ಸರ್ಕಾರಿ ಶಾಲೆಗಳಲ್ಲಿ ಎಲ್ ಕೆಜಿ ಯುಕೆಜಿ ಮೆರುಗು

ಸರ್ಕಾರಿ ಶಾಲೆಗಳಿಗೆ ಎಲ್ ಕೆಜಿ ಯುಕೆಜಿ ಮೆರಗು
ಸರ್ಕಾರಿ ಶಾಲೆಗಳಿಗೆ ಎಲ್ ಕೆಜಿ ಯುಕೆಜಿ ಮೆರಗು
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ಶಾಲೆಗಳಲ್ಲಿ ಎಲ್ ಕೆಜಿ ಯುಕೆಜಿ ಮೆರುಗು
  • ಬೆಳಗಾವಿ,ಚಿಕ್ಕೋಡಿ ಜಿಲ್ಲೆಗಳಲ್ಲಿ ನೂರಕ್ಕೂ ಅಧಿಕ ಶಾಲೆಗಳಲ್ಲಿ ತರಗತಿ ಆರಂಭ
  • ಸರ್ಕಾರಿ ಶಾಲೆಗಳತ್ತ ಪಾಲಕರ ಚಿತ್ತ
ಶಾಲೆಗಳಿಗೆ ಎಲ್‌ಕೆಜಿ-ಯುಕೆಜಿ ಮೆರಗು
ಸರ್ಕಾರಿ ಶಾಲೆಗಳತ್ತ ಪಾಲಕರ ಚಿತ್ತ | ಸಿದ್ದತೆ ಆರಂಭ
ಆನಂದ ಭಮ್ಮನ್ನವರ ಚಿಕ್ಕೋಡಿ:
ಬಡ ಹಾಗೂ ಗ್ರಾಮೀಣ ಗುಣಮಟ್ಟದ ಪೂರ್ವಪ್ರಾಥಮಿಕ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ ರಾಜ್ಯಸರ್ಕಾರ ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಚಿಕ್ಕೋಡಿ ಮತ್ತು ಬೆಳಗಾವಿ ಶೈಕ್ಷಣಿಕ ಜಿಲ್ಲೆ ಸೇರಿದಂತೆ ಒಟ್ಟು 100 ಕ್ಕೂ ಅಧಿಕ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಪ್ರಾರಂಭವಾಗುತ್ತಿರುವುದು ಶಾಲೆಗಳ ಮೆರಗು ಇನ್ನೂ ಹೆಚ್ಚಲಿದೆ.
ಬೆಳಗಾವಿಯಲ್ಲಿ ೨೪೪ ಶಾಲೆಗೆ ಅನುಮತಿ:
ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಇಲಾಖೆಯಿಂದ ಎಲ್‌ಕೆಜಿ ಯುಕೆಜಿ ಪ್ರಾರಂಭಿಸಲು 244 ಶಾಲೆಗಳಿಗೆ ಅನುಮತಿ ನೀಡಿದೆ. ಕಳೆದ ಸಾಲಿನಲ್ಲಿ 50 ಶಾಲೆಗಳು ಪ್ರಾರಂಭವಾಗಿವೆ. ಎಲ್‌ಕೆಜಿಗೆ 1,309 ಮತ್ತು ಯುಕೆಜಿಗೆ 992 ಮಕ್ಕಳು ದಾಖಲಾಗಿದ್ದರು.
ಚಿಕ್ಕೋಡಿಲ್ಲಿ ೨೪೭ ಶಾಲೆ ಮಂಜೂರು:
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಇಲಾಖೆಯಿಂದ ಎಲ್‌ಕೆಜಿ ಮತ್ತು ಕೆಜಿ ಪ್ರಾರಂಭಿಸಲು 247 ಶಾಲೆಗಳಿಗೆ ಮಂಜೂರಾತಿ ನೀಡಿದೆ. ಕಳೆದ ಸಾಲಿನಲ್ಲಿ 147 ಶಾಲೆಗಳಲ್ಲಿ ತರಗತಿ ಪ್ರಾರಂಭವಾಯಿತು. ಎಲ್‌ಕೆಜಿಗೆ 3,218 ವಿದ್ಯಾರ್ಥಿಗಳು ಮತ್ತು ಯುಕೆಜಿಗೆ 1,423 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಈ ಬಾರಿ ಹೊಸದಾಗಿ 40 ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಪ್ರಾರಂಭಿಸಲಾಗುತ್ತಿದೆ. ಪಾಲಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಗಡಿಭಾಗದ ಸರ್ಕಾರಿ ಶಾಲೆಗಳಲ್ಲಿ ದಿನೇ ದಿನೆ ಮಕ್ಕಳ ದಾಖಲಾತಿ ಕ್ಷೀಣಿಸುತ್ತಿರುವ ಪರಿಣಾಮ ಮುಚ್ಚುವ ಸ್ಥಿತಿಯಲ್ಲಿ ಶಾಲೆಗಳಲ್ಲಿ ಪೂರ್ವಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸುತ್ತಿರುವುದು ಶಾಲೆಗಳ ಗುಣಮಟ್ಟದ ಶಿಕ್ಷಣ ವೃದ್ಧಿಗೆ ಸಹಕಾರಿಯಾಗಲಿದೆ. ದ್ವಿಭಾಷಾ ಮಾಧ್ಯಮದಲ್ಲಿ ತರಗತಿಗಳನ್ನು ನಡೆಸಲು ಸರ್ಕಾರ ನಿರ್ಧರಿಸಿದ್ದು, ಖಾಸಗಿ ಶಾಲೆಗಳ ವ್ಯಾಮೋಹ ತಗ್ಗಿಸಲು ಸಹಕಾರಿಯಾಗಿದೆ.
-------------
ಬಾಕ್ಸ್-೧
ಪ್ರಚಾರ ಮಾಡಲಿ
ಎಲ್‌ಕೆಜಿ ಮತ್ತು ಯುಕೆಜಿ ತರಗತಿಯನ್ನು ಪ್ರಾರಂಭಿಸಲು ಮಂಜೂರಾತಿ ಪಡೆದ ಶಾಲೆಗಳು ತರಗತಿಗಳ ಪ್ರಾರಂಭಕ್ಕೆ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಹಾಗೂ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸುವ ಕುರಿತು ಎಸ್‌ಡಿಎಂಸಿ ಮತ್ತು ಶಿಕ್ಷಕರು ಸ್ಥಳೀಯ ಮಟ್ಟದಲ್ಲಿ ಕರಪತ್ರ ಹಂಚಿಕೆ, ಜಾಥಾ, ಮನೆ ಮನೆ ಭೇಟಿ, ಬ್ಯಾನರ್ ಮೂಲಕ ವ್ಯಾಪಕ ಪ್ರಚಾರ ಕೈಗೊಂಡು ದಾಖಲಾತಿ ಹೆಚ್ಚಳಕ್ಕೆ ಕ್ರಮ ವಹಿಸುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ.
-------------
ಕೋಟ್-೧
ಸರ್ಕಾರದ ಆದೇಶದಂತೆ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಬೇಡಿಕೆ ಇರುವ ಶಾಲೆಗಳಲ್ಲಿ ಇಷ್ಟು ತರಗತಿಗಳನ್ನು ಪ್ರಾರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
| ಸೀತಾರಾಮು ಆರ್.ಎಸ್.
ಡಿಡಿಪಿಐ ಚಿಕ್ಕೋಡಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net