ಸಿಎಂ ಮಾತನಾಡಿ, ಪಕ್ಷದ ನಿಲುವು ಸಮಪಾಲು, ಸಮಬಾಳು. ಸಾಮಾಜಿಕ ನ್ಯಾಯಕ್ಕೆ ಬದ್ಧ. ವಿಳಂಬವಾಯಿತು, ಆದರೂ ಐತಿಹಾಸಿಕ ತೀರ್ಮಾನ ಮಾಡಿದ್ದೇವೆ. ಕೊಟ್ಟ ಮಾತನ್ನು ಕಡೆಗೂ ಉಳಿಸಿಕೊಂಡಿದ್ದೇವೆ. ದಲಿತ ಸಮುದಾಯದ ಎಲ್ಲ ಸಂಘಟನೆಗಳೂ ಅಸ್ತು ಎಂದಿವೆ. ಶೇ.17 ಮತ್ತು ಶೇ.7 ಮೀಸಲು ಕೊಡಲು ಸರ್ಕಾರ ಬದ್ಧವಾಗಿದೆ. ಕೋರ್ಟ್ ಒಂದು ವೇಳೆ ನಮ್ಮ ಪರವಾಗಿ ತೀರ್ಪು ಬಂದರೆ ಬ್ಯಾಕ್ ಲಾಗ್ ಎಂದು ತೀರ್ಮಾನ ಮಾಡಲಾಗುತ್ತದೆ ಎಂದರು.