ಮೂಲಸೌಲಭ್ಯ ಕಲ್ಪಿಸಲು ಸರ್ಕಾರ ಬದ್ಧ

ಸುರಪುರ ತಾಲೂಕಿನ ದೇವಾಪುರ ಗ್ರಾಮದಲ್ಲಿ ಮಂಗಳವಾರ ನಿರಂತರ ಕುಡಿಯುವ ನೀರಿನ ಯೋಜನೆಗೆ ಶಾಸಕ ರಾಜಾ ವೇಣುಗೋಪಾಲ ನಾಯಕ ಚಾಲನೆ ನೀಡಿದರು. ಜಿಪಂ ಮಾಜಿ ಅಧ್ಯಕ್ಷ  ರಾಜಶೇಖರಗೌಡ ವಜ್ಜಲ್, ಬ್ಲಾಕ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ವೆಂಕೋಬ ಯಾದವ ಇತರರಿದ್ದರು.
ಸುರಪುರ ತಾಲೂಕಿನ ದೇವಾಪುರ ಗ್ರಾಮದಲ್ಲಿ ಮಂಗಳವಾರ ನಿರಂತರ ಕುಡಿಯುವ ನೀರಿನ ಯೋಜನೆಗೆ ಶಾಸಕ ರಾಜಾ ವೇಣುಗೋಪಾಲ ನಾಯಕ ಚಾಲನೆ ನೀಡಿದರು. ಜಿಪಂ ಮಾಜಿ ಅಧ್ಯಕ್ಷ ರಾಜಶೇಖರಗೌಡ ವಜ್ಜಲ್, ಬ್ಲಾಕ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ವೆಂಕೋಬ ಯಾದವ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ರಾಜಾ ವೇಣುಗೋಪಾಲ ನಾಯಕ ಭರವಸೆ
  • ದೇವಾಪುರದಲ್ಲಿ ಕುಡಿವ ನೀರಿನ ಯೋಜನೆಗೆ ಚಾಲನೆ
ಸುರಪುರ : ಶುದ್ಧ ಕುಡಿಯುವ ನೀರು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು. ಜಲವೇ ಜೀವನ ಎಂಬ ಪರಿಕಲ್ಪನೆ ಸಕಾರಗೊಳಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶಾಸಕ ರಾಜಾ ವೇಣುಗೊಪಾಲ ನಾಯಕ ಹೇಳಿದರು.
ತಾಲೂಕಿನ ದೇವಾಪುರ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (ಆರ್‌ಡಬ್ಲು÷್ಯಎಸ್‌ಡಿ) ಜಿಪಂ ಯಾದಗಿರಿ, ತಾಪಂ ಸುರಪುರ, ಗ್ರಾಮ ಪಂಚಾಯಿತಿಯಿAದ ಮಂಗಳವಾರ ಹಮ್ಮಿಕೊಂಡ ಜಲ ಅರ್ಪಣ ದಿವಸ್ ಕಾರ್ಯಕ್ರಮದಲ್ಲಿ ನಿರಂತರ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಕ್ಷೇತ್ರದ ಪ್ರತಿಯೊಂದು ಗ್ರಾಮ ಮತ್ತು ನಗರ ಪ್ರದೇಶದ ನಾಗರಿಕನಿಗೂ ಸಮರ್ಪಕ ಮತ್ತು ಸುರಕ್ಷಿತ ಕುಡಿಯುವ ನೀರು ಒದಗಿಸುವುದು ಸರ್ಕಾರ ಮತ್ತು ಜನಪ್ರತಿನಿಽಯಾಗಿ ನಮ್ಮ ಮೊದಲ ಆದ್ಯತೆಯಾಗಿದ್ದು, ಗ್ರಾಮಕ್ಕೆ ಈ ಯೋಜನೆ ಮೂಲಕ ಮನೆ ಮನೆಗೂ ಶುದ್ಧ ಕುಡಿಯುವ ನೀರು ತಲುಪುತ್ತಿರುವುದು ಸಂತಸವಾಗಿದೆ. ಹಲವು ವರ್ಷಗಳಿಂದ ಕಾಡುತ್ತಿದ್ದ ಈ ಸಮಸ್ಯೆ ಇಂದು ಶಾಶ್ವತ ಪರಿಹಾರ ದೊರೆತಂತಾಗಿದೆ ಎಂದರು.
ಈ ಯೋಜನೆ ಸರ್ಕಾರದಷ್ಟೇ ಗ್ರಾಮಸ್ಥರ ಆಸ್ತಿಯೂ ಆಗಿದೆ. ಅದರ ಸಮರ್ಪಕ ನಿರ್ವಹಣೆ ಮತ್ತು ಸಂರಕ್ಷಣೆ ಪ್ರತಿಯೊಬ್ಬ ಗ್ರಾಮಸ್ಥರ ಜವಾಬ್ದಾರಿ. ಎಲ್ಲರೂ ಸಹಕಾರದಿಂದ ಮಾತ್ರ ಯೋಜನೆ ಯಶಸ್ಸು ಆಗಲು ಸಾಧ್ಯ. ಗ್ರಾಮ ಶಿಕ್ಷಣ, ಆರೋಗ, ಕೃಷಿ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಇನ್ನಷ್ಟು ಪ್ರಗತಿ ಸಾಽಸಿಲಿ ಎಂದರು.
ಈ ವೇಳೆ ಜಿಪಂ ಮಾಜಿ ಅಧ್ಯಕ್ಷ ರಾಜಶೇಖರಗೌಡ ವಜ್ಜಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ವೆಂಕೋಬ ಯಾದವ, ಮಲ್ಲಣ್ಣ ಮುಧೋಳ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಸನಗೌಡ ಪಾಟೀಲ್ ದೇವಾಪುರ, ತಾಲೂಕು ಪಂಚಾಯತಿ ಕಾರ್ಯನಿವಾರ್ಹಕ ಅಽಕಾರಿ ಬಸವರಾಜ ಸಜ್ಜನ್, ಆರ್‌ಡಬ್ಲ್ಯುಎಸ್‌ಡಿ ಎಇಇ ಎಚ್.ಡಿ.ಪಾಟೀಲ್, ಸೇರಿ ಇಲಾಖೆ ಮತ್ತು ಪಂಚಾಯಿತಿ ಅಽಕಾರಿಗಳು ಸೇರಿ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net