ಪ್ರತಿಪಕ್ಷಕ್ಕೆ ಹೆದರಿ ಸರ್ಕಾರ ಪಲಾಯನ

ಪ್ರತಿಪಕ್ಷ ನಾಯಕ ಆರ್.ಅಶೋಕ
ಪ್ರತಿಪಕ್ಷ ನಾಯಕ ಆರ್.ಅಶೋಕ
Published on
ಬೆಂಗಳೂರು: ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಘೋಷಣೆ ಮಾಡಿದ ತಕ್ಷಣ ಸರ್ಕಾರ ಹೆದರಿ ಸದನವನ್ನು ರದ್ದು ಮಾಡಿದೆ. ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಗೆ ಸಿದ್ಧವಿದ್ದರೂ ಕಾಂಗ್ರೆಸ್ ತಯಾರಿರಲಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆರೋಪಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಜೂನ್-ಜುಲೈನಲ್ಲಿ ನಡೆಯಬೇಕಿದ್ದ ಅಧಿವೇಶನ ಸಚಿವ ಸಂಪುಟದ ಕಿತ್ತಾಟದಿಂದಾಗಿ ಮುಂದೂಡಿದರು. ಆದರೆ, ಮೂರು ದಿನ ಮುನ್ನವೇ ಸದನ ರದ್ದು ಮಾಡಿರುವುದು ಆಡಳಿತರೂಢ ಸರ್ಕಾರದ ವಿಫಲತೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ಮಾಡಿದ ಬಿ.ನಾಗೇಂದ್ರ ಅವರಿಗಾಗಿ ಇಡೀ ಸದನವನ್ನೇ ರದ್ದು ಮಾಡಿದ್ದಾರೆ. ನಾಗೇಂದ್ರ ಲೂಟಿ ಮಾಡಿರುವ ಹಣದಲ್ಲಿ ಕಾಂಗ್ರೆಸ್ ಪಾಲು ಪಡೆದಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಹೆಚ್ಚಿರುವ ಬರಗಾಲ, ನೈಸ್ ಟೋಲ್ ಅಕ್ರಮ, ಕೆಪಿಎಸ್‌ಸಿ ಅಕ್ರಮ, ಬೆಂಗಳೂರಿನ ತ್ಯಾಜ್ಯ ಸಂಗ್ರಹ ಟೆಂಡರ್‌ನಲ್ಲಿ ಅಕ್ರಮ, ಸುರಂಗ ರಸ್ತೆ ಯೋಜನೆಯಲ್ಲಿ ಉದ್ಯಮಿ ಗೌತಮ್ ಅದಾನಿಯೊಂದಿಗೆ ಒಪ್ಪಂದ, ಪಡಿತರ ಕಾರ್ಡ್ ಕಡಿತ ಮೊದಲಾದ ವಿಷಯಗಳ ಬಗ್ಗೆ ದಾಖಲೆ ಸಿದ್ಧಪಡಿಸಿಕೊಂಡು ಸದನದಲ್ಲಿ ಮಾತಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಅವಕಾಶ ನೀಡಲಿಲ್ಲ ಎಂದು ಆರ್.ಅಶೋಕ್ ಆರೋಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net