ಪ್ರತಿಯೊಬ್ಬರಿಗೂ ಸರ್ಕಾರಿ ಸೌಲಭ್ಯ ಸಿಗಲಿ

ಮುನವಳ್ಳಿ ಪುರಸಭೆ ವತಿಯಿಂದ ಫಲಾನುಭವಿಗಳಿಗೆ ಶಾಸಕ ವಿಶ್ವಾಸ ವೈದ್ಯ ಹೊಲಿಗೆ ಯಂತ್ರಗಳನ್ನು ವಿತರಿಸಿದರು. ರವೀಂದ್ರ ಯಲಿಗಾರ, ಎಂ.ಆರ್.ಗೋಪಶೆಟ್ಟಿ, ಈಶ್ವರ ಕರೀಕಟ್ಟಿ, ಡಿ.ಡಿ.ಕಿನ್ನೂರಿ, ಚಂದ್ರು ಪೂಜೇರ ಇತರರಿದ್ದರು.
ಮುನವಳ್ಳಿ ಪುರಸಭೆ ವತಿಯಿಂದ ಫಲಾನುಭವಿಗಳಿಗೆ ಶಾಸಕ ವಿಶ್ವಾಸ ವೈದ್ಯ ಹೊಲಿಗೆ ಯಂತ್ರಗಳನ್ನು ವಿತರಿಸಿದರು. ರವೀಂದ್ರ ಯಲಿಗಾರ, ಎಂ.ಆರ್.ಗೋಪಶೆಟ್ಟಿ, ಈಶ್ವರ ಕರೀಕಟ್ಟಿ, ಡಿ.ಡಿ.ಕಿನ್ನೂರಿ, ಚಂದ್ರು ಪೂಜೇರ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಮುನವಳ್ಳಿ
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆ ತಲುಪಬೇಕು ಎನ್ನುವುದೇ ನಮ್ಮೆಲ್ಲರ ಮುಖ್ಯ ಉದ್ದೇಶವಾಗಿದೆ. ಸರ್ಕಾರದಿಂದ ಸಿಗುವ ಇಂತಹ ಸೌಲಭ್ಯಗಳನ್ನು ಲಾನುಭವಿಗಳು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಪಟ್ಟಣದ ಪುರಸಭೆ ವತಿಯಿಂದ ನಗರೋತ್ಥಾನ ಯೋಜನೆಯಡಿ ಫಲಾನುಭವಿಗಳಿಗೆ ಬುಧವಾರ ವಿವಿಧ ವೈಯಕ್ತಿಕ ಸೌಲಭ್ಯಗಳ ವಿತರಿಸಿ ಮಾತನಾಡಿ, ನಗರೋತ್ಥಾನ ಅನುದಾನ ಕೇವಲ ರಸ್ತೆ, ಚರಂಡಿ ನಿರ್ಮಾಣಕ್ಕೆ ಮಾತ್ರ ಸೀಮಿತಗೊಳಿಸದೆ, ಅರ್ಹ ಬಡ ಕುಟುಂಬಗಳ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕಾಗಿ ವೈಯಕ್ತಿಕ ಸೌಲಭ್ಯ ನೀಡಲಾಗುತ್ತಿದೆ ಎಂದರು.
ಪುರಸಭೆ ಅಧ್ಯಕ್ಷ ಈಶ್ವರ ಕರೀಕಟ್ಟಿ ಮಾತನಾಡಿ, 221 ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ಸೋಲಾರ್ ಲ್ಯಾಂಪ್, ಲ್ಯಾಪ್ಟಾಪ್, ಯಂತ್ರಚಾಲಿತ ತ್ರಿಚಕ್ರ ವಾಹನ, ವಿದ್ಯಾರ್ಥಿ ವೇತನ ವಿತರಿಸಲಾಗಿದೆ ಎಂದರು.
ಎಪಿಎಂಸಿ ಅಧ್ಯಕ್ಷ ಚಂದ್ರು ಪೂಜೇರ ಮಾತನಾಡಿದರು. ಕಾಂಗ್ರೆಸ್ ಮುಖಂಡ ರವೀಂದ್ರ ಯಲಿಗಾರ, ಎಂ.ಆರ್.ಗೋಪಶೆಟ್ಟಿ, ಪುರಸಭೆ ಉಪಾಧ್ಯಕ್ಷ ಡಿ.ಡಿ.ಕಿನ್ನೂರಿ, ಪುರಸಭೆ ಸದಸ್ಯರಾದ ಮೀರಾಸಾಬ್ ವಟ್ನಾಳ, ಶ್ರೀಶೈಲ ನೇಗಿನಹಾಳ, ಸಮೀವುಲ್ಲಾ ಚೂರಿಖಾನ್, ವಿನಾಯಕ ಕಟ್ಟೇಕಾರ, ಪಂಚು ಬಾರಕೇರ, ಹಣಮಂತ ಹಿರೇಮೇತ್ರಿ, ಪುರಸಭೆ ಮುಖ್ಯಾಧಿಕಾರಿ ಎಂ.ಎಂ.ತಿಮ್ಮಾಣಿ, ಕಂದಾಯ ಅಧಿಕಾರಿ ಅನಿಲ ಗಿಡ್ನಂದಿ, ಬಸವರಾಜ ಹಲಗಿ, ಮಧು ಕೌಜಲಗಿ, ಯಲ್ಲಪ್ಪ ಭಜಂತ್ರಿ, ಶ್ರೀಶೈಲ ಹಿರೇಮಠ, ಎಂ.ಮಹೇಶ, ಮೃತ್ಯುಂಜಯ ಹಿರೇಮಠ, ವೀರೂ ಹೂಲಿ, ಸುರೇಶ ಮಾನೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net