ರೈತರ ಸಮಸ್ಯೆಗೆ ಸ್ಪಂದಿಸದ ಸರ್ಕಾರ

ಕಲಬುರಗಿ ಜಿಲ್ಲೆ ಬರಪೀಡಿತ ಘೋಷಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಶಹಾಬಾದ್​ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಸಂಚಾರ ತಡೆ ನಡೆಸಿ ತಹಸೀಲ್ದಾರ್​ ನೀಲಪ್ರಭ ಬಬಲಾದ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಮಲ್ಲಣ್ಣಗೌಡ ಪಾಟೀಲ್​, ಕುಪೇಂದ್ರ ಕುನ್ನೂರ, ರವಿ ಯರಗೋಳ, ಶಿವಪ್ಪ ಸಣಮೋ, ಕಾಶಿನಾಥ ಜೋಗಿ, ಈಶ್ವರ ಮುಗುಳನಾಗಾವ ಇತರರಿದ್ದರು.
ಕಲಬುರಗಿ ಜಿಲ್ಲೆ ಬರಪೀಡಿತ ಘೋಷಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಶಹಾಬಾದ್​ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಸಂಚಾರ ತಡೆ ನಡೆಸಿ ತಹಸೀಲ್ದಾರ್​ ನೀಲಪ್ರಭ ಬಬಲಾದ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಮಲ್ಲಣ್ಣಗೌಡ ಪಾಟೀಲ್​, ಕುಪೇಂದ್ರ ಕುನ್ನೂರ, ರವಿ ಯರಗೋಳ, ಶಿವಪ್ಪ ಸಣಮೋ, ಕಾಶಿನಾಥ ಜೋಗಿ, ಈಶ್ವರ ಮುಗುಳನಾಗಾವ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘ ಹಸಿರು ಸೇನೆ ಆಕ್ರೋಶ
  • ಶಹಾಬಾದ್​ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತಡೆ
ಶಹಾಬಾದ್​: ಕಲಬುರಗಿ ಜಿಲ್ಲೆ ಬರಪೀಡಿತ ಘೋಷಿಸಿ ಬರ ಪರಿಹಾರ ಕಾಮಗಾರಿ ಆರಂಭಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಪ್ರಧಾನ ಕಾರ್ಯದರ್ಶಿ ಮಲ್ಲಣ್ಣಗೌಡ, ತಾಲೂಕು ಅಧ್ಯಕ್ಷ ಕುಪೇಂದ್ರ ಕುನ್ನೂರ ನೇತೃತ್ವದಲ್ಲಿ ಕೃಷಿಕರು ಎತ್ತು, ಬಂಡಿ ಮತ್ತು ಟ್ರಾಕ್ಟರ್​ಗಳೊಂದಿಗೆ ರಾಷ್ಟ್ರೀಯ ಹೆದ್ದಾರಿ 150ರ ವಾಡಿ ಕ್ರಾಸ್​ ಬಳಿ ಮಂಗಳವಾರ ಸಂಚಾರ ತಡೆ ನಡೆಸಿದರು.
ಮುಂಗಾರು ಮಳೆ ಇಲ್ಲದೆ ರೈತರು ತೀವ್ರ ಸಂಕಷ್ಟದಲ್ಲಿದ್ದರೂ ರಾಜ್ಯ ಸರ್ಕಾರ ನೆರವಿಗೆ ಬರುತ್ತಿಲ್ಲ. ಹೀಗೆ ರ್ನಿಲಕ್ಷ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಅರ್ನಿದಿಷ್ಟಾವಧಿ ಹೋರಾಟ ನಡೆಸುವುದಾಗಿ ಪ್ರಧಾನ ಕಾರ್ಯದರ್ಶಿ ಮಲ್ಲಣ್ಣಗೌಡ ಎಚ್ಚರಿಸಿದರು.
ಸಂದ ಚಿತ್ತಾಪುರ ತಾಲೂಕು ಅಧ್ಯಕ್ಷ ಶಾಮರಾವ ಪಾಟೀಲ್​ ಮಾತನಾಡಿ, ಹಿಂದಿನ ವರ್ಷದ ಬೆಳೆ ವಿಮೆ ಹಣ ರೈತರ ಖಾತೆಗೆ ಕೂಡಲೇ ಜಮೆ ಮಾಡಬೇಕೆಂದು ಆಗ್ರಹಿಸಿದರು.
