ಸ್ವಾವಲಂಬಿ ಜೀವನಕ್ಕೆ ಸರ್ಕಾರ ನೆರವು / SARJAPUR

ಸರ್ಜಾಪುರದಲ್ಲಿ ಆಯೋಜಿಸಿದ್ಗದ ಮಹಿಳಾ ದಿನಾಚರಣೆಯಲ್ಲಿ ಕಾಂಗ್ರೆಸ್​ ಮಹಿಳಾ ಘಟಕದ ಅಧ್ಯೆ ಸೌಮ್ಯಾ ರೆಡ್ಡಿ, ಮುಖಂಡರಾದ ಸರಸ್ವತಿ ಬಿ.ಶಿವಣ್ಣ, ಹುಸ್ಕೂರು ಮದ್ದೂರಪ್ಪ, ಎ.ಸತೀಶ್​ ಕುಮಾರ್​, ಉಲ್ಲಾಸ್​ ಬಿ.ಶಿವಣ್ಣ, ಮಮತಾ ರಮೇಶ್​, ಶ್ರೀದೇವಿ ಮದ್ದೂರಪ್ಪ, ರತ್ನಮ್ಮ ಶ್ರೀರಾಮುಲು ಇದ್ದರು.
ಸರ್ಜಾಪುರದಲ್ಲಿ ಆಯೋಜಿಸಿದ್ಗದ ಮಹಿಳಾ ದಿನಾಚರಣೆಯಲ್ಲಿ ಕಾಂಗ್ರೆಸ್​ ಮಹಿಳಾ ಘಟಕದ ಅಧ್ಯೆ ಸೌಮ್ಯಾ ರೆಡ್ಡಿ, ಮುಖಂಡರಾದ ಸರಸ್ವತಿ ಬಿ.ಶಿವಣ್ಣ, ಹುಸ್ಕೂರು ಮದ್ದೂರಪ್ಪ, ಎ.ಸತೀಶ್​ ಕುಮಾರ್​, ಉಲ್ಲಾಸ್​ ಬಿ.ಶಿವಣ್ಣ, ಮಮತಾ ರಮೇಶ್​, ಶ್ರೀದೇವಿ ಮದ್ದೂರಪ್ಪ, ರತ್ನಮ್ಮ ಶ್ರೀರಾಮುಲು ಇದ್ದರು.
Published on
ಸರ್ಜಾಪುರ : ಮಹಿಳೆಯರು ಆರೋಗ್ಯವಾಗಿದ್ದಾಗ ಮಾತ್ರ ಶೈಕ್ಷಣಿಕ, ಆರ್ಥಿಕವಾಗಿ ಸಬಲರಾಗಲು ಸಾಧ್ಯ. ಆದ್ದರಿಂದ ಮಹಿಳೆಯರು ಆರೋಗ್ಯದತ್ತ ಹೆಚ್ಚು ಗಮನಹರಿಸಬೇಕು ಎಂದು ಕಾಂಗ್ರೆಸ್​ ಮಹಿಳಾ ಘಟಕದ ಅಧ್ಯೆ ಸೌಮ್ಯಾ ರೆಡ್ಡಿ ಹೇಳಿದರು.
ಸರ್ಜಾಪುರದ ಡಾ. ಅಂಬೇಡ್ಕರ್​ ಆಟದ ಮೈದಾನದಲ್ಲಿ ವುಮೆನ್ಸ್​ ಸೋಲ್​ ಸ್ಪಿರಿಟ್​ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮಾತನಾಡಿ, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ಅವಕಾಶ ಕಲ್ಪಿಸಿದೆ. ರಾಜ್ಯದ 1.28 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು ಗೃಹಲಕ್ಷಿ$್ಮ ಮೂಲಕ 2 ಸಾವಿರ ರೂ., ಶಕ್ತಿ ಯೋಜನೆ ಮೂಲಕ ಉಚಿತ ಬಸ್​ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ. ಆ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸರ್ಕಾರ ಕೈಜೋಡಿಸಿದೆ ಎಂದರು.
ವುಮೆನ್​ ಸೋಲ್​ ಸ್ಪಿರಿಟ್​ ಸಂಸ್ಥೆ ಮುಖ್ಯಸ್ಥೆ ಮಮತಾ ಎಸ್​.ವೈ ಶಂಭಯ್ಯ ಮಾತನಾಡಿ, ಸೀರೆ ತೊಟ್ಟು ಮಹಿಳೆಯರು ರ್ಯಾಂಪ್​ ಮೂಲಕ ಸಂಸತಿ ಮತ್ತು ಪರಂಪರೆ ಸಾರಿದ್ದಾರೆ. ಗ್ರಾಮೀಣ ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗಿರದೇ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಪ್ರಯತ್ನಿಸಬೇಕಿದೆ ಎಂದು ಹೇಳಿದರು.
ಫ್ಯಾಷನ್​ ಶೋ, ಬೈಕ್​ ರೇಸ್​, ಸ್ಯಾರಿ ವಾಕಥಾನ್​ ಸ್ಪರ್ಧೆ ಆಯೋಜಿಸಿ ಗೆದ್ದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ಬಿಗ್​ಬಾಸ್​ ಖ್ಯಾತಿಯ ಗಿಲ್ಲಿ ನಟ ಭಾಗವಹಿಸಿದ್ದರು. ಸರ್ಜಾಪುರ ಗ್ರಾಪಂ ಮಾಜಿ ಅಧ್ಯಕ್ಷ ಎಸ್​. ವೈ. ಶಂಭಯ್ಯ, ಮುಖಂಡರಾದ ಸುಜಾತಾ ನಾಗರಾಜು, ಡಾ.ರಾಧಿಕಾ ದೇವಿ, ಪೂಜಾ ಚಂದ್ರ, ನಸೀಬ್​ ಹುನ್ನೀಸಾ, ಗಾಯತ್ರಿ, ಚಂದ್ರಕಲಾ, ಸೌಮ್ಯಾ ಹರೀಶ್​, ದುರ್ಗಾ ದೇವಿ, ಸುಶೀಲಮ್ಮ, ನಾಗವೇಣಿ, ಹೇಮಲತಾ, ಮಮತಾ ಮಂಜುನಾಥ್​, ರೇಷ್ಮೆ ಪ್ರಶಾಂತ್​, ಸರಸ್ವತಿ ಜನಾರ್ದನ್​, ಅಂಬುಜಮ್ಮ, ಗೀತಾ ಲಕ್ಷಿ$್ಮ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net