ಈ ಹಿಂದೆ ಕ್ರಿಸ್‌ಮಸ್ ಸೇರಿ ಹಲವು ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಈ ಮಾರ್ಗದಲ್ಲಿ ಪ್ರಾಯೋಗಿಕವಾಗಿ ರೈಲು ಸೇವೆ ಆರಂಭಿಸಲಾಗಿತ್ತು. ಪರಿಣಾಮ ಜನರಿಂದ ವ್ಯಾಪಕವಾಗಿ ಸ್ಪಂದನೆ ವ್ಯಕ್ತವಾಯಿತಲ್ಲದೇ ಆಯಾ ಭಾಗದ ಸಂಸದರು, ರೈಲ್ವೆ ಮಂತ್ರಿ ಮತ್ತು ಪ್ರಧಾನಿ ಮೋದಿ ಸರ್ಕಾರದ ಕಾರ್ಯವನ್ನು ಕೊಂಡಾಡಿದ್ದರು. ಜನರ ಈ ನಾಡಿಮಿಡಿತ ಅರಿತು ಈ ಮಾರ್ಗವನ್ನು ಶಾಶ್ವತಗೊಳಿಸುವಂತೆ ದುಂಬಾಲು ಬಿದ್ದ ಫಲವಾಗಿ ರೈಲ್ವೆ ಮಂತ್ರಿಗಳು ವಿಶೇಷ ಕಾಳಜಿ ಮತ್ತು ಮುತುವರ್ಜಿ ವಹಿಸಿದ್ದಾರೆಂದು ತಿಳಿದು ಬಂದಿದೆ.