ಮುಖಂಡರಾದ ಈಶ್ವರ ಮುಗುಳನಾಗಾವ, ರವಿ ಯರಗೋಳ, ಹಾಜಪ್ಪ ರದ್ದೇವಾಡಗಿ, ಕೆ.ರಮೇಶ ಭಟ್ಟ ಮಾತನಾಡಿದರು.
ಸಂದ ತಾಲೂಕು ಅಧ್ಯಕ್ಷ ಕುಪೇಂದ್ರ ಕುನ್ನೂರ, ಪ್ರಮುಖರಾದ ಶ್ರೀಶೈಲ ಪಾಟೀಲ್​, ಅಲ್ಲಾ ಪಟೇಲ್​ ಇಜೇರಿ, ಮರೆಪ್ಪ ಹಸನಾಪುರ, ಮಲ್ಲಣ್ಣ ಸುಣಗಾರ, ಶಿವಪ್ಪ ಸಣಮೋ, ಕಾಶಿನಾಥ ಜೋಗಿ, ವಸಂತ ಕೋಬಾಳ, ಮಲ್ಲು ನಾಯ್ಕೊಡಿ, ಶಿವು ನಾಟಿಕಾರ, ಗುರುನಾಥ ಗುದ್ಗಲ್​, ಮಂಜು ವಾಲೀಕಾರ, ಮಕ್ಬೂಲ್​ ಪಟೇಲ್​ ಇತರರಿದ್ದರು. ಹೋರಾಟ ವೇಳೆ ಅಹಿತಕರ ಟನೆ ನಡೆಯದಂತೆ ಪಿಐ ಪರಶುರಾಮ ವನಂಜಕರ್​ ನೇತೃತ್ವದಲ್ಲಿ ಬಂದೋಬಸ್ತ್​ ಮಾಡಲಾಗಿತ್ತು.
ರೈತರ ಗುಳೆ ತಪ್ಪಿಸಲು ಬರ ಪರಿಹಾರ ಕಾಮಗಾರಿ ಪ್ರಾರಂಭಿಸಬೇಕು. ರಸಗೊಬ್ಬರ, ಬೀಜ ಉಚಿತ ಕೊಡಬೇಕು. ಸಾಲ ಮರುಪಾವತಿಗೆ ಕಾಲಾವಕಾಶ ನೀಡಿ ಬಡ್ಡಿ ಮನ್ನಾ ಮಾಡಬೇಕು. ಕಬ್ಬು ಬೆಳಗಾರರಿಗೆ ಅನುಕೂಲವಾಗಲು ಭೀಮಾ ನದಿಗೆ ಉಜನಿ ಡ್ಯಾಂನಿಂದ 15 ಟಿಎಂಸಿ ನೀರು ಹರಿಸಬೇಕು. ತಾಲೂಕಿನಲ್ಲಿ ಗೋಶಾಲೆ ತೆರೆಯಬೇಕು. ರಾಷ್ಟ್ರೀಕೃತ ಬ್ಯಾಂಕ್​ ಸಾಲದ ದೃಢೀಕರಣ ಕೇಳುವುದನ್ನು ವಿಮಾ ಕಂಪನಿಗಳು ಕೈಬಿಡಬೇಕು. ರಸಗೊಬ್ಬರ ಕಾಳಸಂತೆಯಲ್ಲಿ ಮಾರುತ್ತಿರುವ ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ಬೇಡಿಕೆಗಳ ಮನವಿಪತ್ರವನ್ನು ತಹಸೀಲ್ದಾರ್​ ನೀಲಪ್ರಭ ಬಬಲಾದ ಮೂಲಕ ಡಿಸಿಗೆ ಸಲ್ಲಿಸಲಾಯಿತು.
ರಸ್ತೆಯಲ್ಲಿ ನಿಲ್ಲಿಸಿದ ಬಂಡಿ, ಟ್ರಾಕ್ಟರ್​
ಶಹಾಬಾದ್​ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು ತಮ್ಮ ಎತ್ತು ಬಂಡಿ, ಮೇವು, ಟ್ರ್ಯಾಕ್ಟರ್​ಗಳನ್ನು ಹೆದ್ದಾರಿಯಲ್ಲಿ ನಿಲ್ಲಿಸಿ ಸಂಚಾರ ತಡೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇದರಿಂದಾಗಿ ಕೆಲಕಾಲ ಕಲಬುರಗಿ, ಜೇವರ್ಗಿ, ಚಿತ್ತಾಪುರ, ವಾಡಿ, ಯಾದಗಿ ಮಧ್ಯೆ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net