ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ಮಹಾದೇವ ಅಭಿಷೇಕ, ಹೋಮ, ಹವನ ಕಾರ್ಯಕ್ರಮ ಜರುಗಿದವು. ಗ್ರಾಮದ ಶ್ರೀ ಸಿದ್ಧರಾಮೇಶ್ವರ ಮಠದಿಂದ ಶ್ರೀ ಮಹಾದೇವ ದೇವಸ್ಥಾನದವರೆಗೆ ಪಲ್ಲಕ್ಕಿ ಉತ್ಸವ ಮತ್ತು ಭವ್ಯ ಮೆರವಣಿಗೆ ನಡೆಯಿತು. ಕುಂಭ ಕಲಶ ಹೊತ್ತ ಮಹಿಳೆಯರ, ಮಕ್ಕಳ, ಯುವಕರ ಮತ್ತು ಪುರವಂತರ ಜಾನಪದ ಕಲಾ ತಂಡಗಳ ನೃತ್ಯ ಪ್ರದರ್ಶನ ಈ ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು. ನಂತರ ದೇವಸ್ಥಾನದ ಆವರಣದಲ್ಲಿ ಅಗ್ನಿ ಪೂಜೆ ಮತ್ತು ಇಡೀ ರಾತ್ರಿ ಭಜನಾ ಕಾರ್ಯಕ್ರಮ ನಡೆಯಿತು.