ಗೌರಿಬಿದನೂರಿನ ತಾಲೂಕು ಕಚೇರಿಯಲ್ಲಿ ಗ್ರೇಡ್ 2ತಹಸೀಲ್ದಾರ್ ಆಶಾಗೆ ಮನವಿ ಸಲ್ಲಿಸಲ್ಲಿಸಲಾಯಿತು. ಪಕ್ಷದ ಜಿಲ್ಲಾ ಕಾರ್ಯದರ್ಶಿ ಜಿ.ಸಿದ್ದಗಂಗಪ್ಪ, ತಾಲೂಕು ಕಾರ್ಯದರ್ಶಿ ಬಿ.ಕೆ.ಬಾಬುರೆಡ್ಡಿ, ವೆಂಕಟಸ್ವಾಮಿ, ನರಸಿಂಹರಾಜು, ಸುಬ್ಬರಾಯಪ್ಪ, ನಾರಾಯಣಪ್ಪ, ಸುನಂದಮ್ಮ, ರಾಮಕೃಷ್ಣಪ್ಪ ಇದ್ದರು.
ಗೌರಿಬಿದನೂರು:ತಾಲೂಕಿನಲ್ಲಿ ಬರ ಪರಿಹಾರವನ್ನು ತುರ್ತಾಗಿ ಜಾರಿಗೊಳಿಸಿ, ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಸಿಪಿಎಂ ಪಕ್ಷದಿಂದ ನಗರದಲ್ಲಿ ಪ್ರತಿಭಟಿಸಲಾಯಿತು.
ಈ ಭಾಗದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಮುಂಗಾರು ಬಿತ್ತನೆ ಸಮರ್ಪಕವಾಗಿ ನಡೆದಿಲ್ಲ. ಶೇ.90 ಬಿತ್ತನೆ ಮಾಡಿಲ್ಲ ಇದರಿಂದ ಕೃಷಿಕರು ಹಾಗೂ ಕೃಷಿ ಕೂಲಿಕಾರರು ತೀವ್ರ ಸಮಸ್ಯೆಗೆ ಗುರಿಯಾಗಿದ್ದಾರೆ.
ಗ್ರಾಮೀಣ ಕುಡಿಯುವ ನೀರು ಅಭಾವ ಎದುರಾಗಿದೆ. ರಾಸುಗಳಿಗೆ ನೀರು, ಮೇವಿನ ಕೊರತೆ ನಿಮಾರ್ಣವಾಗಿದೆ.
ಬಡವರು ಕೆಲಸವಿಲ್ಲದೆ ಜೀವನ ನಿರ್ವಹಣೆಗಾಗಿ ಗೂಳಾಡುತ್ತಿದ್ದು, ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದರೂ ಬರ ಪರಿಹಾರ ಜಾರಿಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಬರಗಾಲದ ನಿಮಿತ್ತ ರೈತರ ಬೆಳೆ ನಾಶಕ್ಕೆ ಎಕರೆಗೆ ಕನಿಷ್ಠ 50,000 ಪರಿಹಾರ ನೀಡಿ, ಸಾಲ ಮನ್ನಾ ಮಾಡಬೇಕು.
ವಲಸೆ ಹೋಗುವುದನ್ನು ತಪ್ಪಿಸಲು ಗ್ರಾಮೀಣ ಬಡವರಿಗೆ ಆಸರೆಯಾಗಿರುವ ಉದ್ಯೋಗ ಖಾತ್ರಿ ಯೋಜನೆ 200 ದಿನ ಉದ್ಯೋಗ ಕೊಡಬೇಕು. ಗ್ರಾಮೀಣ ಕುಡಿಯುವ ನೀರಿನ ಅಭಾವ ನೀಗಿಸಲು ತುರ್ತು ಕ್ರಮ ಜರುಗಿಸಬೇಕು. ಪ್ರಾಣಿಗಳಿಗೆ ಗ್ರಾಪಂ ಕೇಂದ್ರಗಳಲ್ಲಿ ಗೋಶಾಲೆ ಆರಂಭಿಸಿ ಮೇವು ಒದಗಿಸಬೇಕು.
ಬಡವರಿಗೂ ಬಿಪಿಎಲ್ ರೇಷನ್ ಕಾರ್ಡ್ ನೀಡಿ, ದಿನ ಬಳಕೆ ಆಹಾರ ವಸ್ತು ಪಡಿತರ ಅಂಗಡಿಗಳ ಮೂಲಕ ವಿತರಿಸಬೇಕು. ಗ್ರೇಡ್ 2 ತಹಸೀಲ್ದಾರ್ ಆಶಾ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪಕ್ಷದ ಜಿಲ್ಲಾ ಕಾರ್ಯದರ್ಶಿ ಜಿ.ಸಿದ್ದಗಂಗಪ್ಪ, ತಾಲೂಕು ಕಾರ್ಯದರ್ಶಿ ಬಿ.ಕೆ.ಬಾಬುರೆಡ್ಡಿ, ಗಾಯತ್ರಿ ಇದ್ದರು.