೂಡಾ ಸರ್ಕಾರಿ ಹಾಗೂ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಪ್ರತಿನಿತ್ಯ ಕನ್ನಡ ದಿನಪತ್ರಿಕೆ ಓದಲು ಸರ್ಕಾರ ಒಂದು ಯೋಜನೆ ಜಾರಿಗೆ ತರಬೇಕು ಎಂದು ಸರ್ಕಾರಕ್ಕೆ ನಾನು ಪತ್ರ ಬರೆಯುತ್ತೇನೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಉತ್ತರ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಇನ್ಮುಂದೆ ದಿನಪತ್ರಿಕೆ ಓದುವುದು ಕಡ್ಡಾಯ!

ಉತ್ತರ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಪತ್ರಿಕೆ ಓದುವುದು ಕಡ್ಡಾಯಗೊಳಿಸುವ ಮೂಲಕ ಶಾಲೆಗಳ ನೋಟವನ್ನು ಬದಲಾಯಿಸುವುದರ ಜೊತೆಗೆ, ವಿದ್ಯಾರ್ಥಿಗಳ ಆಲೋಚನಾ ಶೈಲಿಯನ್ನು ಸುಧಾರಿಸಲು ಯೋಗಿ ಸರ್ಕಾರ ಈ ಮಹತ್ವದ ನಿರ್ಧಾರಕ್ಕೆ ಬಂದಿದೆ. ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸಿ ಶಿಕ್ಷಣ ಇಲಾಖೆ ಆದೇಶಗಳನ್ನು ಹೊರಡಿಸಿದ್ದು, ವಿದ್ಯಾರ್ಥಿಗಳು ಓದುವ ಶಕ್ತಿಯನ್ನು ಹೆಚ್ಚಿಸುವುದು ಮತ್ತು ಗ್ಯಾಜೆಟ್‌ಗಳ ವ್ಯಸನದಿಂದ ಬಳಲುತ್ತಿರುವ ವಿದ್ಯಾರ್ಥಿಗಳನ್ನು ಇದರಿಂದ ಬಚಾವ್​ ಮಾಡುವ ಉದ್ದೇಶ ಪರದೆಯ ಸಮಯವನ್ನು ಕಡಿಮೆ ಮಾಡುವುದಾಗಿದೆ.
ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಾರ್ಥಸಾರಥಿ ಸೇನ್ ಶರ್ಮಾ ಡಿಸೆಂಬರ್ 23 ರಂದು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅದರ ಪ್ರಕಾರ, ಪ್ರತಿದಿನ ಬೆಳಿಗ್ಗೆ ಶಾಲಾ ಸಭೆಯಲ್ಲಿ ಪತ್ರಿಕೆ ಓದಲು 10 ನಿಮಿಷಗಳ ಸಮಯವನ್ನು ನಿರ್ದಿಷ್ಟವಾಗಿ ನಿಗದಿಪಡಿಸಬೇಕು. ವಿದ್ಯಾರ್ಥಿಗಳು ರಾಷ್ಟ್ರೀಯ, ಅಂತರರಾಷ್ಟ್ರೀಯ, ಕ್ರೀಡೆ ಮತ್ತು ಸಂಪಾದಕೀಯ ಲೇಖನಗಳಿಂದ ಪ್ರಮುಖ ಅಂಶಗಳನ್ನು ಸರದಿ ಆಧಾರದ ಮೇಲೆ ಪಠಿಸಬೇಕಾಗುತ್ತದೆ. ಹಿಂದಿ ಮತ್ತು ಇಂಗ್ಲಿಷ್ ದಿನಪತ್ರಿಕೆಗಳನ್ನು ಶಾಲಾ ಸಂಸ್ಕೃತಿಯ ಅವಿಭಾಜ್ಯ ಅಂಗವನ್ನಾಗಿ ಮಾಡಬೇಕೆಂದು ಸರ್ಕಾರ ಸ್ಪಷ್ಟಪಡಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net