ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಬದ್ಧ

Government committed to providing quality education
Government committed to providing quality education
Published on
ಎಂ.ಎನ್​.ಕೋಟೆ: ಸರ್ಕಾರಿ ಶಾಲೆಗೆ ನೂರು ವರ್ಷ ತುಂಬಿದ ಸಂಭ್ರಮ ನೋಡಿದರೆ ಅತ್ಯಂತ ಖುಷಿ ನೀಡುತ್ತಿದೆ. ಹಾಗಾಗಿ ಮುಂದಿನ ವರ್ಷವೇ ಕೆಪಿಎಸ್​ ಶಾಲೆಯನ್ನಾಗಿ ಮಾಡುತ್ತೇವೆ ಎಂದು ಶಾಸಕ ಎಸ್​.ಆರ್​.ಶ್ರೀನಿವಾಸ್​ ಭರವಸೆ ನೀಡಿದರು.
ಗುಬ್ಬಿ ತಾಲೂಕಿನ ತ್ಯಾಗಟೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶತಮಾನೋತ್ಸವ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, 8.5 ಕೋಟಿ ರೂ. ಅನುದಾನವನ್ನು ಸರ್ಕಾರ ನೀಡುತ್ತಿದ್ದು, ಆ ಹಣದಲ್ಲಿ 19 ಕೊಠಡಿಗಳು ಸೇರಿದಂತೆ ಎಲ್ಲ ರೀತಿಯ ಮೂಲ ಸೌಲಭ್ಯ, ಶಿಕ್ಷಕರು, ಗುಣಮಟ್ಟದ ಶಿಕ್ಷಣವನ್ನು ನೀಡುವುದಕ್ಕೆ ಸರ್ಕಾರ ಬದ್ಧವಾಗಿದೆ. ಎಲ್​ಕೆಜಿ, ಯುಕೆಜಿಯಿಂದ ಆರಂಭವಾಗಿ ದ್ವೀತಿಯ ಪಿಯುಸಿಯ ವರೆಗೂ ಒಂದೇ ಭಾಗದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವುದಕ್ಕಾಗಿ ಕೆಪಿಎಸ್​ ಶಾಲೆಯನ್ನು ತ್ಯಾಗಟೂರು ಗ್ರಾಮಕ್ಕೆ ನೀಡುತ್ತಿದೆ ಎಂದರು.
ಹಿಂದುಳಿದ ಆಯೋಗದ ಮಾಜಿ ಸದಸ್ಯ ಯೋಗಾನಂದ್​ ಕುಮಾರ್​ ಮಾತನಾಡಿ, ನಮ್ಮೂರಿನ ಶಾಲೆಗೆ ನೂರು ವರ್ಷ ತುಂಬಿದ್ದು, ಹಳೆಯ ವಿದ್ಯಾರ್ಥಿಗಳು, ಈಗಿನ ವಿದ್ಯಾರ್ಥಿಗಳು, ಶಿಕ್ಷಕರು ಎಲ್ಲರೂ ಸೇರಿ ದೊಡ್ಡ ಮಟ್ಟದಲ್ಲಿ ಶತಮಾನೋತ್ಸವ ಆಚರಣೆ ಮಾಡುತ್ತಿದ್ದಾರೆ, ಇದು ಬೇರೆ ಶಾಲೆಗಳಿಗೆ ಮಾದರಿ ಹಾಗೂ ಆದರ್ಶವಾಗುತ್ತದೆ ಎಂದು ತಿಳಿಸಿದರು.
ಡಾ.ನಾಗಭೂಷಣ್​ ಮಾತನಾಡಿ, ನಾವು ಸಹ ಆಸ್ಪತ್ರೆಯಿಂದ ಸುಗ್ಗನ ಪಾಳ್ಯ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಕೆಲಸವನ್ನು ಮಾಡುತ್ತಿದ್ದು, ಕಳೆದ ಮೂರು ವರ್ಷದಿಂದ ದಾಖಲಾತಿಯಲ್ಲಿ ಹೆಚ್ಚಳವಾಗಿದೆ ಎಂದರು.
ಸದಸ್ಯರಾದ ಭವ್ಯ ಪರಮೇಶ್​ ,ವಿಜಯಲಕ್ಷ್ಮೀ, ವಿಎಸ್​ಎಸ್​ಎನ್​ ಅಧ್ಯಕ್ಷ ಚಿದ್ದಾನಂದ್​, ಎಸ್​ಡಿಎಂಸಿ ಅಧ್ಯಕ್ಷ ದಯಾನಂದ್​, ಮುಖ್ಯಶಿಕ್ಷಕ ಇಂದ್ರಾಣಿ, ಶಿಕ್ಷಕರಾದ ಉಮೇಶ್​, ವಂಧನಾ, ಉಮಾಮಹೇಶ್​ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net