ಕಣ್ಮುಚ್ಚಿ ಕುಳಿತ ಸರ್ಕಾರಿ ಅಧಿಕಾರಿಗಳು

ಮುಧೋಳ ತಾಲೂಕಿನ ಮುದ್ದಾಪುರದಲ್ಲಿ ಜೆ.ಕೆ. ಸಿಮೆಂಟ್ಸ್ ಕಾರ್ಖಾನೆ ಅಕ್ರಮ ಗಣಿಗಾರಿಕೆ ಮತ್ತು ವಿಸ್ತರಣಾ ಯೋಜನೆ ವಿರೋಧಿಸಿ ನಡೆಯುತ್ತಿರುವ ರೈತರ ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ರೈತರು ಸುರೇಶ ಕಿವಡಿ ಹನುಮಂತ ಕಿವಡಿ, ಗೋಪಾಲ ಯಾದವ, ಕಷ್ಣ ತಳವಾರ, ನಿಖಿಲ ಕಿವಡಿ, ನಾಗಪ್ಪ ಪಾಟೀಲ, ಪವನ ಗಂಟೋಟಿ, ಮಂಜುನಾಥ ತುಳಸಿಗೇರಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಮುಖಂಡ ಸುರೇಶ ಕಿವಡಿ ಆರೋಪ
  • ಜೆ.ಕೆ. ಸಿಮೆಂಟ್ಸ್ ಅಕ್ರಮದ ವಿರುದ್ಧ ರೈತರ ಹೋರಾಟ
ಮುಧೋಳ: ತಾಲೂಕಿನ ಮುದ್ದಾಪುರದಲ್ಲಿ ಜೆ.ಕೆ. ಸಿಮೆಂಟ್ಸ್ ಕಾರ್ಖಾನೆಯ ಅಕ್ರಮ ಗಣಿಗಾರಿಕೆ ಮತ್ತು ವಿಸ್ತರಣಾ ಯೋಜನೆ ವಿರೋಧಿಸಿ ನಡೆಯುತ್ತಿರುವ ರೈತರ ಅನಿರ್ದಿಷ್ಟಾವಧಿ ಪ್ರತಿಭಟನೆ ಸೋಮವಾರ ಎಂಟನೇ ದಿನಕ್ಕೆ ಕಾಲಿಟ್ಟಿತ್ತು.
ರೈತ ಮುಖಂಡ ಸುರೇಶ ಕಿವಡಿ ಮಾತನಾಡಿ, ನಿಯಮಗಳನ್ನು ಗಾಳಿಗೆ ತೂರಿ ನಡೆಸಲಾಗುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಖಾನೆಗೆ ಸಂಬಂಧಿಸಿದ ಅನಧಿಕತವಾಗಿ ಹೆಚ್ಚಿನ ತೂಕದ ವಾಹನಗಳು ನಿರಂತರವಾಗಿ ಓಡಾಟ ನಡೆಸುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಅರಿವಿದ್ದರೂ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಆರೋಪಿಸಿದರು. ಅಧಿಕಾರಿಗಳು ಕಂಪನಿ ಪರವಾಗಿ ಕೆಲಸ ಮಾಡುತ್ತಿದ್ದು, ರೈತರ ಅಹವಾಲುಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ವಾದಿಸಿದರು.
ನಕಲಿ ದಾಖಲೆ ಸಷ್ಟಿಸಿ ಮತ್ತು ಸಾರ್ವಜನಿಕ ವಿಚಾರಣೆ ಹೆಸರಿನಲ್ಲಿ ಅಧಿಕಾರಿಗಳನ್ನು ದಾರಿ ತಪ್ಪಿಸಿ ಅನುಮತಿ ಪಡೆದಿರುವ ಕಾರ್ಖಾನೆಯ ವಿರುದ್ಧ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳುವವರೆಗೂ ಈ ಹೋರಾಟವನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಎಂದು ಎಚ್ಚರಿಸಿದರು.
ರಂಗಪ್ಪ ತುಳಸಿಗೇರಿ,ವಿಠ್ಠಲ ಗಂಟೋಟಿ, ಶೈಲೇಶ ಹಂಪಹೊಳಿ, ಹನುಮಂತ ಕಿವಡಿ,ಗೋಪಾಲ ಯಾದವ, ಕಷ್ಣ ತಳವಾರ, ನಿಖಿಲ ಕಿವಡಿ, ನಾಗಪ್ಪ ಪಾಟೀಲ, ಪವನ ಗಂಟೋಟಿ, ಮಂಜುನಾಥ ತುಳಸಿಗೇರಿ ಸೇರಿ ಹಲವು ರೈತರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net