

ಪ್ರಮುಖ ಮುಖ್ಯಾಂಶಗಳು
ಪೀಣ್ಯದಾಸರಹಳ್ಳಿ:ಸರಿಯಾದ ರಸ್ತೆ,ಜನರಿಗೆ ಕುಡಿಯಲುನೀರು ಕೊಡದ ನಿಷ್ಪ್ರಯೋಜಕ ಸರ್ಕಾರ,ಗ್ಯಾರಂಟಿ ಯೋಜನೆಹೆಸರಲ್ಲಿ ಜನಸಾಮಾನ್ಯರಿಗೆತೆರಿಗೆ ಏರಿಸಿ ಹಣ ವಸೂಲಿ ಮಾಡುತ್ತಿದೆಎಂದು ಕಾಂಗ್ರೇಸ್ ಸರ್ಕಾರದವಿರುಧ್ದ ವಿಧಾನ ಪರಿಷತ್ ಸದಸ್ಯಟಿ.ಎನ್.ಜವರಾಯಿಗೌಡಅಕ್ರೋಶ ವ್ಯಕ್ತ ಪಡಿಸಿದರು.
ಕಳೆದ20 ವರ್ಷಗಳಿಂದಅನ್ನಪೂರ್ಣೇಶ್ವರಿ ಬಡಾವಣೆಯಲ್ಲಿವಾಸ ಮಾಡುತ್ತಿದ್ದು ಕುಡಿಯಲುನೀರಿಲ್ಲ, ಓಡಾಡಲುರಸ್ತೆ ಇಲ್ಲಾ ,ಲಕ್ಷಲಕ್ಷ ತೆರಿಗೆ ವಸೂಲಿಗೆ ಮಾತ್ರಬರುತ್ತಾರೆ.ನಮ್ಮ ಸಮಸ್ಯೆಕೇಳುವವರು ಮಾತ್ರ ಯಾರು ಇಲ್ಲಎಂದು ಸರ್ಕಾರದ ವಿರುಧ್ದ ಅಲ್ಲಿನನಿವಾಸಿಗಳು ಖಾಲಿ ಬಿಂದಿಗೆ ಹಿಡಿದುಜಲಮಂಡಳಿ ಅಧಿಕಾರಿಗಳ ವಿರುಧ್ದ ಆಕ್ರೋಶ ವ್ಯಕ್ತಪಡಿಸಿದರು.
ಮಾರಣ್ಣಬಡಾವಣೆಯಲ್ಲಿ ಬೋರ್‌ವೆಲ್ಪಂಪ್‌ಸೆಟ್ ಕೆಟ್ಟು ತಿಂಗಳುಗಳಾಗಿವೆ.ಸಂಭಂಧಪಟ್ಟಅಧಿಕಾರಿಗಳು ಉಡಾಪೆ ಉತ್ತರನೀಡುತ್ತಿದ್ದಾರೆ ,ಜಲಮಂಡಳಿ ಇರೋದುಜನರ ಸೇವೆ ಮಾಡುವುದಕ್ಕೆ.ನೀರಿನ ವಿಚಾರದಲ್ಲಿರಾಜಕೀಯ ಸಲ್ಲುದು.ಕಾವೇರಿ ನೀರುಇಲ್ಲಾ, ಬೋರ್‌ವೆಲ್ನೀರು ಇಲ್ಲದೆ ಜನರು ಹೇಗೆ ಬದುಕಬೇಕುಎಂದು ಅಧಿಕಾರಿಗಳನ್ನು ಪ್ರಶ್ನೆಮಾಡಿದರು.
ಪ್ರತಿಭಟನೆಯಲ್ಲಿಪಾಲ್ಗೊಂಡ ಮಹಿಳೆಯರು ಪಕ್ಷ ರಾಜಕೀಯಬಿಟ್ಟು ಅಧಿಕಾರಿಗಳು ಜನರಸಂಕಷ್ಟಕ್ಕೆ ಕೂಡಲೇ ಸ್ಪಂದಿಸದಿದ್ದರೆ ಜಲಮಂಡಳಿಗೆ ಮುತ್ತಿಗೆ ಹಾಕುವಎಚ್ಚರಿಕೆ ನೀಡಿದರು.
ಈಸಂದರ್ಭದಲ್ಲಿ ಮುಖಂಡರಾದತಿಪ್ಪೇನಹಳ್ಳಿ ಮಂಜುನಾಥ್,ಟ್ರಾವೆಲ್ಮಂಜುನಾಥ, ಕುಮಾರ,ಪುನೀತ್,ಮಾರೇಗೌಡ್ರು,ಸಂತೋಷ ಮತ್ತಿತರಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.
ನೀರು ಬಿಡದೆ ತಾರತಮ್ಯ ಮಾಡುತ್ತಾರೆ. ಎಲ್ಲರೂ ಕಾವೇರಿ ನೀರಿನ ಸಂಪರ್ಕ ಪಡೆದರೂ ಕೂಡ ಸರಿಯಾಗಿ ನೀರು ಬಿಡುತ್ತಿಲ್ಲ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ಬಗ್ಗೆ ಸ್ಪಂದಿಸುತ್ತಿಲ್ಲ
— ಕಾವ್ಯ, ಸ್ಥಳೀಯ ನಿವಾಸಿ